ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಡಬಲ್ ಹಣ ನೀಡುವುದಾಗಿ ನಂಬಿಸಿ ವಂಚಿಸಿದ್ದ ಆರೋಪಿ ಬಂಧನ: 2ಲಕ್ಷದ 20 ಸಾವಿರ ರೂ. ವಶ

On: February 1, 2025 9:22 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:01-02-2025

ದಾವಣಗೆರೆ: ವಂಚನೆ ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನ ಕೋಡಿಹಳ್ಳಿ ಗ್ರಾಮದ ಕೆ. ಟಿ. ಮಂಜಪ್ಪ ಬಂಧಿತ ಆರೋಪಿ.

ಘಟನೆ ಹಿನ್ನೆಲೆ:

ಕಳೆದ ತಿಂಗಳು 28ರಂದು ಸಂಜೆ ಸಮಯದಲ್ಲಿ ವಿದ್ಯಾನಗರ ಪೊಲೀಸ್ ಠಾಣೆಗೆ ಹಾಜರಾಗಿ ಧನಂಜಯ ಅವರು ದೂರು ನೀಡಿದ್ದರು. ತಾನು ರಾಯಚೂರು ನಿವಾಸಿಯಾಗಿದ್ದು ಈಗ್ಗೆ 15 ದಿನಗಳ ಹಿಂದೆ ಯಾರೋ ಒಬ್ಬ ನನಗೆ ಪೋನ್ ಮಾಡಿ ನನ್ನ ಹೆಸರು ರಾಜೇಶ ದಾವಣಗೆರೆ ಅಂತ ಪರಿಚಯ ಮಾಡಿಕೊಂಡಿದ್ದ. ನಮ್ಮ ಬಳಿ ನೂರು ರೂಪಾಯಿ ಮುಖ ಬೆಲೆಯ ತುಂಬಾ ನೋಟುಗಳು ಇದ್ದು, ಅವುಗಳನ್ನು ನಾವು ಕಡಿಮೆ ರೇಟಿಗೆ ಅಂದರೆ ನೀವು ನಮಗೆ ಒಂದು ಸಾವಿರ ರೂಪಾಯಿಯ ಬೇರೆ ನೋಟುಗಳನ್ನು ನೀಡಿದರೆ ನಾವು ನಿಮಗೆ ಎರಡು ಸಾವಿರ ರೂಪಾಯಿಗಳನ್ನು ನೀಡುತ್ತೇವೆ ಅಂತ ನಂಬಿಸಿದರು.

28ರಂದು ದಾವಣಗೆರೆ ವಿವಿಯ ಬಳಿ ಕರೆಸಿಕೊಂಡು ರಾಜೇಶ ಹಾಗು ಆತನ ಜೊತೆ ಇದ್ದ ಇನ್ನು ಇಬ್ಬರು ಆರೋಪಿಗಳು ಪಿರ್ಯಾದಿ ಬಳಿಯಿದ್ದ ಒಟ್ಟು ನಾಲ್ಕು ಲಕ್ಷ ರೂಪಾಯಿಗಳಿಗೆ 8 ಲಕ್ಷ ರೂಪಾಯಿಯ 100 ಮುಖ ಬೆಲೆಯ ನೋಟುಗಳನ್ನು ನೀಡುವುದಾಗಿ ಹೇಳಿದ್ದರು.

ಅದೇ ದಿನ ಮದ್ಯಾಹ್ನ 3ಗಂಟೆ ಸಮಯದಲ್ಲಿ ಬಾಡಾ ಕ್ರಾಸ್ ಬಳಿ ಧನಂಜಯ ಅವರಿಂದ ಒಟ್ಟು ನಾಲ್ಕು ಲಕ್ಷ ರೂ ಹಣವನ್ನು ಪಡೆದುಕೊಂಡರು. ಧನಂಜಯರಿಗೆ 8 ಲಕ್ಷ ರೂಪಾಯಿ ನೂರು ಮುಖ ಬೆಲೆಯ ನೋಟುಗಳನ್ನು ನೀಡದೇ ಕೆಎ51-ಎಮ್ ಎಕ್ಸ್-0598 ನೇ ನಂಬರಿನ ಕಾರಿನಲ್ಲಿ ತೋಳಹುಣಸೆ ಕಡೆ ಹೋಗಿದ್ದಾರೆ. ಪತ್ತೆ ಮಾಡಿ ನನ್ನ ಹಣವನ್ನು ವಾಪಸ್ ಕೊಡಿಸಿ ಅಂತ ನೀಡಿದ ದೂರಿನ ಮೇರೆಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಆರೋಪಿತರನ್ನು ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ. ಸಂತೋಷ್, ಜಿ. ಮಂಜುನಾಥ, ದಾವಣಗೆರೆ ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಶರಣ ಬಸವೇಶ್ವರ ಬಿ. ಮತ್ತು
ವಿದ್ಯಾನಗರ ಠಾಣೆ ನಿರೀಕ್ಷಕಿ ಶಿಲ್ಪಾ ವೈ.ಎಸ್ ರವರ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯ ಪಿಎಸ್ಐಗಳಾದ ವಿಶ್ವನಾಥ ಜಿ.ಎನ್, ವಿಜಯ ಎಂ., ನಾಗರಾಜ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವು ಒಬ್ಬ ಆರೋಪಿತನಾದ
ಕೆ. ಟಿ. ಮಂಜಪ್ಪನನ್ನು ಬಂಧಿಸಿದೆ.

ಕೆ. ಟಿ. ಮಂಜಪ್ಪನನ್ನು ಬಂಧಿಸಿ ಒಟ್ಟು ಎರಡು ಲಕ್ಷ ಇಪ್ಪತ್ತು ಸಾವಿರ ರೂ. ಹಣ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಒಂದು ಹುಂಡೈ ಕ್ರೇಟಾ ಕಾರು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಂಗ
ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನಿಬ್ಬರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಅಧಿಕಾರಿಗಳು ಹಾಗೂ ಸಿಬ್ಬಂದಿಗಳಾದ ಶಂಕರ್ ಜಾಧವ್, ಆನಂದ ಎಂ, ಬೋಜಪ್ಪ, ಚಂದ್ರಪ್ಪ, ಬಸವರಾಜ್, ನವೀನ್ ಮಲ್ಲನಗೌಡ್ರು, ರಾಮಚಂದ್ರಪ್ಪ ಹಾಗು ಸ್ಮಾರ್ಟ ಸಿಟಿ ಕಛೇರಿಯ ಸಿಬ್ಬಂದಿಗಳಾದ ಮಾರುತಿ, ಸೋಮು ಹಾಗೂ ಜಿಲ್ಲಾ
ಪೊಲೀಸ್ ಕಛೇರಿ ಸಿಬ್ಬಂದಿಗಳಾದ ರಾಘವೇಂದ್ರ,ರಾಮಚಂದ್ರ ಜಾಧವ ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment