ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಪ್ರಚೋದನೆ ಪೋಸ್ಟ್ ಹಾಕಿದವರ ವಿರುದ್ಧ ಎರಡು ಕೇಸ್ ದಾಖಲು…!

On: September 17, 2024 10:35 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:17-09-2024

ದಾವಣಗೆರೆ: ಸಾಮಾಜಿಕ ತಾಣಗಳಲ್ಲಿ ಧಾರ್ಮಿಕ ಪ್ರಚೋದನೆ ಪೋಸ್ಟ್ ಹಾಕಿದವರ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.

ಪ್ರಕರಣ-1:

ಸೋಮವಾರದಂದು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಒಂದು ಕೋಮಿನ ಸಮಾಜದ ಯುವಕರು ಹಸಿರು ಬಾವುಟವನ್ನು ದಾವಣಗೆರೆ ಆಹ್ಮದ್ ನಗರದ 3ನೇ ಮತ್ತು 4ನೇ ಕ್ರಾಸ್ ನ ಮಧ್ಯದಲ್ಲಿ ಸ್ಥಾಪಿಸಿರುವ ಏರ್ಟೆಲ್ ಟವರ್ ಮೇಲೆ ಕಟ್ಟಿದ್ದು ಇದನ್ನು ನೋಡಿದ ದಾವಣಗೆರೆ ನಗರ, ಗಾಂಧಿನಗರ 2ನೇ ಕ್ರಾಸ್ ನೇ ವಾಸಿ ಪ್ರಜ್ವಲ್ ಎಂಬುವವರು ರವರು ಉದ್ದೇಶ ಪೂರ್ವಕವಾಗಿ ಕಳೆದ ಸೆ. 15ರಂದು ಬೆಳಿಗ್ಗೆ 10ಗಂಟೆಗೆ ಏರ್ಟೆಲ್ ಟವರ್ ನ್ನು ಹತ್ತಿ ಹಸಿರು ಬಾವುಟದ ಮೇಲೆ ಭಗಧ್ವಜವನ್ನು ಕಟ್ಟಿದ್ದ. ಏರಟೆಲ್ ಟವರ್ ಗೆ ಕಟ್ಟಿದ ಭಗಧ್ವಜವನ್ನು ತನ್ನ ಮೊಬೈಲ್ ಚಿತ್ರಿಕರಿಸಿ ಸಾಮಾಜಿಕ ಜಾಲ ತಾಣ ಇನ್ಟಾಗ್ರಾಂನಲ್ಲಿ ಹಾಕಿ ಇನ್ನೊಂದು ಕೋಮಿನ ಸಮಾಜದ ಭಾವನೆಗಳನ್ನು ಕೆರಳಿಸುವ ಹಾಗೂ ಆ ಕೋಮಿನ ಜನರಲ್ಲಿ ಆಕ್ರೋಶ ಬರುವಂತೆ ಮಾಡಿ ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡಿ ಕೋಮು ಹಿಂಸೆ ಮಾಡಲು ಪ್ರೇರೇಪಿಸಿದ್ದರ ಬಗ್ಗೆ
ಪ್ರಜ್ವಲ್ ವಿರುದ್ಧ ಆಜಾದ್ ನಗರ ಪೊಲೀಸ್ ಠಾಣೆ ಗುನ್ನೆ ನಂ. 149/2024 ಕಲಂ, 353(2) ಬಿಎನ್‌ಎಸ್ -2023 ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಪ್ರಕರಣ-2: 

ಸೋಮವಾರದಂದು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಒಂದು ಕೋಮಿನ ಸಮಾಜದ ಯುವಕರು ಹಸಿರು ಬಾವುಟವನ್ನು ದಾವಣಗೆರೆ ಆಹ್ಮದ್ ನಗರದ 3ನೇ ಮತ್ತು 4ನೇ ಕ್ರಾಸ್ ನ ಮಧ್ಯದಲ್ಲಿ ಸ್ಥಾಪಿಸಿರುವ ಏರ್ಟೆಲ್ ಟವ‌ರ್ ಮೇಲೆ ಕಟ್ಟಿದ್ದು, ಇದನ್ನು ನೋಡಿದ ದಾವಣಗೆರೆ ನಗರ, ಎಸ್ ಪಿ ಎಸ್ ನಗರ ವಾಸಿ ಗಣೇಶ ಅಲಿಯಾಸ್ ಕ್ರಾಕ್ ಗಣಿ ಎಂಬುವರು ಉದ್ದೇಶ ಪೂರ್ವಕವಾಗಿ ಸೆ. 15ರಂದು ಬೆಳಿಗ್ಗೆ 10 ಗಂಟೆಯಿಂದ 11 ಗಂಟೆ ಮಧ್ಯದ ಅವಧಿಯಲ್ಲಿ ಏರ್ಟೆಲ್ ಟವರ್ ನ್ನು ಹತ್ತಿ ಹಸಿರು ಬಾವುಟದ ಮೇಲೆ ಭಗಧ್ವಜವನ್ನು ಕಟ್ಟಲು ಏರುತ್ತಿರುವುದನ್ನು ಮೊಬೈಲ್ ನಿಂದ ಚಿತ್ರಿಕರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ (instagram) ಹಾಕಿದ್ದ.

ಗಣೇಶ ಅಲಿಯಾಸ್ ಕ್ರಾಕ್ ಗಣಿ ವಿರುದ್ಧ ಠಾಣಾ ಗುನ್ನೆ ನಂ: 150/2024 ಕಲಂ 353(2) ಕೈಗೊಂಡಿರುತ್ತದೆ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಸಾರ್ವಜನಿಕರಿಗೆ ಸೂಚನೆ:

ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ನಿಂದನೆ, ಕೋಮು ಪ್ರಚೋದನಕಾರಿ, ಸುಳ್ಳು ಸುದ್ದಿಗಳು, ವ್ಯಕ್ತಿ ನಿಂದನೆ ಪೋಸ್ಟ್ ಗಳನ್ನು ಹಾಕುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಉಮಾ ಪ್ರಶಾಂತ್ ಎಚ್ಚರಿಕೆ ನೀಡಿದ್ದಾರೆ.

ಯುವಕರು, ಶಾಲಾ ಕಾಲೇಜ್ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮುಂಚೆ ಹೆಚ್ಚು ಜಾಗರೂಕತೆ ವಹಿಸಬೇಕು ಈ ಬಗ್ಗೆ ಪೋಷಕರುಗಳು ತಮ್ಮ ತಮ್ಮ ಮಕ್ಕಳಿಗೆ ಹಾಗೂ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು, ಉಪನ್ಯಾಸಕರು ತಮ್ಮ ವಿದ್ಯಾರ್ಥಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಳಕೆ ಬಗ್ಗೆ ಹಾಗೂ ಪೋಸ್ಟ್ ಮಾಡುವ ಮುಂಚೆ ಜಾಗರೂಕತೆ ವಹಿಸುವ ಬಗ್ಗೆ ಸೂಕ್ತ ತಿಳಿವಳಿಕೆ ನೀಡುವಂತೆ ಸೂಚನೆ ನೀಡಿದ್ದಾರೆ.

ಈಗಾಗಲೇ ಪೊಲೀಸ್ ಇಲಾಖೆಯು ಶಾಲಾ ಕಾಲೇಜುಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಯುವ ಸಮೂಹ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಜಾಗರೂಕತೆ ವಹಿಸುವ ಬಗ್ಗೆ ಹಾಗೂ ಕಾನೂನು ಬಾಹಿರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದರೆ ಎದುರಿಬೇಕಾಗುವ ಕಾನೂನು ಕ್ರಮಗಳ ಬಗ್ಗೆ ಜಾಗರೂಕತೆ ಮೂಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

india

ಕ್ಷಣಕ್ಷಣಕ್ಕೂ ರೋಚಕದಾಟ.. ವಿಜಯಮಾಲೆ ಹಾವು ಏಣಿ ಆಟ: ಇಂಗ್ಲೆಂಡ್ ವಿರುದ್ದ ಭಾರತಕ್ಕೆ 6 ರನ್ ರೋಚಕ ಜಯ!

D. K. Shivakumar

ಸೋನಿಯಾ ಗಾಂಧಿಯರದ್ದು ಸಾಟಿಯಿಲ್ಲದ ರಾಜಕೀಯ ತ್ಯಾಗ: ಡಿ. ಕೆ. ಶಿವಕುಮಾರ್ ಸ್ಫೋಟಕ ಮಾತು… ಮುಖ್ಯಮಂತ್ರಿ ಪಟ್ಟದ ಮೇಲಿನ ಕಣ್ಣು!

H. C. Mahadevappa

ಪುಣ್ಯತಿಥಿಯ ಸಂಸ್ಮರಣಾ ಕಾರ್ಯಕ್ರಮದಲ್ಲೇ ಅಪಮಾನ: ಇತಿಹಾಸ ತಿರುಚುವ ಕೆಲಸ ನಿಲ್ಲಿಸಿ ಹೆಚ್. ಸಿ. ಮಹಾದೇವಪ್ಪ!

Pahalgam

ವೋಟರ್ ಐಡಿ, ಕ್ಯಾಂಡಿಲ್ಯಾಂಡ್ ಚಾಕೊಲೇಟ್‌ಗಳು, ಜಿಪಿಎಸ್: ಪಹಲ್ಗಾಮ್ ದಾಳಿ ಉಗ್ರರು ಪಾಕಿಸ್ತಾನದವರೆಂದು ಸಾಬೀತು!

RAHUL GANDHI

ಭಾರತ – ಚೀನಾ ಗಡಿ ಹೇಳಿಕೆ: ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಸುಪ್ರೀಂ ತಡೆ!

ಕನ್ನಂಬಾಡಿ

ಕನ್ನಂಬಾಡಿ ಕಟ್ಟೆಗೆ ಅಡಿಪಾಯ ಹಾಕಿದ್ದು ಟಿಪ್ಪು: “ಹೆಚ್. ಸಿ. ಮಹಾದೇವಪ್ಪನವರೇ ರಾಜಮನೆತನದ ಕೊಡುಗೆ ಗೌರವಿಸಿ, ಇಲ್ಲದಿದ್ದರೆ ತೆಪ್ಪಗಿರಿ!”

Leave a Comment