ಪುಷ್ಪ-2 ಸಿನಿಮಾ ಬಿಡುಗಡೆಯಾದ ದಿನ ಸಂಧ್ಯಾ ಚಿತ್ರಮಂದಿರದಲ್ಲಿ ನಡೆದ ಘಟನೆಯಿಂದ ನಟ ಅಲ್ಲು ಅರ್ಜುನ್ ಅವರು ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವುದು ಈಗಾಗಲೇ ಎಲ್ಲಾರಿಗೂ ತಿಳಿದಿರುವ ವಿಷಯ. ಈ ವಿಷಯ ತಿಳಿದ ಕೂಡಲೇ ಟಾಲಿವುಡ್ ಸ್ಟಾರ್ ಐಕಾನ್ ಅಲ್ಲು ಅರ್ಜುನ್ ಮನೆಗೆ ನಟ ಚಿರಂಜೀವಿ ಭೇಟಿ ನೀಡಿದ್ದಾರೆ.
ಹೌದು ಅಲ್ಲು ಅರ್ಜುನ್ ರವರು ಬಂಧನಕ್ಕೆ ಒಳಗಾದ ವಿಷಯ ಚಿರಂಜೀವಿ ರವರಿಗೆ ತಿಳಿಯುತ್ತಿದ್ದಂತೆ ಚಿಕ್ಕಡಪಲ್ಲಿ ಪೋಲಿಸ್ ಠಾಣೆಗೆ ಹೋಗಿದ್ದರು, ಆದರೆ ಅಭಿಮಾನಿಗಳು ಪೋಲಿಸ್ ಠಾಣ ಬಳಿ ಸಹಸ್ರ ಸಂಖ್ಯೆಯಲ್ಲಿ ಸೇರಿದ್ದರಿಂದ ಹಾಗೂ ಟ್ರಾಫಿಕ್ ಸಮಸ್ಯೆಯಿಂದ ಪೋಲಿಸರು ಠಾಣೆ ಬರದಂತೆ ಮನವಿ ಮಾಡಿಕೊಂಡರು, ಅದರಂತೆ ಠಾಣೆಗೆ ಹೋಗದೆ ಚಿರಂಜೀವಿ ಅವರು ಅರ್ಜುನ್ ರವರ ನಿವಾಸಕ್ಕೆ ತೆರಳಿದರು.
ವಿಶ್ವಂಬರ ಶೂಟಿಂಗ್ ನಲ್ಲಿದ್ದ ನಟ ಚಿರಂಜೀವಿ ವಿಷಯ ತಿಳಿದ ಕೂಡಲೇ ಶೂಟಿಂಗ್ ಅರ್ಧದಲ್ಲೇ ನಿಲ್ಲಿಸಿ ಅಲ್ಲು ಅರ್ಜುನ್ ರವರ ನಿವಾಸಕ್ಕೆ ಚಿರಂಜೀವಿ ಮತ್ತು ಅವರ ಪತ್ನಿ ಸುರೇಖಾ ಹೋಗಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಇದೇ ತಿಂಗಳ ಡಿ.04 ರಂದು ನಟ ಅಲ್ಲು ಅರ್ಜುನ್ ರವರ ಪುಷ್ಪ-2 ಬಿಡುಗಡೆಯಾದ ದಿನ ಸಂಧ್ಯಾ ಥಿಯೇಟರ್ ಗೆ ಅಲ್ಲು ಅರ್ಜುನ್ ಭೇಟಿ ನೀಡಿದ್ದರು. ಅ ಕ್ಷಣದಲ್ಲಿ ಮುಗಿಬಿದ್ದ ಅಭಿಮಾನಿಗಳ ಪೈಕಿ ರೇವತಿ ಎಂಬ ಮಹಿಳಾ ಅಭಿಮಾನಿ ಕಾಲ್ತುಳಿತಕ್ಕೆ ಸಿಕ್ಕಿ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಮತ್ತು ಅವರ ಮಗನನ್ನು ಆಸ್ಪತ್ರೆಗೆ ದಾಖಾಲಾಗಿಸಿದ್ದಾರೆ.
ಈ ಘಟನೆ ಕುರಿತು ಚಿಕ್ಕಡಪಲ್ಲಿ ಪೋಲಿಸ್ ಠಾಣದಲ್ಲಿ ಅಲ್ಲು ಅರ್ಜುನ್, ಸಿನಿಮಾ ಘಟಕ ಹಾಗೂ ಥಿಯೇಟರ್ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಾಲಾಗಿದೆ. ನಟ ಅಲ್ಲು ಅರ್ಜುನ್ ವಿರುದ್ಧ BNS 105 ಮತ್ತು 115(1) ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಾಲಾಗಿದೆ. ಮತ್ತು ಅಲ್ಲು ಅರ್ಜುನ್ ರವರಿಗೆ BNS 105 ರ ಸೆಕ್ಷನ್ ರ ಅಡಿಯಲ್ಲಿ ಜಾಮೀನು ರಹಿತ ಪ್ರಕರಣ ದಾಖಾಲಾಗಿದೆ.