Home ಕ್ರೈಂ ನ್ಯೂಸ್ ಪ್ರಭಾವಿ ಶಾಸಕರು, ಸಂಸದ, ಮಾಡೆಲ್ ಗಳು, ನಟಿಯರ ಹೆಸರು: ಉದ್ಯಮಿ ರಾಯ್ ಡೈರಿಯಲ್ಲಿ ಸ್ಫೋಟಕ ಮಾಹಿತಿ ಬಯಲು!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರುವಾಣಿಜ್ಯ

ಪ್ರಭಾವಿ ಶಾಸಕರು, ಸಂಸದ, ಮಾಡೆಲ್ ಗಳು, ನಟಿಯರ ಹೆಸರು: ಉದ್ಯಮಿ ರಾಯ್ ಡೈರಿಯಲ್ಲಿ ಸ್ಫೋಟಕ ಮಾಹಿತಿ ಬಯಲು!

Share
ಶಾಸಕ
Share

ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿಯಾದ ಕಾನ್ಫಿಡಂಟ್ ಗ್ರೂಪ್ ಮುಖ್ಯಸ್ಥ ಸಿ. ಜೆ. ರಾಯ್ ಪಿಸ್ತೂಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.

ಆದಾಯ ಇಲಾಖೆ ಅಧಿಕಾರಿಗಳ ದಾಳಿ ವೇಳೆಯೇ ಆತ್ಮಹತ್ಯೆಗೆ ಶರಣಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ರಾಯ್ ಆತ್ಮಹತ್ಯೆ ವಿಚಾರ ಹಲವು ಗೊಂದಲ, ಗೋಜಲು, ಅನುಮಾನ, ಆಘಾತ ಸೇರಿದಂತೆ ಹಲವು ರೀತಿಯಲ್ಲಿ ಗಮನ ಸೆಳೆದಿದೆ. ಸಾವಿರಾರು ಕೋಟಿ ರೂಪಾಯಿಗಳ ಸಾಮ್ರಾಜ್ಯ ಹೊಂದಿದ್ದ ದೊರೆ ಆತ್ಮಹತ್ಯೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ರಾಯ್ ಅವರಿಗೆ ಡೈರಿ ಬರೆಯುವ ಅಭ್ಯಾಸ ಇತ್ತು. ಈ ಡೈರಿಯಲ್ಲಿ ಬೆಂಗಳೂರು ಮತ್ತು ಕೋಲಾರದ ಪ್ರಭಾವಿ ಶಾಸಕರಿಬ್ಬರ ಹೆಸರು, ಸಂಸದರ ಹೆಸರು, ನಟಿಯರು, ಮಾಡೆಲ್ ಗಳ ಹೆಸರು ಬರೆದಿದ್ದಾರೆ ಎನ್ನಲಾಗಿದೆ. ಈ ಡೈರಿಯಲ್ಲಿ ಬರೆದಿರುವ ಶಾಸಕರು, ಸಂಸದರು ಮತ್ತು ರೂಪದರ್ಶಿಯರು, ನಟಿಯರಿಗೆ ಢವಢವ ಶುರುವಾಗಿದೆ. ಇವರ ಕಿರುಕುಳ ಇತ್ತೇ, ಆಗು ಹೋಗುಗಳ ಬಗ್ಗೆ ಮಾತ್ರ ಬರೆದಿದ್ದರೇ, ಹಣಕಾಸಿನ ವಹಿವಾಟು ಇತ್ತೇ, ಬೆದರಿಸಲಾಗಿತ್ತೇ ಎಂಬುದೂ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪ್ರಕರಣದ ಪ್ರಮುಖ ಮುಖ್ಯಾಂಶಗಳು

  • ಡೈರಿಯಲ್ಲಿನ ಸ್ಫೋಟಕ ಮಾಹಿತಿ:

  • ರಾಯ್ ಅವರು ಬರೆಯುತ್ತಿದ್ದ ಡೈರಿಯಲ್ಲಿ ಬೆಂಗಳೂರು ಮತ್ತು ಕೋಲಾರದ ಇಬ್ಬರು ಪ್ರಭಾವಿ ಶಾಸಕರು, ಸಂಸದರು, ನಟಿಯರು ಹಾಗೂ ಮಾಡೆಲ್‌ಗಳ ಹೆಸರು ಉಲ್ಲೇಖವಾಗಿದೆ ಎನ್ನಲಾಗಿದೆ. ಇದು ರಾಜಕೀಯ ಮತ್ತು ಚಿತ್ರರಂಗದಲ್ಲಿ ನಡುಕ ಹುಟ್ಟಿಸಿದೆ.

  • ತನಿಖೆಯ ಆಯಾಮಗಳು:

  • ಪೊಲೀಸರು ಈಗ ಈ ಡೈರಿಯನ್ನು ಆಧರಿಸಿ ತನಿಖೆ ನಡೆಸುತ್ತಿದ್ದಾರೆ. ಆ ವ್ಯಕ್ತಿಗಳಿಂದ ರಾಯ್ ಅವರಿಗೆ ಕಿರುಕುಳ ಇತ್ತೇ? ಹಣಕಾಸಿನ ವ್ಯವಹಾರಗಳಿವೆಯೇ? ಅಥವಾ ಬೆದರಿಕೆ ಹಾಕಲಾಗಿತ್ತೇ? ಎಂಬುದು ತನಿಖೆಯ ಮುಖ್ಯ ವಿಷಯವಾಗಿದೆ.

  • ಸಿದ್ದಾರ್ಥ್ ಸಾವಿನೊಂದಿಗೆ ಹೋಲಿಕೆ:

  • ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ದಾರ್ಥ್ ಅವರಂತೆಯೇ ರಾಯ್ ಕೂಡ ವ್ಯವಸ್ಥೆಯ ಒತ್ತಡ ಅಥವಾ ಐಟಿ (IT) ದಾಳಿಯ ಭೀತಿಯಿಂದ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ.

  • ಕಲೆ ಮತ್ತು ಚಿತ್ರರಂಗಕ್ಕೆ ಕೊಡುಗೆ:

  • ರಾಯ್ ಅವರು ಕೇವಲ ಉದ್ಯಮಿಯಾಗಿರದೆ, ಕನ್ನಡ ಚಿತ್ರರಂಗದ ಕಷ್ಟದ ಕಾಲದಲ್ಲಿ ಬೆನ್ನೆಲುಬಾಗಿ ನಿಂತವರು. ರವಿಚಂದ್ರನ್, ರಮೇಶ್ ಅರವಿಂದ್, ಕೋಮಲ್ ಮುಂತಾದವರ ಚಿತ್ರಗಳಿಗೆ ಹಾಗೂ ‘ಬಿಗ್ ಬಾಸ್’ ಅಂತಹ ರಿಯಾಲಿಟಿ ಶೋಗಳಿಗೆ ದೊಡ್ಡ ಮಟ್ಟದ ಬೆಂಬಲ ನೀಡಿದ್ದರು.

ಕೇರಳ ಮೂಲದ ರಾಯ್ ಅವರು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್, ರೆಸಾರ್ಟ್, ಹೊಟೇಲ್ ಗಳು, ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದರಲ್ಲದೇ, ಕೇರಳದಲ್ಲಿಯೂ ಹಲವು ಉದ್ಯಮ ಹೊಂದಿದ್ದರು. ಕುಟುಂಬದವರ ಪ್ರಕಾರ ಪದೇ ಪದೇ ಐಟಿ ದಾಳಿ ನಡೆಯುತ್ತಿದ್ದರಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಖಚಿತತೆ ಇಲ್ಲ.

ಸಿದ್ಧಾರ್ಥ ಹಿಂಬಾಲಿಸಿದ ರಾಯ್:

ಒಬ್ಬ ಕಾಫಿ ಘಮಲಿನಲ್ಲಿ ಜಗತ್ತನ್ನೇ ಗೆದ್ದಿದ್ದ ‘ಕಾಫಿ ಕಿಂಗ್’ ಸಿದ್ದಾರ್ಥ್. ಇನ್ನೊಬ್ಬ ಸಿಮೆಂಟ್-ಕಾಂಕ್ರೀಟ್ ಕಾಡಿನಲ್ಲಿ ಸಾಮ್ರಾಜ್ಯ ಕಟ್ಟಿದ್ದ ‘ರಿಯಲ್ ಎಸ್ಟೇಟ್ ಸುಲ್ತಾನ’ ಸಿಜೆ ರಾಯ್. ಇಬ್ಬರದ್ದು ಬೇರೆ ಬೇರೆ ದಾರಿ, ಆದ್ರೆ ಸೇರಿದ್ದು ಮಾತ್ರ ಆತ್ಮಹತ್ಯೆ ಎಂಬ ಶೂಲದ ಮೂಲಕ ಸಾವಿನ ಮನೆಗೆ.

ಕನ್ನಡವೆಂದರೆ ಪಂಚಪ್ರಾಣ. ಕೇರಳದವರಾದ್ರೂ ರಾಯ್ ಗೆ ಸುಮ್ನೆ ದುಡ್ಡು ಮಾಡಿ ಕೇರಳಕ್ಕೆ ಹೋಗ್ಲಿಲ್ಲ. ಗಾಂಧಿನಗರದ ಕಷ್ಟದ ಕಾಲದಲ್ಲಿ ಹೆಗಲು ಕೊಟ್ರು.ಕ್ರೇಜಿಸ್ಟಾರ್ ರವಿಚಂದ್ರನ್ ಅವರ ‘ಕ್ರೇಜಿ ಲೋಕ’ ಸಿನಿಮಾ ನಿರ್ಮಾಣ ಮಾಡಿದ್ದು ಯಾರು? ಇದೇ ರಾಯ್!ರಮೇಶ್ ಅರವಿಂದ್ ಅವರ ‘ಪ್ರೀತಿಯಿಂದ ರಮೇಶ್’ ಮತ್ತು ‘ರಂಗಪ್ಪ ಹೋಗ್ಬಿಟ್ನ’ ಸಿನಿಮಾಗೆ ದುಡ್ಡು ಹಾಕಿದ್ರು.ಕೋಮಲ್ ಅವರ ‘ರಾಧಾನ ಗಂಡ’ ಸಿನಿಮಾಕ್ಕೂ ಇವರೇ ಬೆನ್ನೆಲುಬು. ಹೀಗೆ ಬಿದ್ದವರನ್ನು ಮೇಲೆತ್ತೋ ಜಾಯಮಾನ ಇವರದ್ದು.

ಕಿಚ್ಚ ಸುದೀಪ್ ಅವರ ‘ಬಿಗ್ ಬಾಸ್’ ಆರಂಭದ ಸೀಸನ್ ಗಳಲ್ಲಿ, ಬರೀ ಸ್ಪಾನ್ಸರ್ ಆಗಿ ದುಡ್ಡು ಕೊಡದೆ, ಆ ಶೋನ ಅದ್ದೂರಿಯಾಗಿ ನಡೆಸೋಕೆ ಬೆನ್ನೆಲುಬಾಗಿ ನಿಂತಿದ್ದು ಇದೇ ಸಿಜೆ ರಾಯ್! ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಇರಲಿ, ಅಥವಾ ಸ್ಟಾರ್ ಸುವರ್ಣದ ರಿಯಾಲಿಟಿ ಶೋಗಳಿರಲಿ… ನಿರ್ಮಾಪಕರು ಕಷ್ಟ ಅಂತ ಬಂದ್ರೆ, ಚೆಕ್ ಬುಕ್ ತೆಗೆದು ಸಹಿ ಹಾಕ್ತಿದ್ರು. “ಕಲೆ ಬೆಳಿಬೇಕು ಬಾಸ್” ಅನ್ನೋದು ಅವರ ಪಾಲಿಸಿ ಆಗಿತ್ತು.

ರಿಯಾಲಿಟಿ ಶೋಗಳಲ್ಲಿ ಗೆದ್ದವರಿಗೆ ಬರೀ ಚೆಕ್ ಕೊಡೋದು, ಹೂವಿನ ಹಾರ ಹಾಕೋದು ಕಾಮನ್. ಆದ್ರೆ ರಾಯ್ ಸ್ಟೈಲೇ ಬೇರೆ. ಜೀ ಕನ್ನಡದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋನಲ್ಲಿ, ಬಡತನದಲ್ಲಿದ್ದ ಒಬ್ಬ ಅದ್ಭುತ ಪ್ರತಿಭೆಯನ್ನು ನೋಡಿ ತಡ್ಕೊಳೋಕೆ ಆಗಲಿಲ್ಲ. ನೇರವಾಗಿ ವೇದಿಕೆಗೇ ಬಂದು, “ತಗೋಳಪ್ಪಾ, ನನ್ ಕಡೆಯಿಂದ ನಿನಗೊಂದು ಫ್ಲಾಟ್ ” ಅಂತ ಲಕ್ಷಾಂತರ ರೂಪಾಯಿ ಬೆಲೆ ಬಾಳೋ ಮನೆಯ ಕೀ ಎಸೆದಿದ್ರು! ಟಿವಿ ಇತಿಹಾಸದಲ್ಲೇ ಅಂತ ಕೆಲಸ ಯಾರೂ ಮಾಡಿರಲಿಲ್ಲ.

ಇವತ್ತು ನೀವು ಯಾವುದೇ ಲೇಔಟ್ ಗೆ ಹೋದ್ರೂ ಕಾಂಕ್ರೀಟ್ ರಸ್ತೆ ನೋಡ್ತೀರಾ. ಆದ್ರೆ ಬೆಂಗಳೂರಿನ ಪ್ರೈವೇಟ್ ಲೇಔಟ್ ಗಳಲ್ಲಿ ಈ ಕಾನ್ಸೆಪ್ಟ್ ತಂದಿದ್ದೇ ಸಿಜೆ ರಾಯ್! “ಟಾರ್ ರಸ್ತೆ ಮಳೆ ಬಂದ್ರೆ ಹಾಳಾಗುತ್ತೆ, ನನ್ನ ಕಸ್ಟಮರ್ಸ್ ಗೆ ಧೂಳು ಬರಬಾರದು” ಅಂತ ಸ್ವಂತ ಖರ್ಚಲ್ಲಿ ಕಾಂಕ್ರೀಟ್ ರಸ್ತೆ ಹಾಕಿ ಟ್ರೆಂಡ್ ಸೆಟ್ ಮಾಡಿದ್ರು.

ಬೆಂಗಳೂರಿನ ಕಾರ್ಪೊರೇಟ್ ಜಗತ್ತನ್ನೇ ನಡುಗಿಸಿದ ಈ ಎರಡು ಸಾವುಗಳನ್ನ ಪಕ್ಕ ಪಕ್ಕ ಇಟ್ಟು ನೋಡಿದ್ರೆ, ಮೈ ಜುಮ್ ಅನ್ನುವಂತ ಸತ್ಯಗಳು ಹೊರಬರುತ್ತವೆ. ಇವರ ಸಾವಿನ ಹಿಂದೆ ಇದ್ದದ್ದು ಬರೀ ಸಾಲನಾ? ಅಥವಾ ‘ಸಿಸ್ಟಮ್’ ಎಂಬ ಕಬಂಧಬಾಹುನಾ? ಎಂಬ ಅನುಮಾನವೂ ಕಾಡಲಾರಂಭಿಸಿದೆ.

“ನಾನು ಸೋತು ಹೋದೆ” ಅಂತ ಬರೆದಿದ್ರು. ಸಿದ್ದಾರ್ಥ ಆಗಲಿ, ಸಿಜೆ ರಾಯ್ ಆಗಲಿ… ಇವರಿಗೆ ಸಾಲ ಅನ್ನೋದು ದೊಡ್ಡ ವಿಷ್ಯ ಆಗಿರಲಿಲ್ಲ. ಸಾವಿರ ಕೋಟಿ ಆಸ್ತಿ ಇದ್ದೋರಿಗೆ ನೂರು ಕೋಟಿ ಸಾಲ ಏನ್ ಮಹಾ?ಆದ್ರೆ, ಯಾವಾಗ ಈ ‘ಸಿಸ್ಟಮ್’ (System) ಕುತ್ತಿಗೆ ಪಟ್ಟಿ ಹಿಡಿಯೋಕೆ ಬರುತ್ತೋ, ಯಾವಾಗ ಈ ಐಟಿ (IT) ಮತ್ತು ಇಡಿ (ED)ಯಂಥ ಸಂಸ್ಥೆಗಳು ಬಾಗಿಲು ಬಡಿಯುವ ಮುನ್ಸೂಚನೆ ಸಿಗುತ್ತೋ… ಆಗ ಹುಟ್ಟುತ್ತೆ ನೋಡಿ ಭಯ! ಒಬ್ಬ ಉದ್ಯಮಿಗೆ ‘ಜೈಲು’ ಅನ್ನೋದಕ್ಕಿಂತ, ಸಮಾಜದ ಮುಂದೆ ತಲೆ ತಗ್ಗುಸೋದು ಇದೆಯಲ್ಲ? ಅದು ಸಾವಿಗಿಂತ ನರಕ! ಎಂದು ಹೇಳಲಾಗುತ್ತಿದೆ.

ರೋಲ್ಸ್ ರಾಯ್ಸ್ ಕಾರಲ್ಲಿ ಓಡಾಡುತ್ತಿದ್ದ ರಾಯ್ ಗೆ, ಅಥವಾ ಸಾವಿರಾರು ಎಕರೆ ಕಾಫಿ ತೋಟದ ಒಡೆಯ ಸಿದ್ದಾರ್ಥಗೆ, ನಾಳೆ ಪೊಲೀಸರು ಬಂದು ಕೈಗೆ ಕೋಳ ಹಾಕಿದರೆ?ಈ ಇಡಿ ಮತ್ತು ಐಟಿ ರೇಡ್ ಗಳು ಹೇಗಿರುತ್ತೆ ಅಂದ್ರೆ, ವ್ಯಕ್ತಿ ಸಾಯುವ ಮುನ್ನವೇ ಅವನ ಮಾನ ಮರ್ಯಾದೆಯನ್ನ ಬೀದಿಯಲ್ಲಿ ಹಾರಾಜಿಗಿಟ್ಟು ಬಿಡ್ತಾರೆ. ಸಿದ್ದಾರ್ಥ ಹೆದರಿದ್ದು ಇದೇ ಅವಮಾನಕ್ಕೆ. ಸಿಜೆ ರಾಯ್ ಕುಗ್ಗಿ ಹೋಗಿದ್ದು ಇದೇ ಒತ್ತಡಕ್ಕೆ. “ನಾನು ಕಳ್ಳನಲ್ಲ, ಆದ್ರೆ ಈ ಸಿಸ್ಟಮ್ ನನ್ನನ್ನ ಕಳ್ಳನನ್ನಾಗಿ ಮಾಡುತ್ತೆ” ಅನ್ನೋ ಹತಾಶೆ ಇಬ್ಬರಲ್ಲೂ ಇತ್ತು ಎಂದು ಹೋಲಿಸಲಾಗುತ್ತಿದೆ.

ಜಗತ್ತಿಗೆ ಇವರಿಬ್ಬರೂ ಹೀರೋಗಳು. ಆದ್ರೆ ತಮ್ಮ ಕಷ್ಟವನ್ನ ಯಾರ ಹತ್ರ ಹೇಳಿಕೊಳ್ಳೋಕೆ ಆಗುತ್ತೆ? ಹೆಂಡತಿ ಹತ್ರನಾ? ಮಕ್ಕಳ ಹತ್ರನಾ? ಅಥವಾ ನಂಬಿ ಬಂದ ಇನ್ವೆಸ್ಟರ್ಸ್ ಹತ್ರನಾ? ಯಾರ ಹತ್ರ ಹೇಳಿದ್ರೂ ವೀಕ್ನೆಸ್ ಆಗುತ್ತೆ.ಸಿದ್ದಾರ್ಥ ನದಿಯ ಸೇತುವೆ ಮೇಲೆ ಏಕಾಂಗಿಯಾಗಿ ನಡೆದ್ರು.ರಾಯ್ ತಮ್ಮ ಕೋಣೆಯಲ್ಲಿ ಏಕಾಂಗಿಯಾಗಿ ಪಿಸ್ತೂಲು ಎತ್ತಿಕೊಂಡ್ರು.ಸುತ್ತಲೂ ಸಾವಿರಾರು ಜನರಿದ್ದರೂ, ಸಾಯುವಾಗ ಇವರಿಬ್ಬರೂ ಅಪ್ಪಟ ಒಂಟಿಯಾಗಿದ್ದರು ಎಂದು ಹಿತೈಷಿಗಳು ಹೇಳುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *