ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಒಳಮೀಸಲಾತಿ ನಿರ್ಧಾರ ಅವೈಜ್ಞಾನಿಕ: ಬುಡಕಟ್ಟು ಮಹಾಸಭಾ ಆರೋಪ

On: March 31, 2023 10:45 AM
Follow Us:
---Advertisement---

SUDDIKSHANA KANNADA NEWS / DAVANAGERE 

DATE:31-03-2023

ದಾವಣಗೆರೆ: ಸದಾಶಿವ ಆಯೋಗ ಜಾರಿ ಮಾಡುವ ಮೂಲಕ ಒಳಮೀಸಲಾತಿ ನೀಡಿರುವ ಬಸವರಾಜ್ ಬೊಮ್ಮಾಯಿ (BASAVARAJ BOMMAI) ನೇತೃತ್ವದ ಸಚಿವ ಸಂಪುಟ ಸಭೆಯ ನಿರ್ಧಾರ ಅವೈಜ್ಞಾನಿಕ ಎಂದು ಕರ್ನಾಟಕ (KARNATAKA) ರಾಜ್ಯ (STATE)  ಎಸ್ಸಿ, ಎಸ್ಟಿ (SC, ST) ಅಲೆಮಾರಿ ಬುಡಕಟ್ಟು ಮಹಾಸಭಾ ಆರೋಪಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಕಾರ್ಯಾಧ್ಯಕ್ಷ ವಿ. ಸಣ್ಣಅಜ್ಜಯ್ಯ ಅವರು, ಸುಮಾರು 88 ಬುಡಕಟ್ಟು ಸಮುದಾಯಗಳಿಗೆ ಮೀಸಲಾತಿ ನೀಡದೇ ಅನ್ಯಾಯ ಮಾಡಲಾಗಿದೆ. ರಾಜ್ಯದಲ್ಲಿ 5 ಲಕ್ಷದ 87 ಸಾವಿರಕ್ಕೂ ಹೆಚ್ಚು ಸಮುದಾಯದ ಜನರಿದ್ದು, ವರ್ಗೀಕರಣವನ್ನು ವರ್ಗ 4ರಲ್ಲಿ ಗುರುತಿಸಿರುವುದನ್ನು 88 ಸಮುದಾಯಗಳು ತೀವ್ರವಾಗಿ ವಿರೋಧಿಸುತ್ತವೆ ಎಂದು ತಿಳಿಸಿದರು.

ಇದುವರೆಗೆ ಸಮಾಜದ ಮುಖ್ಯ ವಾಹಿನಿಯಿಂದ ದೂರವಿರುವ ಗುಡಿಸಲು, ಗಡಾರಗಳಲ್ಲಿ ವಾಸ ಮಾಡುತ್ತಾ ಧಾರ್ಮಿಕ ಭಿಕ್ಷಾಟನೆ ಮೂಲಕ ಜೀವನ ಸಾಗಿಸಲಾಗುತ್ತಿದೆ. ಇದುವರೆಗೆ ಶಾಲೆಯ ಮುಖವನ್ನೇ ನೋಡಿಲ್ಲ. ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ (ADHAR CARD), ರೇಷನ್ ಕಾರ್ಡ್ (CARD) ಸೇರಿದಂತೆ ಯಾವುದೇ ದಾಖಲೆಗಳಿಲ್ಲ. ವಿಳಾಸವೂ ಇಲ್ಲ. ಊರಿಂದ ಊರಿಗೆ ಅಲೆಯುವ ಅಲೆಮಾರಿ ಮತ್ತಿತರ ಸಮುದಾಯಗಳೆಂದು 4 ನೇ ವರ್ಗದಲ್ಲಿ 88 ಜಾತಿಗಳನ್ನು ಗುರುತಿಸಿ ಕೇವಲ ಶೇಕಡಾ 1ರಷ್ಟು ಮೀಸಲಾತಿ ನೀಡಿರುವುದು ಅತ್ಯಂತ ಅವೈಜ್ಞಾನಿಕ ಕ್ರಮ ಎಂದು ಆರೋಪಿಸಿದರು.

ಪರಿಶಿಷ್ಟ ಜಾತಿಗೆ ಈ ಹಿಂದೆ ಶೇ. 15ರಷ್ಟು ಮೀಸಲಾತಿ ಇತ್ತು. ಬಲಾಢ್ಯ ಸಮುದಾಯಗಳೇ ಹೆಚ್ಚಿನ ಮೀಸಲಾತಿ ಪಡೆದಿವೆ. ಜನಂಸಂಖ್ಯೆ ಆಧಾರದ ಮೇಲೆ ಮೀಸಲಾತಿ ವರ್ಗೀಕರಣ ಮಾಡದೇ ಇದುವರೆಗೆ ಯಾವ ವರ್ಗಗಳು ಶೇ. 15ರಷ್ಟು ಮೀಸಲಾತಿ ಪಡೆದು ಆರ್ಥಿಕ, ಶೈಕ್ಷಣಿಕ, ರಾಜಕೀಯ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಿವೆ. ಇಂಥ ಸಮುದಾಯಗಳಿಗೆ ಸ್ವಲ್ಪ ಮೀಸಲಾತಿ ಕಡಿಮೆ ಮಾಡಿ ಶಾಲೆಯ ಮುಖವನ್ನೇ ನೋಡದ ಬುಡಕಟ್ಟು ಸಮುದಾಯಗಳಿಗೆ ನೀಡಬೇಕಿತ್ತು. ಆದ್ರೆ, ಈ ಕೆಲಸ ಆಗಿಲ್ಲ. ಇದು ಬೇಸರ ತಂದಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಮಹಾಸಭಾದ ವೀರೇಶ್, ದುರ್ಗಪ್ಪ, ಕಿರಣ್ ಕುಮಾರ್, ಡಿ. ಮಂಜಪ್ಪ, ಹೇಮಣ್ಣ, ಆಕಾಶ್ ಮತ್ತಿತರರು ಉಪಸ್ಥಿತರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment