ದಾವಣಗೆರೆ: ಶಾಮನೂರು ಗ್ರಾಮದ ಬಿಜೆಪಿ ಭೀಷ್ಮ ಎಂದೇ ಖ್ಯಾತರಾಗಿದ್ದ ಚಂದ್ರಶೇಖರ್ ಸಂಕೊಳ್ ನಿಧನದ ಸುದ್ದಿ ಆಘಾತ ತಂದಿದೆ ಎಂದು ಮಾಜಿ ಸಚಿವ ಹಾಗೂ ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ಅವರು ಆಪ್ತನ ನೆನದು ಕಣ್ಣೀರಿಟ್ಟ ಘಟನೆ ನಡೆದಿದೆ.
READ ALSO THIS STORY: EXCLUSIVE: ಶಾಸಕನಾಗಿ ಜನಸೇವೆ ಮಾಡ್ಬೇಕೆಂಬ ಕನಸು ಕಂಡಿದ್ದ ನೀರು ಕೊಟ್ಟ ಭಗೀರಥ ಚಂದ್ರಶೇಖರ್ ಸಂಕೊಳ್ ಸಾಲದ ಸುಳಿಗೆ ಸಿಲುಕಿದ್ದೇಗೆ? ಮಕ್ಕಳು ಆತ್ಮಹತ್ಯೆ ಯತ್ನ ಮಾಡಿದ್ಯಾಕೆ?
ಚಂದ್ರಶೇಖರ್ ಸಂಕೊಳ್ ಸಾವಿನ ಸುದ್ದಿ ತಿಳಿದ ತಕ್ಷಣ ಕುಟುಂಬಸ್ಥರಿಗೆ ಧೈರ್ಯ ತುಂಬಲು ಹೊರಟ ರವೀಂದ್ರನಾಥ್ ಅವರು ಮಾಧ್ಯಮದವರೊಂದಿಗೆ ಮಾತನಾಡುವಾಗ ಭಾವುಕರಾದರು.
ಚಂದ್ರಶೇಖರ್ ಸಂಕೊಳ್ ನನ್ನ ಸಂಬಂಧಿಕರು. ಕೆಲಸ ಚೆನ್ನಾಗಿ ಮಾಡುತ್ತಿದ್ದ. ಕಂಟ್ರೋಲ್ ಇರಲಿಲ್ಲ ಅವ್ನು ಎಂದು ಹೇಳಿದರು.
ಸಂಕೊಳ್ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ನನಗೂ ಬೆಳಿಗ್ಗೆ ಗೊತ್ತಾಗಿದೆ. ಏನಾಗಿದೆಯೋ ಏನೋ ಗೊತ್ತಿಲ್ಲ. ಜಗಳ ಆಡುತ್ತಿದ್ದ ಅಂತಾ ಹೇಳ್ತಿದ್ದಾರೆ. ಜನರಿಗಾಗಿ ಜನೋಪಯೋಗಿ ಕಾರ್ಯ ಮಾಡಿದ್ದ. ಆದರೆ ಉಪಯೋಗ ಮಾಡಿದ್ದರೂ ಅವನೇ ಇಲ್ಲವಲ್ಲ ಈಗ. ಯಾರೂ ಕರೆದರೆ ಮಾತನಾಡುತ್ತಿರಲಿಲ್ಲ. ಹಠವಾದಿಯಾಗಿದ್ದ ಎಂದು ರವೀಂದ್ರನಾಥ್ ಭಾವುಕರಾದರು.
ಚಂದ್ರಶೇಖರ್ ಸಂಕೊಳ್ ಅತ್ತೆ ಮಗ ಕರಿಬಸಣ್ಣ ಆಗಾಗ್ಗೆ ಸಮಸ್ಯೆ ಪರಿಹರಿಸಲು ಯತ್ನಿಸುತ್ತಿದ್ದರು. ಅವರ ಮಾತೂ ಕೇಳುತ್ತಿರಲಿಲ್ಲ. ಉದ್ದಟತನದಿಂದ ಮಾತನಾಡಿ ಹೋಗುತ್ತಿದ್ದ ಎಂದು ಕರಿಬಸಣ್ಣ ಹೇಳ್ತಿದ್ದಾನೆ. ಆತನ ಸಾವಿನ ಸುದ್ದಿ ಬರಸಿಡಿಲು ಬಡಿದಂತಾಗಿದೆ ಎಂದು ಎಸ್. ಎ. ರವೀಂದ್ರನಾಥ್ ತಿಳಿಸಿದರು.





Leave a comment