ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಏಲಕ್ಕಿಯ ನೀರು ಕುಡಿಯುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

On: June 26, 2024 9:15 AM
Follow Us:
---Advertisement---

ಏಲಕ್ಕಿಯು ಭಾರತೀಯ ಅಡುಗೆಮನೆಯಲ್ಲಿ ಜನಪ್ರಿಯವಾದ ಮಸಾಲೆ ಪದಾರ್ಥಗಳಲ್ಲಿ ಒಂದಾಗಿದೆ. ಇದು ಊಟದಲ್ಲಿ ಪರಿಮಳವನ್ನು ಹರಡಲು ಮಾತ್ರವಲ್ಲದೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಏಲಕ್ಕಿಯಲ್ಲಿ ವಿಟಮಿನ್‌ಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ರೈಬೋಫ್ಲಾವಿನ್, ನಿಯಾಸಿನ್, ವಿಟಮಿನ್-ಸಿ, ಕಬ್ಬಿಣ, ಮ್ಯಾಂಗನೀಸ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಪಿನಿನ್, ಮೈಸಿನ್, ಫೆಲಾಂಡ್ರಿನ್ ಮತ್ತು ಡಯೆಟರಿ ಫೈಬರ್ ಸೇರಿದಂತೆ ಅನೇಕ ಪೋಷಕಾಂಶಗಳು ಏಲಕ್ಕಿಯಲ್ಲಿವೆ.

ಇನ್ನು ಏಲಕ್ಕಿಯನ್ನು ಆಹಾರದಲ್ಲಿ ಮಾತ್ರವಲ್ಲದೆ, ನೀರಿನಲ್ಲಿ ನೆನೆಸಿಟ್ಟು ಅಥವಾ ಬೇಯಿಸಿ ಸಹ ಸೇವಿಸಬಹುದು. ಏಲಕ್ಕಿಯ ನೀರು ದೇಹದಲ್ಲಿ ಸಂಗ್ರಹವಾಗಿರುವ ಅಧಿಕ ಕೊಬ್ಬನ್ನು ಕರಗಿಸುತ್ತದೆ. ತೂಕವನ್ನು ನಿಯಂತ್ರಣದಲ್ಲಿ ಇಡುತ್ತದೆ. ಏಲಕ್ಕಿಯ ಇತರ ಆರೋಗ್ಯ ಪ್ರಯೋಜನಗಳೇನು ಎಂಬುದನ್ನು ನಾವೀಗ ತಿಳಿಯೋಣ. ಏಲಕ್ಕಿ ಬೇಯಿಸಿದ ನೀರು ಕುಡಿದರೆ ಶೀತ ಮತ್ತು ಗಂಟಲು ನೋವು ನಿವಾರಣೆಯಾಗುತ್ತದೆ. ಏಲಕ್ಕಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ರೋಗನಿರೋಧಕ ಶಕ್ತಿ ಕೂಡ ಸುಧಾರಿಸುತ್ತದೆ.

ಏಲಕ್ಕಿ ನೀರನ್ನು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಅಲ್ಲದೆ, ಹೊಟ್ಟೆ ನೋವನ್ನು ನಿವಾರಿಸುತ್ತದೆ. ಏಲಕ್ಕಿಯು ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಒತ್ತಡವನ್ನು ಕಡಿಮೆ ಮಾಡುವಲ್ಲಿ ಏಲಕ್ಕಿಯು ಅದ್ಭುತವಾಗಿ ಕೆಲಸ ಮಾಡುತ್ತದೆ. ಬಾಯಿಯ ದುರ್ವಾಸನೆ ಸಮಸ್ಯೆ ನಿವಾರಣೆಯಾಗುತ್ತದೆ. ಅಲ್ಲದೆ, ಹಲ್ಲಿನ ಸಮಸ್ಯೆಗಳು ಸಹ ಕಡಿಮೆಯಾಗುತ್ತದೆ. ಏಲಕ್ಕಿಯಲ್ಲಿ ಕಂಡುಬರುವ ಫೈಟೊಕೆಮಿಕಲ್ ಸಿನಿಯೋಲ್, ಕೆಟ್ಟ ವಾಸನೆಯ ಬ್ಯಾಕ್ಟೀರಿಯಾವನ್ನು ಕೊಂದು ಹಲ್ಲಿನ ಆರೈಕೆಗೆ ಸಹಾಯ ಮಾಡುತ್ತದೆ. ಹೀಗೆ ಅನೇಕ ರೀತಿಯ ಸಮಸ್ಯೆಗಳನ್ನು ಏಲಕ್ಕಿ ಕಡಿಮೆ ಮಾಡುತ್ತದೆ.

Join WhatsApp

Join Now

Join Telegram

Join Now

Leave a Comment