ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Minister: ಸಚಿವ ಮಲ್ಲಿಕಾರ್ಜುನ್ ತೇಜೋವಧೆ ಆಗುವಂತೆ ವಿಡಿಯೋ ಅಪ್ಲೋಡ್: ವಿಜಯ್ ಕುಮಾರ್ ಹಿರೇಮಠ್ ವಿರುದ್ಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕೇಸ್

On: August 15, 2023 5:03 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:15-08-2023

ದಾವಣಗೆರೆ: ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ (Minister) ಎಸ್. ಎಸ್. ಮಲ್ಲಿಕಾರ್ಜುನ್ ರ ತೇಜೋವಧೆ ಆಗುವಂತೆ ಫೇಸ್ ಬುಕ್ ನಲ್ಲಿ ಅವರ ಅನುಮತಿ ಇಲ್ಲದೆ ಅಪ್ಲೋಡ್ ಮಾಡಿರುವ ವಿಜಯ್ ಕುಮಾರ್ ಹಿರೇಮಠ ವಿರುದ್ಧ ದಾವಣಗೆರೆಯ ಚಿಕ್ಕಬೂದಿಹಾಳ್ ಗ್ರಾಮದ ಕಾಂಗ್ರೆಸ್ ಮುಖಂಡ ಶ್ರೀನಾಥ್ ಬಾಬು ಅಲಿಯಾಸ್ ಬೂದಾಳ್ ಬಾಬು ಅವರು ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಸಿ ಇ ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕೇಸ್ ಆಗಿದೆ.  ಸಿ ಇ ಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ದೂರು ಕೊಡಲಾಗಿದೆ.

ಈ ಸುದ್ದಿಯನ್ನೂ ಓದಿ: 

Davanagere: ಎಸ್ಪಿ ಡಾ. ಕೆ. ಅರುಣ್ ವರ್ಗಾವಣೆಗೆ ಕಾಂಗ್ರೆಸ್ ಶಾಸಕರು ಒತ್ತಡ ಹೇರಿಲ್ಲ, ನಾನು ಯಾವ ಸಮುದಾಯ ಅವಹೇಳನ ಮಾಡಿಲ್ಲ: ಎಸ್. ಎಸ್. ಮಲ್ಲಿಕಾರ್ಜುನ್ ಸ್ಪಷ್ಟನೆ

ದೂರಿನಲ್ಲೇನಿದೆ…?

ಕರ್ನಾಟಕ ಸರ್ಕಾರದ ಗಣಿ ಮತ್ತು ಭೂವಿಜ್ಞಾನ ಮತ್ತು ತೋಟಗಾರಿಕೆ ಸಚಿವ(Minister)ರು ಹಾಗೂ ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರು ಚುನಾವಣೆ ಪೂರ್ವದಲ್ಲಿ ತಮ್ಮ ಶ್ರೀಮತಿಯೊಂದಿಗೆ ತಮ್ಮ ಮನೆಯಲ್ಲಿ ನಡೆಸಿರುವ ಸಂವಾದದ ವಿಡಿಯೋವನ್ನು ಅವರ ಅನುಮತಿ ಇಲ್ಲದೇ ಫೇಸ್ ಬುಕ್ ನಲ್ಲಿ ಅಪಲೋಡ್ ಮಾಡಿರುವ ಬಗ್ಗೆ ದೂರು ಅರ್ಜಿ.

ನಾನು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇನೆ. ದಾವಣಗೆರೆ ತಾಲ್ಲೂಕಿನ ಚಿಕ್ಕಬೂದಿಹಾಳ ಗ್ರಾಮದ ಕಾಂಗ್ರೆಸ್ ಮುಖಂಡನಾಗಿರುತ್ತೇನೆ . ನಾನು ಈ ದಿನ ಮೊಬೈಲ್ ನಲ್ಲಿ ಫೇಸ್ ಬುಕ್ ನೋಡುತ್ತಿದ್ದಾಗ ವಿಜಯಕುಮಾರ್ ಹಿರೇಮಠ ( Vijaykumar VM ) ( URL https://www.facebook.com/profile.php?id=100046249806195& mibextid = ZbWKWL) ಫೇಸ್ ಬುಕ್ ಪ್ರೊಫೈಲ್ ಹೊಂದಿರುವ ವ್ಯಕ್ತಿ.

ಕರ್ನಾಟಕ ಸರ್ಕಾರದ ಗಣಿ ಮತ್ತು ಭೂವಿಜ್ಞಾನ ಮತ್ತು ತೋಟಗಾರಿಕೆ ಸಚಿವ(Minister)ರು ಹಾಗೂ ದಾವಣಗೆರ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ.ಎಸ್.ಎಸ್.ಮಲ್ಲಿಕಾರ್ಜುನ ರವರು ಚುನಾವಣೆ ಪೂರ್ವದಲ್ಲಿ ತಮ್ಮ ಶ್ರೀಮತಿಯೊಂದಿಗೆ ತಮ್ಮ ಮನೆಯಲ್ಲಿ ನಡೆಸಿರುವ ಸಂದರ್ಶನದ ವಿಡಿಯೋವನ್ನು ಅವರ ಅನುಮತಿಯಿಲ್ಲದೆೇ, ದುರುದ್ದೇಶಪೂರ್ವಕವಾಗಿ ಮತ್ತು ಸಚಿವರ ಪ್ರತಿಷ್ಠೆಗೆ ಧಕ್ಕೆಯನ್ನುಂಟು ಮಾಡಿ ಸಾರ್ವಜನಿಕರ ಮನಸಿನಲ್ಲಿ ಅಹಿತಕರ ಭಾವನೆಗಳನ್ನು ಉತ್ತೇಜಿಸುವಂತೆ ಮೂಲ ವಿಡಿಯೋವನ್ನು ಅಪೂರ್ಣವಾಗಿ ಫೇಸ್ ಬುಕ್‌ನಲ್ಲಿ ಅಪಲೋಡ್ ಮಾಡಿರುತ್ತಾರೆ.

ಈ ಸಂವಾದದ ಫೇಸ್ ಬುಕ್ ನಲ್ಲಿ ವೀಡಿಯೋ ಅಪಲೋಡ್ ಮಾಡಿರುವ URL – ಈ ಕೆಳಕಂಡಂತೆ ಇರುತ್ತದೆ .

https://m.facebook.com/story.php? story_fbid=pfbid08fFYH2pruwtq1twA2SsUuw1Ngs3BNzNCjB5Ucqopy38 djuGCGANY3tSrfajv2pYLI & id = 100046249806195 & sfnsn = wiwspwa & mibextid = 2Rb1fB) ಸಚಿವರು ಮಾತನಾಡುತ್ತಿರುವ ವಿಡಿಯೋವನ್ನು ವಿಜಯಕುಮಾರ್ ಹಿರೇಮಠ ಎಂಬ ಫೇಸ್ ಬುಕ್ ಪ್ರೊಫೈಲ್ ಹೊಂದಿರುವ ವ್ಯಕ್ತಿಯು ತನ್ನ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿರುವುದು ಕಂಡುಬಂದಿರುವುದರಿಂದ ಈತನನ್ನು ವಿಚಾರಣೆಗೊಳಪಡಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ತಮ್ಮಲ್ಲಿ ಕೋರುತ್ತೇನೆ.

ಈ ದೂರು ಅರ್ಜಿಯೊಂದಿಗೆ ವಿಜಯಕುಮಾರ್ ಹಿರೇಮಠ ಎಂಬ ಫೇಸ್ ಬುಕ್ ಪ್ರೊಫೈಲ್ ಗೆ ಸಂಬಂಧಿಸಿದ ದಾಖಲಾತಿಗಳನ್ನು ಲಗತ್ತು ಮಾಡಿರುತ್ತೇನೆ ಎಂದು ಶ್ರೀನಾಥ್ ಬಾಬು ಮಾಹಿತಿ ನೀಡಿದ್ದಾರೆ.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ದಾವಣಗೆರೆ

ದಾವಣಗೆರೆಯಲ್ಲಿ ಆನ್ ಲೈನ್ ಗೇಮ್ ನಲ್ಲಿ ಲಕ್ಷಾಂತರ ರೂ. ಕಳೆದುಕೊಂಡ ಯುವಕ ಆತ್ಮಹತ್ಯೆ : ಪಿಎಂ, ಸಿಎಂ ಸೇರಿ ಹಲವರಿಗೆ ಬರೆದಿರುವ ಪತ್ರದಲ್ಲೇನಿದೆ?

ಕೋವಿಡ್ ಲಸಿಕೆಯಿಂದ ಹೃದಯಾಘಾತ: ಸುಳ್ಳು ಸುದ್ದಿ ಹಬ್ಬಿಸ್ತಿದ್ದಾರಂತೆ ಸಿಎಂ ಸಿದ್ದರಾಮಯ್ಯ!

ಸಿದ್ದರಾಮಯ್ಯ

ಸಿದ್ದರಾಮಯ್ಯರ ದುರಂಹಕಾರಿ ವರ್ತನೆಗೆ ಸ್ವಾಭಿಮಾನಿ ಅಧಿಕಾರಿ ಸ್ವಯಂನಿವೃತ್ತಿಗೆ ನಿರ್ಧಾರವಂತೆ!

ಕಾನೂನು

ತಕ್ಷಣ ಭೂಸ್ವಾಧೀನ ಕಾನೂನು ಹಿಂಪಡೆಯಿರಿ: ಸಿಎಂಗೆ ಪಂಡಿತಾರಾಧ್ಯ ಶ್ರೀಗಳ ಬಹಿರಂಗ ಮನವಿ

ಜುಲೈ 5ಕ್ಕೆ ಸಿದ್ಧಣ್ಣ ಜನುಮದಿನ: ಸರ್ವ ಜನಾಂಗದ ಪ್ರೀತಿಯ ಸರದಾರ.. ಬಿಜೆಪಿ ಕಟ್ಟಾಳು, ನಿಷ್ಠಾವಂತ ಡಾ. ಜಿ.ಎಂ. ಸಿದ್ದೇಶ್ವರ: ಬಾಡದ ಆನಂದರಾಜ್

ಈ ರಾಶಿಯವರಿಗೆ ಉನ್ನತ ಸ್ಥಾನ ಇದೆ ಆದರೆ ಪವರ್ ಇಲ್ಲ, ಈ ರಾಶಿಯ ದಂಪತಿಗಳಿಗೆ ಎಲ್ಲಾ ಇದ್ದರೂ ಮನಶಾಂತಿ ಇಲ್ಲ

Leave a Comment