SUDDIKSHANA KANNADA NEWS/DAVANAGERE/DATE:01_12_2025
ದಾವಣಗೆರೆ: ಮಹಿಳೆಯೊಬ್ಬರಿಗೆ ಹೆಚ್ಚಿನ ಲಾಭದ ಆಸೆಯೊಡ್ಡಿ ಸುಮಾರು 8.8 ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಈ ಸುದ್ದಿಯನ್ನೂ ಓದಿ: ಜಿ. ಮಲ್ಲಿಕಾರ್ಜುನಪ್ಪ, ಹಾಲಮ್ಮನವರ ಪುಣ್ಯಸ್ಮರಣೆ: ಭೀಮಸಮುದ್ರದಲ್ಲಿ ಸಮಾಧಿಗೆ ಪೂಜೆ ಸಲ್ಲಿಸಿದ ಕುಟುಂಬಸ್ಥರು
ನಗರದ ಸಿದ್ದವೀರಪ್ಪ ಬಡಾವಣೆಯ ಮಹಿಳೆಯೊಬ್ಬರು ಹೆಚ್ಚಿನ ಲಾಭಾಂಶದ ಆಮಿಷಕ್ಕೆ ಬಲಿಯಾಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ.
ವ್ಯಕ್ತಿಯೊಬ್ಬನು ಮೊಬೈಲ್ ಗೆ ಸಂದೇಶವೊಂದನ್ನು ಕಳುಹಿಸಿ ಪರಿಚಯ ಮಾಡಿಕೊಂಡಿದ್ದಾನೆ. ಆನ್ ಲೈನ್ ಟ್ರೇಡಿಂಗ್ ಮಾಡಿದರೆ ಸಾಕಷ್ಟು ಹಣ ಗಳಿಸಬಹುದು. ಹಾಕಿದ ಹಣಕ್ಕೆ ದುಪ್ಪಟ್ಟು ಬರುತ್ತದೆ. ಹೆಚ್ಚಿನ ಲಾಭವೂ ಬರುತ್ತದೆ. ಸಿಕ್ಕಿರುವ ಅವಕಾಶ ಕಳೆದುಕೊಳ್ಳಬೇಡಿ ಎಂದು ನಂಬಿಸಿದ್ದಾನೆ. ಹೆಚ್ಚಿನ ಲಾಭ ಸಿಗುವ ಆಸೆಗೆ ಮಹಿಳೆಯು 8. 8 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾರೆ.
ಕೆಲವು ದಿನಗಳ ಬಳಿಕ ಆನ್ ಲೈನ್ ಟ್ರೇಡಿಂಗ್ ಖಾತೆಯಲ್ಲಿ ದೋಷ ಕಾಣಿಸಿಕೊಂಡಿದೆ. ಮತ್ತೆ ಮಹಿಳೆಯು ಆತನನ್ನು ಸಂಪರ್ಕಿಸಿದ್ದಾರೆ. ಹೆಚ್ಚಿನ ಹಣ ನೀಡಿದರೆ ಹೂಡಿರುವ ಬಂಡವಾಳದ ಹಣ ಹಿಂದಿರುಗಿಸುತ್ತೇವೆ. ಹೆಚ್ಚಿನ ಹಣ ನೀಡುತ್ತೇವೆಂದು ಮತ್ತೆ ಸುಳ್ಳು ಹೇಳಿದ್ದಾನೆ. ಇದರಿಂದ ಅನುಮಾನಗೊಂಡ ಮಹಿಳೆಯು ಸಿಇಎನ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಬಳಿಕ ದೂರು ದಾಖಲಿಸಿದ್ದಾರೆ.





Leave a comment