SUDDIKSHANA KANNADA NEWS/ DAVANAGERE/ DATE:11-12-2023
ದಾವಣಗೆರೆ: ಚಿಕ್ಕಬಳ್ಳಾಪುರ, ಚಿಂತಾಮಣಿಯಿಂದ ದಲಿತ ಮುಖಂಡರು ಬೆಳಗಾವಿ ಅಧಿವೇಶನಕ್ಕೆ ತೆರಳಲಿ ಮನವಿ ಸಲ್ಲಿಸಲು ಸೋಮವಾರ ದಾವಣಗೆರೆ ಸಮೀಪ ತೆರಳುವಾಗ ಬಸ್ ಅಪಘಾತವಾಗಿ ಕೆಲವರು ಗಾಯಾಳುಗಳಾಗಿದ್ದಾರೆ.
ಗಾಯಾಳುಗಳನ್ನು ಸಿಜೆ ಹಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿ ಇವರ ಯೋಗಕ್ಷೇಮವನ್ನು ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ವಿಚಾರಿಸಿದರು. ಸೋಮವಾರ ಬೆಳಗಿನ ಜಾವ 3.25 ರ ಸುಮಾರಿಗೆ ಹದಡಿ ಕ್ರಾಸ್ ಸೇತುವೆ ಬಳಿ, ಜಿಲ್ಲಾ ಪಂಚಾಯತ್ ಕಚೇರಿ ಹತ್ತಿರ ಬಸ್ ಅಪಘಾತವಾಗಿ ಸುಮಾರು 18 ಜನರು ಗಾಯಾಳುಗಳಾಗಿದ್ದಾರೆ.
ಇವರು ಚಿಂತಾಮಣಿ, ಚಿಕ್ಕಬಳ್ಳಾಪುರ, ಗೌರಿಬಿದನೂರು ನಿವಾಸಿಗಳಾಗಿದ್ದಾರೆ. ಈ ವೇಳೆ ಗಾಯಾಳುಗಳಿಗೆ ಸೂಕ್ತವಾದ ಚಿಕಿತ್ಸೆಯನ್ನು ನೀಡಲು ಸೂಚನೆ ನೀಡಿದ ಜಿಲ್ಲಾಧಿಕಾರಿ ಅವರು ಇವರಿಗೆ ಯಾವುದೇ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದಲ್ಲಿ ಕೂಡಲೇ ನೀಡಲು ತಿಳಿಸಿದರು.
ಜಿಲ್ಲಾ ಸರ್ಜನ್ ಡಾ; ನಾಗೇಂದ್ರಪ್ಪ ಹಾಗೂ ವಿವಿಧ ಮುಖಂಡರು ಉಪಸ್ಥಿತರಿದ್ದರು.