Home ಕ್ರೈಂ ನ್ಯೂಸ್ ಅಂಕಿತಾ ಭಂಡಾರಿ ಖಾಸಗಿ ಚಾಟ್ ಬಹಿರಂಗ ವಿವಾದ: ದೋಷಿಯ ತಂದೆ ವಿನೋದ್ ಆರ್ಯ ವಿರುದ್ಧ ಪೊಲೀಸ್ ಗೆ ದೂರು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಅಂಕಿತಾ ಭಂಡಾರಿ ಖಾಸಗಿ ಚಾಟ್ ಬಹಿರಂಗ ವಿವಾದ: ದೋಷಿಯ ತಂದೆ ವಿನೋದ್ ಆರ್ಯ ವಿರುದ್ಧ ಪೊಲೀಸ್ ಗೆ ದೂರು!

Share
ಅಂಕಿತಾ ಭಂಡಾರಿ
Share

ದಹರಾಡೂನ್: ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಪುಲ್ಕಿತ್ ಆರ್ಯನ ತಂದೆ ಹಾಗೂ ಉಚ್ಚಾಟಿತ ಬಿಜೆಪಿ ನಾಯಕ ವಿನೋದ್ ಆರ್ಯ ವಿರುದ್ಧ ಹರಿದ್ವಾರದ ನಗರ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿದೆ.

ಸಂತ್ರತೆ ಅಂಕಿತಾಳ ಖಾಸಗಿ ವಾಟ್ಸಾಪ್ ಚಾಟ್‌ಗಳನ್ನು ಬಹಿರಂಗಪಡಿಸುವ ಮೂಲಕ ತನಿಖೆಯನ್ನು ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದು ‘ಪಹಾಡಿ ಮಹಾಸಭಾ’ ಸಂಘಟನೆಯು ಗಂಭೀರ ಆರೋಪ ಮಾಡಿದೆ.

ಕಳೆದ ಭಾನುವಾರ ಸುದ್ದಿಗೋಷ್ಠಿ ನಡೆಸಿದ್ದ ವಿನೋದ್ ಆರ್ಯ, ತಮ್ಮ ಮಗನನ್ನು ರಾಜಕೀಯ ಒತ್ತಡದಿಂದ ತಪ್ಪು ಕೇಸ್‌ನಲ್ಲಿ ಸಿಲುಕಿಸಲಾಗಿದೆ ಎಂದು ವಾದಿಸಿದ್ದರು. ಅಂಕಿತಾ ಹತ್ಯೆಯಾಗಿಲ್ಲ, ಬದಲಿಗೆ ಪೋಷಕರು ಮತ್ತು ಪುರುಷ ಸ್ನೇಹಿತನ ಕಿರುಕುಳದಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಅವರು, ಅಂಕಿತಾ ಹಾಗೂ ಆಕೆಯ ಸ್ನೇಹಿತನ ನಡುವಿನ 4,000ಕ್ಕೂ ಹೆಚ್ಚು ಪುಟಗಳ ಖಾಸಗಿ ಚಾಟ್‌ಗಳನ್ನು ಬಿಡುಗಡೆ ಮಾಡಿದ್ದರು. ಈ ಕೃತ್ಯವು ಮೃತರ ಗೌರವ ಮತ್ತು ಖಾಸಗಿತನದ ಉಲ್ಲಂಘನೆಯಾಗಿದೆ ಎಂದು ಪಹಾಡಿ ಮಹಾಸಭಾ ಖಂಡಿಸಿದೆ.

ಖಾಸಗಿತನ ಗಂಭೀರ ಉಲ್ಲಂಘನೆ: ಅಂಕಿತಾ ಭಂಡಾರಿಯ ವೈಯಕ್ತಿಕ ಮತ್ತು ಖಾಸಗಿ ಚಾಟ್‌ಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿರುವುದು ಸಂತ್ರತೆಯ ಘನತೆಗೆ ಧಕ್ಕೆ ತಂದಿದೆ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.

ಪೊಲೀಸ್ ದೂರು ದಾಖಲು: ಪಹಾಡಿ ಮಹಾಸಭಾದ ಅಧ್ಯಕ್ಷರು ಹಾಗೂ ಮಹಿಳಾ ಘಟಕದ ಮುಖಂಡರು ಹರಿದ್ವಾರದ ಪೊಲೀಸ್ ಠಾಣೆಗೆ ತೆರಳಿ ವಿನೋದ್ ಆರ್ಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಔಪಚಾರಿಕ ದೂರು ಸಲ್ಲಿಸಿದ್ದಾರೆ.

ಚಾಟ್‌ಗಳ ಮೂಲದ ಬಗ್ಗೆ ತನಿಖೆಗೆ ಒತ್ತಾಯ: ಆ 4,000 ಪುಟಗಳ ಚಾಟ್‌ಗಳು ವಿನೋದ್ ಆರ್ಯರಿಗೆ ಹೇಗೆ ಸಿಕ್ಕವು ಎಂಬುದರ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ.

ಪ್ರಕರಣದ ಹಿನ್ನೆಲೆ: 2022ರ ಸೆಪ್ಟೆಂಬರ್ 18ರಂದು ರಿಷಿಕೇಷ್ ಸಮೀಪದ ವಂತಾರಾ ರೆಸಾರ್ಟ್‌ನ ಸ್ವಾಗತಕಾರಿಣಿಯಾಗಿದ್ದ 19 ವರ್ಷದ ಅಂಕಿತಾ ಭಂಡಾರಿಯನ್ನು ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ ಮತ್ತು ಸಹಚರರು ಕೊಲೆ ಮಾಡಿದ್ದರು. ಈ ಪ್ರಕರಣದಲ್ಲಿ ಮೂವರು ದೋಷಿಗಳಿಗೆ ಜೀವಾವಧಿ ಶಿಕ್ಷೆಯಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles