ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಚೈತ್ರಾ ಕುಂದಾಪುರ (Kundapur) ಅಂಡ್ ಗ್ಯಾಂಗ್ ನ ಒಂದೊಂದೇ ಕರ್ಮಕಾಂಡ ಬಯಲಿಗೆ…? ಮಾಹಿತಿ ನೀಡಿದಾತನಿಗೆ ಹಾಕಿದ್ರಾ ಬೆದರಿಕೆ? ಏನೀ ವಂಚನೆ ಲೀಲೆ… ಇನ್ನೂ ಸಿಗದ ಹಾಲಶ್ರೀ ಸ್ವಾಮಿ ?

On: September 14, 2023 5:21 AM
Follow Us:
CHAITHRA KUNDAPURA
---Advertisement---

SUDDIKSHANA KANNADA NEWS/ DAVANAGERE/ DATE:14-09-2023

ಬೆಂಗಳೂರು: ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಉದ್ಯಮಿಯೊಬ್ಬರಿಗೆ ಬಿಜೆಪಿಯಿಂದ ಟಿಕೆಟ್ ನೀಡಿಸುತ್ತೇವೆ ಎಂದು ಭರವಸೆ ಏಳು ಕೋಟಿ ರೂಪಾಯಿ ವಂಚಿಸಿದ್ದ ಪ್ರಕರಣವು ದಿನೇ ದಿನೇ ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ಹಿಂದೂ ಉಗ್ರ ಸ್ವರೂಪಿ ಭಾಷಣಕಾರಿ ಚೈತ್ರಾ ಕುಂದಾಪುರ (Kundapur) ಮಾಡಿದ್ದ ಕ್ರೈಂಮಾಂಜಲಿ ಹೊರ ಬರುತ್ತಿದೆ. ಸಿಸಿಬಿ ಪೊಲೀಸರು ಒಂದೊಂದೇ ಸ್ಫೋಟಕ ಸತ್ಯಗಳನ್ನು ಹೊರ ಹಾಕುತ್ತಿದ್ದಾರೆ. ಚೈತ್ರಾ ಕುಂದಾಪುರ (Kundapur) ಬಂಧನದಿಂದ ಹಿಡಿದು ಇಲ್ಲಿಯವರೆಗೂ ಬೃಹನ್ಮಾಟಕ ಜೋರಾಗಿಯೇ ನಡೆಯುತ್ತಿದೆ. ನಾನು ತಪ್ಪು ಮಾಡಿಲ್ಲ, ನಾನೇನೂ ಯಾರಿಗೂ ಮೋಸ ಮಾಡಿಲ್ಲ ಎಂದು ಚೈತ್ರಾ ಕುಂದಾಪುರ ಬಡಾಬಡಾಯಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: 

Siddaramaiah: ವಸತಿ ಹೀನರಿಗೆ ಸಿಹಿ ಸುದ್ದಿ ನೀಡಿದ ಸಿಎಂ ಸಿದ್ದರಾಮಯ್ಯ: ಈ ವರ್ಷ 3.11 ಲಕ್ಷ ಮನೆಗಳ ನಿರ್ಮಾಣದ ಗುರಿ

ಚೈತ್ರಾ ಕುಂದಾಪುರ (Kundapur) ಸೇರಿದಂತೆ ಆರೋಪಿಗಳು ಬಳಕೆ ಮಾಡುತ್ತಿದ್ದ ಮೊಬೈಲ್ ಗಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲು ಸಿಸಿಬಿ ಪೊಲೀಸರು ನಿರ್ಧರಿಸಿದ್ದು, ಹೈಕೋರ್ಟ್ ನಿಂದ ಅನುಮತಿ ಪಡೆದು ತನಿಖೆ ಮುಂದುವರಿಸಿದ್ದಾರೆ. ಹಾಲಸ್ವಾಮಿ ಮಠಕ್ಕೆ ಚೈತ್ರಾ ಭೇಟಿ ನೀಡಿದ್ದ ಫೋಟೋಗಳು ವೈರಲ್ ಆಗಿವೆ. ಹತ್ತಕ್ಕೂ ಹೆಚ್ಚು ಮಂದಿ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಸಿಸಿಬಿ ಕಚೇರಿಗೆ ಹೋಗುವ ಮುನ್ನ ಹಾಲಸ್ವಾಮಿ ಮಠದ ಶ್ರೀಗಳು ಬಂಧನವಾಗಲಿ, ಎಲ್ಲವೂ ಸತ್ಯ ಹೊರಗಡೆ ಬರುತ್ತದೆ. ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ. ಗೋವಿಂದ ಬಾಬುಗೆ 38 ಕೋಟಿ ರೂಪಾಯಿ ಬಿಬಿಎಂಪಿಯಿಂದ ಹಣ ಬರಬೇಕಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಹಣಕ್ಕಾಗಿ ಸಂಪರ್ಕ ಮಾಡಿದ್ದರು. ನನ್ನಮೇಲೆ ಮಾಡಿರುವ ಆರೋಪಗಳೆಲ್ಲವೂ ಶುದ್ಧ ಸುಳ್ಳು ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ.

ವಂಚನೆ ಜಾಲ ಹೇಗಿತ್ತು…?

ಬಿಜೆಪಿ ಟಿಕೆಟ್ ಆಕಾಂಕ್ಷಿ ಗೋವಿಂದ ಪೂಜಾರಿ ಅಲಿಯಾಸ್ ಗೋವಿಂದ ಬಾಬುಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಆಮಿಷವೊಡ್ಡಿ 7 ಕೋಟಿ ರುಪಾಯಿ ವಂಚಿಸಿರುವ ಆರೋಪದ ಮೇರೆಗೆ ಚೈತ್ರಾ ಕುಂದಾಪುರ (Kundapur) ಡ್ರಾಮಾ ಮಾಡಿದ ಘಟನೆ ನಡೆದಿತ್ತು. ಮಾತ್ರವಲ್ಲ, ಪೊಲೀಸ್ ಜೀಪ್ ನ ಗಾಜು ಪುಡಿ ಪುಡಿ ಮಾಡಿ, ನಾಟಕವಾಡಿದ್ದಳು. ಮಾತ್ರವಲ್ಲ, ನಾನೇನೂ ತಪ್ಪು ಮಾಡಿಲ್ಲ ಬಿಟ್ಟುಬಿಡಿ, ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದೇನೆ ಎಂದು ಚೈತ್ರಾ ಕುಂದಾಪರ ಬಡಾಬಡಾಯಿಸಿದ್ದರು.

ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿನ ಮುಸ್ಲಿಂ ಸಮುದಾಯದ ಯುವತಿಯೊಬ್ಬರ ಮನೆಯಲ್ಲಿ ಚೈತ್ರಾ ಕುಂದಾಪುರ (Kundapur) ಅಡಗಿ ಕುಳಿತಿದ್ದರು ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚೈತ್ರಾ ಜೊತೆಗೆ ಪ್ರಸಾದ್, ಗಗನ್ ಕಡೂರು, ಪ್ರಜ್ವಲ್ ಶೆಟ್ಟಿ ಆರ್ ಎಸ್ ಧನರಾಜ್, ರಮೇಶ್, ಶ್ರೀಕಾಂತ್ ನನ್ನೂ ಸಿಸಿಬಿ ಪೊಲೀಸರು ಬಂಧಿಸಿ, ವಿಚಾರಣೆ ಮುಂದುವರಿಸಿದ್ದಾರೆ.

ತನಗೆ ಆರ್ ಎಸ್ ಎಸ್ ಪ್ರಮುಖರು ಹಾಗೂ ಬಿಜೆಪಿಯ ವರಿಷ್ಠರು ಸಂಪರ್ಕದಲ್ಲಿದ್ದು, ಟಿಕೆಟ್ ಕೊಡಿಸುವುದಾಗಿ ಚೈತ್ರಾ ಕುಂದಾಪುರ ಹಂತ ಹಂತವಾಗಿ ಏಳು ಕೋಟಿ ರೂಪಾಯಿಯನ್ನು ಉದ್ಯಮಿಯಿಂದ ಪಡೆದಿದ್ದಾರೆ ಎನ್ನಲಾಗಿದೆ. ಮಾತ್ರವಲ್ಲ, ಇಲ್ಲಿನ ಕೆಲ ಯುವಕರನ್ನೇ ಕೇಂದ್ರದ ನಾಯಕರೆಂದು ನಂಬಿಸಿದ್ದರು ಎನ್ನಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಸಲೂನ್ ಶಾಪ್‌ ಒಂದರಲ್ಲಿ ಮೇಕಪ್‌ ಮಾಡುವ ರಮೇಶ್‌ ಹಾಗೂ ಧನರಾಜ್ ಎಂಬವರನ್ನು ಆರ್‌ಎಸ್‌ಎಸ್‌ ಪ್ರಚಾರಕರು ಎಂದು ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಪರಿಚಯ ಮಾಡಿಸಲಾಗಿತ್ತು. ಅದಲ್ಲದೇ ಬೆಂಗಳೂರಿನ ಕೆಆರ್ ಪುರಂ ರಸ್ತೆ ಬದಿ ಕಬಾಬ್ ಮಾರುತ್ತಿದ್ದ ನಾಯಕ್ ಎಂಬಾತನನ್ನು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಎಂದು ಪರಿಚಯ ಮಾಡಿ ಉದ್ಯಮಿಯನ್ನು ಮೋಸದ ಬಲೆಗೆ ಚೈತ್ರಾ ಕುಂದಾಪುರ ಸಿಲುಕಿಸಿದ್ದರು ಎಂದು ತಿಳಿದುಬಂದಿದೆ.

ಈಗ ಇಬ್ಬರೂ ಮಾಧ್ಯಮದವರಿಗೆ ಮಾಹಿತಿ ನೀಡಿದ್ದು, ಬೆದರಿಕೆ ಕರೆಗಳು ಬರಲಾರಂಭಿಸಿವೆ ಎಂದು ಧನರಾಜ್ ಹಾಗೂ ನಾಯಕ್ ಹೇಳಿದ್ದಾರೆ. ಕಡೂರಿನ ರಮೇಶ್ ಎಂಬಾತನಿಗೆ ಆರ್‌ಎಸ್‌ಎಸ್‌ ಪ್ರಚಾರಕ ವಿಶ್ವನಾಥ್ ಜೀ ಎಂಬ ಹೆಸರಿನ ಪಾತ್ರ ನೀಡಲಾಗಿತ್ತು. ಬೈಂದೂರಿನ ಬಿಜೆಪಿ ಟಿಕೆಟ್‌ ಉದ್ಯಮಿಯ ಕೈತಪ್ಪಿದಾಗ ಹಣವನ್ನು ವಿಶ್ವನಾಥ್ ಜೀಗೆ ತಲುಪಿಸಿರುವುದಾಗಿ ಹೇಳಿದ್ದ ಚೈತ್ರಾ ಕುಂದಾಪುರ ಸ್ವತಃ ತಾನು ಕೂಡ ಮೋಸ ಹೋಗಿದ್ದೇನೆ ಎಂದು ಹೇಳಿದ್ದಳಂತೆ. ಒಂದಿಷ್ಟು ದಿನದ ಬಳಿಕ ಚೈತ್ರಾ ಕುಂದಾಪುರಳಿಂದ ಮೋಸ ಹೋಗಿರುವುದು ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ತಿಳಿದಿದೆ. RSS ಕಚೇರಿ ಎದುರು ಟೋಕನ್ ಅಡ್ವಾನ್ಸ್ ಹಸ್ತಾಂತರ ಚೈತ್ರಾ ಕುಂದಾಪುರ ಮತ್ತು ಗಗನ್ ಕಡೂರು ಮಾತಿನ ಬಗ್ಗೆ ನಂಬಿಕೆ ಇರಿಸಿದ ಗೋವಿಂದರವರು ರೂ.50,00,000 (ಐವತ್ತು ಲಕ್ಷ ರೂಪಾಯಿ ಹಣವನ್ನು 07.07.2022ರಂದು ಪ್ರಸಾದ್ ಬೈಂದೂರ್ ಮುಖಾಂತರ ಗಗನ್ ಕಡೂರ್ ರವರಿಗೆ ನೀಡಿರುತ್ತಾರೆ. ಗಗನ್ ಕಡೂರು ಈ ಹಣವನ್ನು ಶಿವಮೊಗ್ಗದ RSS ಕಚೇರಿ ಎದುರು ಪಡೆದುಕೊಂಡಿರುತ್ತಾನೆ. ಬಳಿಕ ವಿಶ್ವನಾಥ್ ಜಿ, ಗಗನ್ ಕಡೂರು ಮತ್ತು ಚೈತ್ರಾ ಕುಂದಾಪುರ ರವರು ಕಾನ್ಸರೆನ್ಸ್ ಕರೆ ಮಾಡಿ, ನಿಮ್ಮ ಹೆಸರು ಆಯ್ಕೆ ಪಟ್ಟಿಯಲ್ಲಿದೆ, 2023ರ ಚುನಾವಣೆಯಲಿ, ಬೈದೂರಿನಿಂದಲೇ ಸ್ಪರ್ಧಿಸಲು ಟಿಕೆಟ್ ನೀಡಲು ಕೇಂದ್ರ ಬಿಜೆಪಿ ನಾಯಕರು ಒಪ್ಪಿದ್ದಾರೆಂಬ ಮಾಹಿತಿಯನ್ನು ಗೋವಿಂದ ಅವರಿಗೆ ನೀಡಿರುತ್ತಾರೆ.

