SUDDIKSHANA KANNADA NEWS/ DAVANAGERE/DATE:31_08_2025
ದಾವಣಗೆರೆ: ನಗರದ ಆರ್ ಎಂ ಸಿ ರಸ್ತೆಯ ಮಟ್ಟಿಕಲ್ ಬಳಿ ಫ್ಲೆಕ್ಸ್ ಕಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಅವಹೇಳನ ಮತ್ತು ಪ್ರಚೋದನಕಾರಿ ಪೋಸ್ಟ್ ಹಾಕಿದ್ದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ದೂರು ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
READ ALSO THIS STORY: ಡಿಜೆ ಸೌಂಡ್ ಸಿಸ್ಟಂ ಹೊತ್ತೊಯ್ಯುತ್ತಿದ್ದ ಲಾರಿ ಸೀಜ್: ಮೂವರ ವಿರುದ್ಧ ಕೇಸ್!
ಘಟನೆ ಹಿನ್ನೆಲೆ:
ಆಗಸ್ಟ್ 28ರಂದು ದಾವಣಗೆರೆ ಆರ್ ಎಂ ಸಿ ರಸ್ತೆಯ ಮಟ್ಟಿಕಲ್ ಬಳಿ ಪ್ಲೆಕ್ಸ್ ಕಟ್ಟಿರುವ ವಿಚಾರದಲ್ಲಿ ಎರಡು ಕೋಮಿನ ಯುವಕರ ನಡುವೆ ನಡೆದ ವಾದ ವಿವಾದಕ್ಕೆ ಸಂಬಂಧಿಸಿದಂತೆ ವಿಡಿಯೋ ಚಿತ್ರೀಕರಿಸಲಾಗಿದೆ. “hindu_adalita_davanagere” ಎಂಬ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ವಿಡಿಯೋ ಹಿಂಭಾಗದಲ್ಲಿ ಶಿವಾಜಿ ಮಹಾರಾಜ ಮತ್ತು ಇಸ್ಲಾಂ ಧರ್ಮದ ಸೈನಿಕನ ಚಿತ್ರವನ್ನು ಹಾಕಿ ವಿಡಿಯೋದ ಕೆಳಭಾಗದಲ್ಲಿ ಒಂದು ಕಟೌಟ್ ಗೆ ಕಂಪ್ಲೆಂಟ್ ಕೊಟ್ಟಿರಾ, ಉಳ್ಕೊಂಡಿರಲ್ಲ ಹಾಗೂ ಇತರೆ ಅವಹೇಳನ ಮತ್ತು ಪ್ರಚೋದನಾಕಾರಿ ಬರಹಗಳಿಂದ ಪೋಸ್ಟ್ ಆಗಿರುತ್ತದೆ.
ಈ ಪ್ರಚೋದನಕಾರಿ ಪೋಸ್ಟರ್ ನ ಎರಡು ಧಾರ್ಮಿಕ ಪಂಗಡಗಳ ಮಧ್ಯೆ ದ್ವೇಷ ಹಾಗೂ ವೈಮನಸ್ಸು ಬೆಳೆಯುವ ಮತ್ತು ಸಮಾಜದಲ್ಲಿ ಶಾಂತಿ ಭಂಗ ಉಂಟಾಗುವ ಮೂಲಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಲ್ಲದೇ ಗಣೇಶ ಹಬ್ಬ, ಮುಂದೆ ಬರುವ ಈದ್ ಮಿಲಾದ್ ಹಬ್ಬ ಇದ್ದು, ಎರಡು ಕೋಮುಗಳ ಮಧ್ಯೆ ಕೋಮುಗಲಭೆ ಆಗಿ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮೇಲ್ಕಂಡ ಪ್ರಚೋದನಕಾರಿ ಪೋಸ್ಟ್ ಹೊಂದಿರುವ “hindu_adalita_davanagere” ಎಂಬ ಇನ್ಸ್ಟಾಗ್ರಾಂ ಪೇಜ್ ನ ಅಡ್ಮಿನ್ ಮತ್ತು ಪ್ರಚೋದನಕಾರಿ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವ್ಯಕ್ತಿಗಳ ವಿರುದ್ಧ ಸ್ವದೂರು ಮೇರೆಗೆ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾರ್ವಜನಿಕರ ಗಮನಕ್ಕೆ:
ವಾಟ್ಸಪ್, ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ಪ್ರಚೋದನಕಾರಿ, ವ್ಯಕ್ತಿ ನಿಂದನೆ, ಧಾರ್ಮಿಕ ನಿಂದನೆ, ದ್ವೇಷ ಭಾಷಣ, ದೇಶ ವಿರೋಧಿ ಪೋಸ್ಟ್ ಗಳು ಇತ್ಯಾದಿ ಅಕ್ಷೇಪಾರ್ಹ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದು ಮತ್ತು ಶೇರ್ ಮಾಡುವುದು ಕಾನೂನು ಬಾಹಿರ. ಇಂಥ ಪೋಸ್ಟ್ ಶೇರ್ ಮಾಡುವಂಥ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಗಳು, ಸುಳ್ಳು ಸುದ್ದಿಗಳು, ಪ್ರಚೋದನಾಕಾರಿ ಪೋಸ್ಟ್ ಗಳು ಕಂಡು ಬಂದರೆ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಜಿಲ್ಲಾ ಸಾಮಾಜಿಕ ಜಾಲತಾಣ ನಿಗಾ ಘಟಕದ ಮೊಬೈಲ್ ಸಂಖ್ಯೆ 9480803208 ನಂಬರ್ ಗೆ ವಾಟ್ಸಾಪ್ ಮೂಲಕ ಪೋಸ್ಟ್ ಸಹಿತಿ ಮಾಹಿತಿ ನೀಡಲು ಕೋರಲಾಗಿದೆ. ಸಾಮಾಜಿಕ ಜಾಲಾತಾಣಗಳ ಬಳಕೆಯಲ್ಲರಲಿ ಎಚ್ಚರ ಎಂದು ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದ್ದಾರೆ.