ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ದಾವಣಗೆರೆಯಲ್ಲಿ ನವೆಂಬರ್ 10ಕ್ಕೆ ಓಪನ್ ರಾಪಿಡ್ ಚೆಸ್ ಪಂದ್ಯಾವಳಿ

On: November 7, 2024 10:07 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:07-11-2024

ದಾವಣಗೆರೆ: ದಾವಣಗೆರೆ ನಗರದ ಗುರುಭವನದಲ್ಲಿ ನವೆಂಬರ್ 10ರಂದು ಚೆಸ್ ಕ್ಲಬ್ ಹಾಗೂ ಸರ್ಕಲ್ ಚೆಸ್ ಅವರ ಸಹಯೋಗದೊಂದಿಗೆ ಓಪನ್ ರಾಪಿಡ್ ಚೆಸ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ.

ಈ ಪಂದ್ಯಾವಳಿಯನ್ನು ಭಾನುವಾರ ಬೆಳಗ್ಗೆ 10 ಗಂಟೆಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಉದ್ಘಾಟನೆ ಮಾಡಲಿದ್ದಾರೆ. ಸಂಜೆ 5.30ಕ್ಕೆ ಸಂಘದ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ ಅವರು ಪ್ರಶಸ್ತಿ ಪ್ರದಾನ ಮಾಡುವರು.

ಈ ಪಂದ್ಯಾವಳಿಯಲ್ಲಿ ಗೆದ್ದ ಸ್ಪರ್ಧಾಳುಗಳಿಗೆ ಓಪನ್ ವಿಭಾಗದಲ್ಲಿ ಮೊದಲ 15 ಸ್ಥಾನಗಳಿಗೆ ನಗದು ಹಾಗೂ ಪಾರಿತೋಷಕ ಮತ್ತು 8,10,12,14 ವರ್ಷದ ಒಳಗಿನ ವಿಭಾಗದಲ್ಲಿ ತಲ 10 ವಿಶೇಷ ಬಹುಮಾನಗಳನ್ನು ನೀಡಲಾಗುವುದು. ಒಟ್ಟು 30,000 ನಗದು ಹಾಗೂ 45 ಟ್ರೋಫಿಗಳನ್ನು ನೀಡಲಾಗುವುದು ಎಂದು ಸಂಘದ ಕಾರ್ಯದರ್ಶಿ ಟಿ. ಯುವರಾಜ್ ತಿಳಿಸಿದ್ದಾರೆ.

ಈ ಪಂದ್ಯಾವಳಿ ಹೆಸರನ್ನು ನೋಂದಾಯಿಸಲು ನವಂಬರ್ 9ರಂದು ಕೊನೆಯ ದಿನಾಂಕ ವಾಗಿರುತ್ತದೆ. ಕಾರ್ಯದರ್ಶಿ ಟಿ. ಯುವರಾಜ್ 9945613469-7259310197-9945163469 ಅವರನ್ನು ಸಂಪರ್ಕಿಸಬಹುದಾಗಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment