ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಯಡಿಯೂರಪ್ಪ ಪ್ರಚಾರಕ್ಕೆ ಹೆಚ್ಚು ಬರದಿರುವುದು ಕಾಂಗ್ರೆಸ್ ಗೆ ಲಾಭವಾಯ್ತಾ… ಅಮಿತ್ ಶಾ, ನಡ್ಡಾ ದಾವಣಗೆರೆಯಲ್ಲಿ ರೋಡ್ ಶೋ ನಡೆಸಲಿಲ್ಲ ಯಾಕೆ.?

On: May 13, 2023 12:56 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:13-05-2023

ದಾವಣಗೆರೆ(DAVANAGERE) : ದಾವಣಗೆರೆ (DAVANAGERE) ಜಿಲ್ಲೆ ಬಿಜೆಪಿ ಭದ್ರಕೋಟೆ ಎಂಬುದರಲ್ಲಿ ಎರಡು ಮಾತಿರಲಿಲ್ಲ. ಕಳೆದ ಚುನಾವಣೆಯಲ್ಲಿ ಏಳು ಕ್ಷೇತ್ರಗಳ ಪೈಕಿ ಐದರಲ್ಲಿ ಜಯಗಳಿಸಿದ್ದ ಕೇಸರಿ ಪಡೆ ಸಂಪೂರ್ಣವಾಗಿ ನೆಲಕಚ್ಚಲು ಕಾರಣ ಏನು ಎಂಬುದು ಈಗ ಎಲ್ಲೆಡೆ ಚರ್ಚಿತ ವಿಷಯ. ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಜಿಲ್ಲೆಯ ಹೆಚ್ಚು ಕ್ಷೇತ್ರಗಳಲ್ಲಿ ಪ್ರಚಾರ ಮಾಡದಿರುವುದು ಬಿಜೆಪಿ ಭಾರೀ ಹಿನ್ನೆಡೆ ತಂದಿದೆ.

ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಯಡಿಯೂರಪ್ಪ ರೋಡ್ ಶೋ ಆಗಲೀ, ಪಕ್ಷದ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿಲ್ಲ. ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಎಂದರೆ ಜಗಳೂರು ಮತ್ತು
ಮಾಯಕೊಂಡದಲ್ಲಿ ಒಮ್ಮೆ ಬಂದು ಪ್ರಚಾರ ಮಾಡಿ ಹೋಗಿದ್ದರು. ಅದೇ ರೀತಿಯಲ್ಲಿ ಹೊನ್ನಾಳಿಯಲ್ಲೂ ಹೆಚ್ಚು ಸಕ್ರಿಯವಾಗಿ ಪ್ರಚಾರಕ್ಕೆ ಬಾರದಿರುವುದು ಬಿಜೆಪಿಗೆ ಹಿನ್ನೆಡೆ ತಂದಿದೆ.

ಎಂ. ಪಿ. ರೇಣುಕಾಚಾರ್ಯ, ಜಗಳೂರು ಎಸ್. ವಿ. ರಾಮಚಂದ್ರಪ್ಪ ಹಾಗೂ ಮಾಯಕೊಂಡದ ಬಸವರಾಜ್ ನಾಯ್ಕ್ ಪರ ಮಾತ್ರ ಪ್ರಚಾರ ಮಾಡಿದರು. ಅದೂ ಕೇವಲ ಒಮ್ಮೆ ಬಾರಿ ಮಾತ್ರ. ದಾವಣಗೆರೆ ಜಿಲ್ಲೆಯಲ್ಲಿ ಯಡಿಯೂರಪ್ಪರ ಪರವಾಗಿ ಹಲವಾರು ಮಂದಿ ಇದ್ದಾರೆ. ಕೆಜೆಪಿ ಕಟ್ಟಿದಾಗ 2013ರಲ್ಲಿ ಬಿಜೆಪಿಗೆ ಪೆಟ್ಟು ಬಿದ್ದಿತ್ತು. ಆಗ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಲ್ಲಿ ಗೆದ್ದು ಬೀಗಿತ್ತು. ಈ ಬಾರಿ ಯಡಿಯೂರಪ್ಪ ಅವರು ಪ್ರಚಾರಕ್ಕೆ ಬಾರದೇ ಇರುವುದು ಬಿಜೆಪಿ ಅಭ್ಯರ್ಥಿಗಳ ಹೀನಾಯ ಸೋಲಿಗೆ ಕಾರಣ ಎಂದು ಹೇಳಲಾಗುತ್ತಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ ಸೇರಿದಂತೆ ಹಲವು ನಾಯಕರು ಭರ್ಜರಿ ಪ್ರಚಾರ ನಡೆಸಿದರು. ಅಮಿತ್ ಶಾ ಹರಿಹರದಲ್ಲಿ ರೋಡ್ ಶೋ ನಡೆಸಿದರೆ, ಜೆ. ಪಿ. ನಡ್ಡಾ ಕೇವಲ ಮಾಯಕೊಂಡ ಹಾಗೂ ಹೊನ್ನಾಳಿಯಲ್ಲಿ ನಡೆದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿಸಿಕೊಂಡರು. ಈ ನಾಯಕರು ದಾವಣಗೆರೆ ಉತ್ತರ ಮತ್ತು ದಾವಣಗೆರೆ ದಕ್ಷಿಣಕ್ಕೆ ಬಾರಲೇ ಇಲ್ಲ. ಬಿಜೆಪಿ ಉತ್ತರ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರು ಸ್ಥಳೀಯ ನಾಯಕರ ಜೊತೆ ಪ್ರಚಾರ ನಡೆಸಿದರು. ಯಡಿಯೂರಪ್ಪ ಬಾರದೇ ಇರುವುದು, ಕೇಂದ್ರ ನಾಯಕರು ಹೆಚ್ಚು ಒತ್ತು ಕೊಡದಿರುವುದು ಈ ಎರಡು ಕ್ಷೇತ್ರಗಳ ಸೋಲಿಗೆ ಕಾರಣವಾಗಿದೆ.

ಬಸವರಾಜ್ ಬೊಮ್ಮಾಯಿ ಅವರು ಹರಿಹರದಲ್ಲಿ ಬಿ. ಪಿ. ಹರೀಶ್ ಪರ ರೋಡ್ ಶೋ ನಡೆಸಿದರು. ಅಮಿತ್ ಶಾ ಸಹ ಪ್ರಚಾರ ಸಭೆಗೆ ಆಗಮಿಸಿ ಅಬ್ಬರಿಸಿ ಬೊಬ್ಬಿರಿದಿದ್ದರು. ಹರಿಹರದಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಹೆಚ್ಚು ಗಮನ ನೀಡಿದ್ದ ನಾಯಕರು ಇಲ್ಲಿಗೆ ಮಾತ್ರ ಸೀಮಿತ ಎಂಬಂತಾಗಿದ್ದು ವಿಪರ್ಯಾಸವೇ ಸರಿ.

ಸಿದ್ದರಾಮಯ್ಯರ 75 ನೇ ವರ್ಷದ ಅಮೃತ ಮಹೋತ್ಸವ ಭರ್ಜರಿಯಾಗಿ ಯಶಸ್ಸು ಕಂಡಿತ್ತು. ಲಕ್ಷಾಂತರ ಜನರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ರಾಜ್ಯ ರಾಜಕಾರಣದ ದಿಕ್ಕು ಬದಲಿಸಿದ್ದೇ ಈ ಸಮಾವೇಶ. ಆ ನಂತರ ಫಿನಿಕ್ಸ್ ನಂತೆ
ಎದ್ದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರಲ್ಲಿ ಹೊಸ ಉತ್ಸಾಹ ತಂದಿತು.

ಈ ಉತ್ಸಾಹದಿಂದಲೇ ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆಯನ್ನು ಒಟ್ಟಾಗಿ ಎದುರಿಸಿದರು. ಪರಿಣಾಮವಾಗಿ ಈಗ ಈ ಫಲಿತಾಂಶ ಬಂದಿದೆ. ಆ ಬಳಿಕ ಸಿದ್ದರಾಮಯ್ಯರು ದಾವಣಗೆರೆ ಜಿಲ್ಲೆಗೆ ಆಗಮಿಸಿ ಅಬ್ಬರಿಸಿ ಬೊಬ್ಬಿರಿದಿದ್ದರು. ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಚನ್ನಗಿರಿ, ಜಗಳೂರು, ಮಾಯಕೊಂಡ, ಹೊನ್ನಾಳಿಯಲ್ಲಿ ಹೆಚ್ಚು ಕೇಂದ್ರೀಕೃತಗೊಳಿಸಿದ್ದ ಸಿದ್ದರಾಮಯ್ಯರ ಪ್ರಚಾರ ಫಲ ಕೊಟ್ಟಿದೆ.

ಕೆಲ ಅಭ್ಯರ್ಥಿಗಳ ಜಿಲ್ಲೆಯ ಹಿರಿಯ ನಾಯಕರ ಸಂಪೂರ್ಣ ಸಹಕಾರ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ. ಮಾಯಕೊಂಡದಲ್ಲಿ ಬಿಜೆಪಿಗೆ ಉತ್ತಮ ವಾತಾವರಣ ಇತ್ತು. ಬಸವರಾಜ್ ನಾಯ್ಕ್ ಅವರಿಗೆ ಟಿಕೆಟ್ ಕೊಟ್ಟ ಕಾರಣಕ್ಕೆ ಬಂಡಾಯ ಎದ್ದಿದ್ದ ನಾಯಕರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಅಭ್ಯರ್ಥಿ ವಿರುದ್ಧ ರೋಷಾವೇಶ ತೋರಿಸಿದ್ದರು. ಆಮೇಲೆ ಹಿರಿಯ ನಾಯಕರ ಮಾತಿಗೆ ತಣ್ಣಗಾದರು. ಜಗಳೂರಿನಲ್ಲಿ ಹೆಚ್. ಪಿ. ರಾಜೇಶ್ ರು ಬಂಡಾಯ ನಿಂತ ಕಾರಣಕ್ಕೆ ಕಾಂಗ್ರೆಸ್ ಗೆ ಹಿನ್ನೆಡೆಯಾಗುತ್ತೆ ಎಂದು ಹೇಳಲಾಗಿತ್ತಾದರೂ ಕೊನೆ ಹಂತದಲ್ಲಿ ಕಾಂಗ್ರೆಸ್ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಅಚ್ಚರಿ ಫಲಿತಾಂಶ ಹೊರಬಿದ್ದಿದೆ.

 

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment