ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಮಕ್ಕಳು ಚೆನ್ನಾಗಿ ಓದಿ ದೇಶದ ಒಳ್ಳೆ ಪ್ರಜೆಯಾಗಬೇಕು: ಜಿ. ಎಂ. ಲವಕುಮಾರ್

On: June 10, 2025 6:39 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE-10-06-2025

ಭೀಮಸಮುದ್ರ: ಮಕ್ಕಳು ಚೆನ್ನಾಗಿ ಓದಿ ದೇಶದ ಒಳ್ಳೆಯ ಪ್ರಜೆಯಾಗಬೇಕು. ಅದರಲ್ಲೂ ಗ್ರಾಮೀಣ ಮಕ್ಕಳಲ್ಲಿ ವಿದ್ಯಾಭ್ಯಾಸದಲ್ಲಿ ಹೆಚ್ಚು ಶಕ್ತಿ ಇದೆ. ಇದಕ್ಕೆ ಪ್ರೋತ್ಸಾಹ ಸಿಗಬೇಕು ಎಂದು ಸಮಾಜ ಸೇವಕ ಜಿ. ಎಂ. ಲವಕುಮಾರ್ ಸಲಹೆ ನೀಡಿದರು.

ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರನ ಸಮೀಪದ ಚಿತ್ರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಸರ್ಕಾರ ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ನೀಡುತ್ತದೆ. ಆದರೆ ಅವರಿಗೆ ಬೇಕಾದ ನೋಟ್ ಬುಕ್, ಪೆನ್ನು, ರಬ್ಬರ್, ಪೆನ್ಸಿಲ್, ಜಾಮೆಂಟರಿ ಬಾಕ್ಸ್ ಅನ್ನೂ ನಾವು ನೀಡುತ್ತಿದ್ದೇವೆ. ಸತತ 4ನೇ ವರ್ಷದಿಂದ ಈ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದೇವೆ. ಸುಮಾರು 400 ಮಕ್ಕಳಿಗೆ ಕೊಟ್ಟಿದ್ದು ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದರು.

ಮಕ್ಕಳು ಚೆನ್ನಾಗಿ ಓದಿ ಶಾಲೆಗೆ ಹಾಗೂ ತಂದೆ ತಾಯಿಗಳಿಗೆ ಒಳ್ಳೆಯ ಹೆಸರು ಬರುವಂತೆ ಮಾಡಬೇಕು. ಸಮಾಜದಲ್ಲಿ ಅದೆಷ್ಟೋ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಿದ್ದಾರೆ. ತಂದೆ ತಾಯಿಗಳು ಮಕ್ಕಳನ್ನು ಶಾಲೆಗೆ ಕಳಿಸಬೇಕು ಎಂದು ಸಲಹೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಶ್ರೇಯಲ್ ಗೌಡ, ಗಾಯತ್ರಿ ಪ್ರಭಾಕರ್, ವೀಣಾ, ಮಲ್ಲೇಶ್ವರಪ್ಪ, ದಿವ್ಯಾ, ಗ್ರಾಮಸ್ಥರು. ಪೋಷಕರು ಹಾಜರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment