ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Channagiri: 9ನೇ ದಿನಕ್ಕೆ ಕಾಲಿಟ್ಟ ಹೋರಾಟ: ಭೂಕಬಳಿಕೆ ವಿರುದ್ಧ ಕ್ರಮ ಆಗ್ಲೇಬೇಕು.. ಅಲ್ಲಿವರೆಗೆ ನಿಲ್ಲದು ಪ್ರತಿಭಟನೆ…!

On: September 2, 2023 4:57 AM
Follow Us:
CHANNAGIRI PROTEST
---Advertisement---

SUDDIKSHANA KANNADA NEWS/ DAVANAGERE/ DATE:02-09-2023

ದಾವಣಗೆರೆ: ಖಾಸಗಿ ವ್ಯಕ್ತಿಗಳು ಗ್ರಾಮ ಠಾಣಾ ಜಾಗ ಕಬಳಿಕೆಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ಸಹಕಾರ ಕೊಡುತ್ತಿದ್ದಾರೆ ಎಂದು ಆರೋಪಿಸಿ ಚನ್ನಗಿರಿ (Channagiri) ತಾಲೂಕಿನ ಹರೋನಹಳ್ಳಿ ಗ್ರಾಮ ಪಂಚಾಯಿತಿ ಎದುರು ನಡೆಯುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ 9ನೇ ದಿನಕ್ಕೆ ಕಾಲಿಟ್ಟಿದೆ.

ಸರ್ಕಾರಿ ಜಾಗ ಉಳಿಸಬೇಕು. ಖಾಸಗಿ ವ್ಯಕ್ತಿಗಳು ಗ್ರಾಮ ಠಾಣಾ ಜಾಗ ಕಬಳಿಕೆ ನಡೆಸಿದ್ದು, ಈ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಜರುಗಿಸಲೇಬೇಕು. ಕೇವಲ ಮನವಿ ಸ್ವೀಕರಿಸಿ ಹೋದರೆ ಸಾಲದು. ಅಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ನೊಟೀಸ್ ನೀಡಬೇಕು. ಗ್ರಾಮ ಠಾಣಾ ಜಾಗ ಉಳಿಸಬೇಕು. ಅಲ್ಲಿಯವರೆಗೆ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲದು ಎಂದು ರಾಜ್ಯ ಹಕ್ಕಿಪಿಕ್ಕಿ ಸಂಘಟನೆ ರಾಜ್ಯಾಧ್ಯಕ್ಷ ಆರ್. ಪುನೀತ್ ಕುಮಾರ್ ಸ್ಪಷ್ಟವಾಗಿ ಹೇಳಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಎಸಿ, ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಬಂದಿದ್ದಾರೆ. ನಮ್ಮ ಮನವಿ ಸ್ವೀಕರಿಸಿದ್ದಾರೆ. ಈ ಹಿಂದೆಯೂ ಮನವಿ ಸಲ್ಲಿಸಿ, ಗಮನಕ್ಕೆ ತಂದು ನಮಗೂ ಸಾಕಾಗಿದೆ. ಈ ಬಾರಿ ಕಾನೂನು ರೀತಿಯಲ್ಲಿ ಕ್ರಮ ಆಗುವವರೆಗೆ ಪ್ರತಿಭಟನೆ ನಿಲ್ಲದು. ಪ್ರತಿಭಟನೆ ಆರಂಭಿಸಿ ಎಂಟು ದಿನಗಳು ಪೂರೈಸಿದ್ದು, ಇಂದು 9ನೇ ದಿನ. ಇಂದೂ ಪ್ರತಿಭಟನೆ ಮುಂದುವರಿಯುತ್ತದೆ. ಬೇಡಿಕೆ ಈಡೇರುವವರೆಗೂ ಹೋರಾಟ ಮಾತ್ರ ನಿಲ್ಲಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಹಕ್ಕೊತ್ತಾಯಗಳು ಏನು…?

ಕೆಲವು ವರ್ಷಗಳಿಂದ ಗ್ರಾಮದ 14 ಎಕರೆಗಿಂತ ಹೆಚ್ಚಿರುವ ಗ್ರಾಮಠಾಣ ಜಮೀನನ್ನು ಅಕ್ಕ ಪಕ್ಕದ ಗ್ರಾಮಸ್ಥರು ಒತ್ತುವರಿ ಮಾಡಿದ್ದಾರೆ. ಕೆಲವರು ಅಕ್ರಮವಾಗಿ ಖಾತೆ ಮತ್ತು ಪಹಣಿ ಮಾಡಿಸಿಕೊಂಡಿದ್ದಾರೆ. ಇವರ ವಿರುದ್ದ ತಕ್ಷಣ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಅಕ್ರಮವಾಗಿ ಮಾಡಿರುವ ಪಹಣಿ ರದ್ದುಗೊಳಿಸಿ, ಪರಿಶೀಲಿಸಿ ಕ್ರಮಕೈಗೊಂಡು ಜಮೀನು ತೆರೆವುಗೊಳಿಸಬೇಕು. ನಿವೇಶನ ರಹಿತ ಕುಟುಂಬಗಳಿಗೆ ನಿವೇಶನಗಳನ್ನು ಮುಂಜೂರು ಮಾಡಿ ಹಂಚಿಕೆ ಮಾಡಿಕೊಡಬೇಕು. ಸರ್ಕಾರಿ ಮೂಲ ಸೌಕರ್ಯಗಳನ್ನು ಒದಗಿಸಿಕೊಡಬೇಕು.

ಈ ಸುದ್ದಿಯನ್ನೂ ಓದಿ: 

Gruhalakshmi ಎಫೆಕ್ಟ್: ಹೊಸ ಬಿಪಿಎಲ್ ಕಾರ್ಡ್ ಗಿಲ್ಲ ಪರ್ಮಿಷನ್, ತಿದ್ದುಪಡಿಗಷ್ಟೇ ಗ್ರೀನ್ ಸಿಗ್ನಲ್.. ಯಾಕೆ ಅನ್ನೋದಕ್ಕೆ ಇಲ್ಲಿದೆ ನೋಡಿ ಕಾರಣ…!

ಗ್ರಾಮಠಾಣ ಜಾಗ ಸರ್ಕಾರದ್ದು. ಆದ್ರೆ, ಖಾಸಗಿ ವ್ಯಕ್ತಿಗಳು ಕಬಳಿಸಲು ಗ್ರಾಮ ಪಂಚಾಯಿತಿಯ ಕೆಲ ಅಧಿಕಾರಿಗಳು ಸಹಕಾರ ಕೊಟ್ಟಿದ್ದು, ಇಂಥ ಅಧಿಕಾರಿಗಳನ್ನು ವಜಾಗೊಳಿಸಬೇಕು. ಅಕ್ರಮ ಖಾತೆ ಮಾಡಿದ್ದು ರದ್ದುಗೊಳಿಸಿ, ಒತ್ತುವರಿ ಗ್ರಾಮಠಾಣ ಜಾಗ ತೆರೆವುಗೊಳಿಸಿ ಗ್ರಾಮಠಾಣಾ ಗಡಿ ಗುರುತಿಸಿಕೊಡಬೇಕು ಎಂಬ ಒತ್ತಾಯ ನಮ್ಮದು ಅಂತಾರೆ ಪುನೀತ್ ಕುಮಾರ್.

ಸರ್ಕಾರದ ಆದೇಶವಿದ್ದರೂ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದೆೇ ಇರುವುದು ಆಶ್ಚರ್ಯ ತಂದಿದೆ. ಕರ್ತವ್ಯಲೋಪ ಎಸಗಿದ್ದರೂ ಕ್ರಮ ಆಗಿಲ್ಲ. ಅಧಿಕಾರಿಗಳುಸರಿಯಾಗಿ ಕೆಲಸವನ್ನೂ ಮಾಡುತ್ತಿಲ್ಲ, ಸುಮಾರು ವರ್ಷಗಳಿಂದ ಗ್ರಾಮಠಾಣ ಒತ್ತುವರಿ ತೆರವು ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡುತ್ತಲೇ ಬಂದಿದ್ದು ಒಮ್ಮೆಯಾದರೂ ಭೇಟಿ ನೀಡದ ಅಧಿಕಾರಿಗಳು ಹೋರಾಟ ಆರಂಭಿಸಿದ ಮೇಲೆ ಬಂದಿದ್ದಾರೆ. ಇದರಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಲು ನಿರ್ಲಕ್ಷ್ಯ ತೋರುತ್ತಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರು ಬಂದು ಸ್ಥಳ ಪರಿಶೀಲಿಸಿ ತೆರೆವು ಕಾರ್ಯ ಮಾಡುವವರೆಗೂ ಅನಿರ್ಧಿಷ್ಟಾವಧಿ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿರಾಜ್ಯ ಕಾರ್ಯದರ್ಶಿ ರವಿಕುಮಾರ, ಪ್ರಧಾನ ಕಾರ್ಯದರ್ಶಿ ಜಯಂತ, ಸಂಘಟನೆ ಮುಖಂಡರಾದ ಉಮೇಶ, ಬಿನೋದ್, ಗಂಡುಗುಲಿ, ಲೇಸಪ್ಪ, ಮರ್ಫಿ, ಮಧುರಾಜ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದಾರೆ.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment