SUDDIKSHANA KANNADA NEWS/ DAVANAGERE/ DATE:16-04-2023
ದಾವಣಗೆರೆ: ದಾಖಲೆ ಇಲ್ಲದೆ ದಾವಣಗೆರೆ (DAVANAGERE) ನಗರದ ಶಾದಿ ಮಹಲ್ (SHADI MAHAL) ಬಳಿ ದ್ವಿಚಕ್ರ ವಾಹನದಲ್ಲಿ ರೂ.39.50 ಲಕ್ಷ ಸಾಗಣೆ ಮಾಡುವ ವೇಳೆ ಎಫ್.ಎಸ್.ಟಿ. (FST) ತಂಡ (TEAM) ದವರು ಪರಿಶೀಲಿಸಿ ವಶಪಡಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ವಿವಿಧ ಚೆಕ್ ಪೋಸ್ಟ್ (CHECK POST) ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗುತ್ತಿದ್ದು, ಅಬಕಾರಿ ತನಿಖಾ ದಳದಿಂದ 7527.305 ಲೀ ರೂ. 86,50538 ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ಇದುವರೆಗೆ ರೂ.8961648 ನಗದು (CASH) , ರೂ.15499504.10 ಮೌಲ್ಯದ 14528.085 ಲೀ ಮದ್ಯ, 3.209 ಕೆ.ಜಿ ಮಾದಕ ವಸ್ತು ಅಂದಾಜು ಮೌಲ್ಯ ರೂ.56110, ರೂ.5426735 ಮೌಲ್ಯದ ಇತರೆ ವಸ್ತುಗಳು ಸೇರಿದಂತೆ ಒಟ್ಟು 2.99 ಕೋಟಿಯಷ್ಟು ನಗದು ಮತ್ತು ಇತರೆ ವಸ್ತುಗಳನ್ನು ನೀತಿ ಸಂಹಿತೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ವಶಪಡಿಸಿಕೊಳ್ಳಲಾಗಿದೆ. ಏ.15 ರಂದು ವಶಪಡಿಸಿಕೊಂಡ ಮದ್ಯದಲ್ಲಿ 6.48 ಲೀ ಪೊಲೀಸ್ (POLICE) ಇಲಾಖೆ ಮತ್ತು 7520.825 ಲೀ ಅಬಕಾರಿ ಇಲಾಖೆಯಿಂದ ಕಾರ್ಯಾಚರಣೆ ಮಾಡಿ ವಶಪಡಿಸಿಕೊಳ್ಳಲಾಗಿದೆ.