SUDDIKSHANA KANNADA NEWS/ DAVANAGERE/ DATE:24-08-2023
ದಾವಣಗೆರೆ: ನಗರದ ಜೆ.ಜೆ.ಎಂ.ವೈದ್ಯಕೀಯ ಕಾಲೇಜಿನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯದ ಬೆಳಗಾಂ ವಲಯದಿಂದ ಆಯೋಜಿಸಿದ 2023-24ನೇ ಸಾಲಿನ ಚೆಸ್ (Chess) ಪಂದ್ಯಾವಳಿಯ ಫಲಿತಾಂಶ ಪ್ರಕಟಗೊಂಡಿದೆ.
ಪುರುಷರ ವಿಭಾಗದಲ್ಲಿ ಹುಬ್ಬಳ್ಳಿಯ ಕರ್ನಾಟಕ ಇನ್ಸಿಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮೊದಲ ಬಹುಮಾನ, ಬಳ್ಳಾರಿಯ ಸರ್ಕಾರಿ ದಂತ ವೈದ್ಯಕೀಯ ಕಾಲೇಜು ದ್ವಿತೀಯ ಬಹುಮಾನ ಪಡೆದುಕೊಂಡಿತು.
ಮಹಿಳೆಯರ ವಿಭಾಗದಲ್ಲಿ ನಗರದ ಜೆಜೆಎಂ ಮೆಡಿಕಲ್ ಕಾಲೇಜ್ ಪ್ರಥಮ ಬಹುಮಾನ ಪಡೆದುಕೊಂಡರೆ, ಕಾರವಾರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
ಈ ಸುದ್ದಿಯನ್ನೂ ಓದಿ:
Costly Flower: ದುಬಾರಿ ವರಮಹಾಲಕ್ಷ್ಮೀ ಪೂಜೆ: ಗಗನಕ್ಕೇರಿದ ಹೂ, ಹಣ್ಣು, ದರ ಕೇಳಿ ಶಾಕ್ ಆಗ್ತಿರುವ ಗ್ರಾಹಕರು, ಮಹಿಳೆಯರು…!
ಈ ಸಂದರ್ಭದಲ್ಲಿ ವಿಜೇತರಿಗೆ ಜೆಜೆಎಂ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯರಾದ ಬಹುಮಾನ ವಿತರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕ ಡಾ. ನರೇಂದ್ರನಾಥ್, ಡಾ. ಸಂತೋಷಕುಮಾರ, ಡಾ. ಅಶ್ವಿನಿ, ಡಾ. ನೀತು, ಆರ್ಬಿಟರ್ ನವೀನ್, ರಾಜೀವ್ ಗಾಂಧಿ ಯುನಿವರ್ಸಿಟಿಯ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಅಧ್ಯಕ್ಷ ಡಾ. ಜೋಸೆಫ್ ಅನಿಲ್, ರಾಜೀವ್ ಗಾಂಧಿ ಯೂನಿವರ್ಸಿಟಿ ಬೆಳಗಾಂ ವಲಯದ ಕೋ ಆರ್ಡಿನೇಟರ್ ಸಿ.ಪಿ.ಮಹೇಶ್, ಜಿ ಎಂ ಫಾರ್ಮಸಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಹನುಮಂತಪ್ಪ, ಜೆಜೆಎಂ ಮೆಡಿಕಲ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಕೆ.ಎನ್.ಗೋಪಾಲಕೃಷ್ಣ, ಶಾಂತಕುಮಾರ್ ಇತರರು ಇದ್ದರು.
ಇನ್ನು ಚೆಸ್ ಪಂದ್ಯಾವಳಿಯಲ್ಲಿ ಸುಮಾರು 36 ತಂಡಗಳು ಭಾಗವಹಿಸಿದ್ದವು. ಚೆಸ್ ಆಟವು ರೋಚಕವಾಗಿತ್ತು. ಕೆಲ ಪಂದ್ಯಗಳು ಡ್ರಾ ಆದರೆ, ಮತ್ತೆ ಕೆಲವು ಪಂದ್ಯಗಳಂತೂ ಕೊನೆಯವರೆಗೆ ಉಸಿರು ಇಡುವಷ್ಟು ರೋಚಕತೆ ಇತ್ತು.
ಬುದ್ದಿವಂತರ ಆಟ ಕರೆಯಿಸಿಕೊಳ್ಳುವ ಚೆಸ್ (Chess) ಪಂದ್ಯಾವಳಿಯಲ್ಲಿ ಬೇರೆ ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಎಲ್ಲರೂ ಉತ್ತಮವಾಗಿ ಆಟವಾಡಿದರು. ಹುಬ್ಬಳ್ಳಿ, ಬಳ್ಳಾರಿ ತಂಡಗಳಂತೂ ಕೊನೆಯವರೂ ಚೆಸ್ ಪಂದ್ಯಾವಳಿಯಲ್ಲಿ ಗೆಲುವಿಗೆ ಹೋರಾಟ ನಡೆಸಿದ್ದು ಗಮನ ಸೆಳೆಯಿತು.