ಆದರೆ ಗೋವಿಂದಬಾಬು ಪೂಜಾರಿ ಅವರಿಗೆ ಟಿಕೆಟ್ ಸಿಗಲಿಲ್ಲ. ಬಳಿಕ ಗೋವಿಂದಬಾಬು ಪೂಜಾರಿ ಅವರು ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಸದ್ಯ ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಹಾಲಶ್ರೀ ನಾಪತ್ತೆ:

ಸ್ವಾಮೀಜಿಯೊಬ್ಬರ ಹೆಸರು ಕೇಳಿಬಂದಿದೆ. ಹಗಡಲಿ ತಾಲೂಕಿನ ಹಿರೇಹಡಗಲಿ ಹಾಲು ಮಠದ ಅಭಿನವ ಹಾಲಶ್ರೀ A3 ಆರೋಪಿಯಾಗಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಹಾಲಶ್ರೀ ಯಾರ ಕೈಗೂ ಸಿಗದೇ ತಲೆಮರೆಸಿಕೊಂಡಿದ್ದಾರೆ.

ಉದ್ಯಮಿ ಗೋವಿಂದ್ ಬಾಬು ಕಡೆದಿಂದ ಕೋಟ್ಯಂತರ ರೂಪಾಯಿ ಪಡೆದು ವಂಚನೆ ಕೇಸ್ ನಲ್ಲಿ ಮೂರು ಆರೋಪಿಗಳ ಬಂಧನವಾಗುತ್ತಿದ್ದಂತೆಯೇ 3ನೇ ಆರೋಪಿಯಾಗಿರುವ ಹಿರೇಹಡಗಲಿ ಹಾಲ ಮಠದ ಅಭಿನವ ಹಾಲಶ್ರೀ ನಾಪತ್ತೆಯಾಗಿದ್ದಾರೆ. ಹಾಲ ಮಠಕ್ಕೂ ಬಾರದೇ, ಯಾರ ಸಂಪರ್ಕಕ್ಕೂ ಸಿಗದ ಅಜ್ಞಾತ ಸ್ಥಳಕ್ಕೆ ತರಳಿದ್ದಾರೆ. ಇನ್ನು ಹಾಲಶ್ರೀ ಮೊಬೈಲ್ ಸ್ವೀಚ್ ಆಫ್ ಆಗಿದೆ.

ನಾನು ಆಶ್ರಯ ನೀಡಿಲ್ಲ:

ಚೈತ್ರಾ ಕುಂದಾಪುರ (Kundapur) ಜೀವನದಲ್ಲಿ ಒಮ್ಮೆಯೂ ನನ್ನ ಮನೆಗೆ ಬಂದಿಲ್ಲ ಎಂದು ಸುರೈಯ್ಯಾ ಅಂಜುಮ್ ಸ್ಪಷ್ಟನೆ ನೀಡಿದ್ದಾರೆ. ಚೈತ್ರಾಳಿಗೆ ಆಶ್ರಯ ನೀಡಿದ್ದೇನೆ ಎಂಬ ಸುದ್ದಿ ಶುದ್ಧ ಸುಳ್ಳು. ನನಗೆ ಈವರೆಗೆ ಸಿಸಿಬಿಯಿಂದ ಯಾವುದೇ ನೋಟಿಸ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ವಕ್ತಾರೆ ಸುರೈಯ್ಯಾ ಅಂಜುಂ ಅವರು ನನ್ನ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಲಾಗಿದೆ, ನನ್ನ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ಚೈತ್ರಾಳ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರಿಂದ ನನಗೆ ಈವರೆಗೆ ಯಾವುದೇ ನೋಟಿಸ್ ಬಂದಿಲ್ಲ. ನೋಟಿಸ್ ಬಂದಿದೆ ಎಂಬ ಸುದ್ದಿ ಕೂಡ ಸುಳ್ಳಿನಿಂದ ಕೂಡಿದೆ ಎಂದಿದ್ದಾರೆ. ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಅವರು ತಿಳಿಸಿದರು.

ನಾನೂ ಹಾಗೂ ಚೈತ್ರಾ ಕುಂದಾಪುರ ಸ್ನೇಹಿತರು. ನಾವು ಕೆಲಸ ಮಾಡುವಾಗ ಸಹೋದ್ಯೋಗಿಗಳಾಗಿದ್ದೆವು. ನಾವು ಆಕೆಗೆ ಆಶ್ರಯ ಕೊಟ್ಟಿಲ್ಲ. ನಮ್ಮ ಮನೆಗೆ ಒಂದು ಸಾರಿಯೂ ಬಂದಿಲ್ಲ. ನನ್ನ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದ್ದು, ವಿಶ್ರಾಂತಿ ಪಡೆಯುತ್ತಿದ್ದೇನೆ. ಈ ಪ್ರಕರಣದಲ್ಲಿ ನನ್ನ ಹೆಸರು ಥಳುಕು ಹಾಕಿರುವುದು ಮನಸ್ಸಿಗೆ ಆಘಾತ ತಂದಿದೆ ಎಂದು ತಿಳಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment