ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಗ್ರಾಹಕರಿಗೆ ಗುಡ್ ನ್ಯೂಸ್ ಕೊಟ್ಟ ಬಿಎಸ್‌ಎನ್‌ಎಲ್: ‘ದೀಪಾವಳಿ ಬೊನಾಂಜಾ’ ಸೇವೆ ಸ್ಪೆಷಾಲಿಟಿ ಏನು?

On: October 24, 2025 11:41 AM
Follow Us:
ಬಿಎಸ್‌ಎನ್‌ಎಲ್
---Advertisement---

ಬೆಂಗಳೂರು: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ ಅ.18 ರಿಂದ ನ.18 ರವರೆಗೆ ಒಂದು ತಿಂಗಳ ಸೀಮಿತ ಅವಧಿಗೆ ‘ದೀಪಾವಳಿ ಬೊನಾಂಜಾ-2025’ ಸೇವೆ ನೀಡುತ್ತಿದ್ದು, ಗ್ರಾಹಕರು ರಿಯಾಯಿತಿ ದರದಲ್ಲಿ ಸೇವೆ ಪಡೆದುಕೊಳ್ಳಬೇಕು ಎಂದು ಬಿಎಸ್ಎನ್ಎಲ್ ತಿಳಿಸಿದೆ.

READ ALSO THIS STORY: ಮುಜುಗರ ತರುವ ಹೇಳಿಕೆಗೆ ಹೈಕಮಾಂಡ್ ಬ್ರೇಕ್ ಹಾಕಲೇಬೇಕು: ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಬುಸುಗುಟ್ಟಿದ ಬಸವರಾಜ್ ಶಿವಗಂಗಾ!
ವಿಶೇಷ ಕಾರ್ಪೋರೇಟ್ ಕೊಡುಗೆ:

ಎಫ್‌ಆರ್‌ಸಿ1 ಯೋಜನೆಯ ಮೂಲಕ ಗ್ರಾಹಕರು ರೂ.1/- ಗೆ 4ಜಿ ಸೇವೆ ಪಡೆಯಬಹುದು. ಈ ಪ್ಲಾನ್ ನಲ್ಲಿ ಅನಿಯಮಿತ ಧ್ವನಿ ಕರೆ, 2ಜಿಬಿ ಡೇಟಾ/ದಿನದ ನಂತರ ವೇಗವನ್ನು 40 ಕೆಬಿಪಿಎಸ್ ಮತ್ತು 100 ಎಸ್‌ಎಂಎಸ್ (30 ದಿನಗಳಿಗೆ ಮಾತ್ರ). ಈ ಸೌಲಭ್ಯ ವ್ಯಾಪಾರ ಮತ್ತು ಬೃಹತ್ ಗ್ರಾಹಕರಿಗೆ ಅನ್ವಯಿಸುವುದಿಲ್ಲ.

ವಿಶೇಷ ಕಾರ್ಪೋರೇಟ್ ಕೊಡುಗೆ:

ಈ ಪ್ಲಾನ್ ನಲ್ಲಿ ಕನಿಷ್ಠ 10 ಹೊಸ ಪೋಸ್ಟ್ ಪೇಯ್ಡ್ ಬಿಎಸ್‌ಎನ್‌ಎಲ್ ಸಿಮ್ ಮತ್ತು ಒಂದು ಎಫ್‌ಟಿಟಿಹೆಚ್ ಸಂಪರ್ಕ ತೆಗೆದುಕೊಳ್ಳುವ ಕಾರ್ಪೋರೇಟ್ ಗ್ರಾಹಕರು ಎಲ್ಲಾ ಹೊಸ ಪೋಸ್ಟ್ ಪೇಯ್ಡ್ ಸಿಮ್ ಮತ್ತು ಎಫ್‌ಟಿಟಿಹೆಚ್ ಸಂಪರ್ಕಕ್ಕಾಗಿ ಮೊದಲ ತಿಂಗಳ ಎಫ್‌ಎಂಸಿ ಯಲ್ಲಿ ಶೇ.10 ರಷ್ಟು ರಿಯಾಯಿತಿ ಪಡೆಯುತ್ತಾರೆ.

ಶೇ.2.5 ರಿಯಾಯಿತಿ ಪಡೆಯಿರಿ:

ಸ್ನೇಹಿತರಿಗೆ ಅಥವಾ ಕುಟುಂಬದ ಸದಸ್ಯರ ಬಿಎಸ್‌ಎನ್‌ಎಲ್ ಸ್ವಯಂ ಆರೈಕೆ ಅಪ್ಲಿಕೇಶನ್ ಮೂಲಕ ರೂ.199 ಅಥವಾ ಅದಕ್ಕಿಂತ ಹೆಚ್ಚು ರಿಚಾರ್ಜ್ ಮಾಡುವ ಮೂಲಕ ಶೇ.2.5 ತ್ವರಿತ ರಿಯಾಯಿತಿ ಪಡೆಯಬಹುದು. ಮೊದಲ ರಿಚಾರ್ಜ್ಗಳಿಗೆ ಈ ಕೊಡುಗೆ ಅನ್ವಯಿಸುವುದಿಲ್ಲ.

ರೂ.485 ಮತ್ತು ರೂ.1999 ರಿಚಾರ್ಜ್ ಗಳಿಗೆ ರಿಯಾಯಿತಿ ಕೊಡುಗೆ:

ಬಿಎಸ್‌ಎನ್‌ಎಲ್ ಸೆಲ್ಫ್ ಕೇರ್ ಅಪ್ಲಿಕೇಷನ್ ಅಥವಾ ವೆಬ್ ಸೈಟ್ ಮೂಲಕ ಮಾಡಲಾದ ಎಸ್‌ಟಿವಿ ರೂ.485 ಮತ್ತು ಪಿವಿ ರೂ.1999 ರ ರಿಚಾರ್ಜ್ ಗಳಿಗೆ, ಎಂಆರ್‌ಪಿ ಮೇಲೆ ಶೇ.05 ರಷ್ಟು ರಿಯಾಯಿತಿ ಲಭಿಸಲಿದೆ.

ಹಿರಿಯ ನಾಗರಿಕರಿಗಾಗಿ ಹೊಸ ಪಿವಿ ರೂ.1812 ವಾರ್ಷಿಕ ಯೋಜನೆ ಬಿಡುಗಡೆ:

ಎಫ್‌ಆರ್‌ಸಿ ಪ್ರಕಾರ ಹಿರಿಯ ನಾಗರಿಕರಿಗಾಗಿ ರೂ.1812 ಗಳ ವಾರ್ಷಿಕ ಯೋಜನೆ ಬಿಡುಗಡೆ ಮಾಡಲಾಗಿದೆ. ಈ ಪ್ಲಾನ್ ನಲ್ಲಿ ಅನಿಯಮಿತ ಕರೆಗಳು, ಪ್ರತಿದಿನ 2ಜಿಬಿ ಡೇಟಾ (ನಂತರ ವೇಗವನ್ನು 40 ಕೆಬಿಪಿಎಸ್ ಗೆ ಇಳಿಸಿದ ಯು/ಎಲ್ ಡೇಟಾ), ಪ್ರತಿದಿನ ಉಚಿತ 100 ಎಸ್‌ಎಂಎಸ್ ಹಾಗೂ 6 ತಿಂಗಳ ವರೆಗೆ ಬಿಐಟಿವಿ ಪ್ರೀಮಿಯಂ ರಾಷ್ಟಿçÃಯ ಪ್ಯಾಕ್, ಉಚಿತ ಸಿಮ್ ದೊರೆಯಲಿದೆ.

ಇ-ಸಿಮ್ ಸೌಲಭ್ಯ:

ಬಿಎಸ್‌ಎನ್‌ಎಲ್ ಇ-ಸಿಮ್ ಸೌಲಭ್ಯ ಪರಿಚಯಿಸಿದ್ದು, ಈ ಸೌಲಭ್ಯ ಪಡೆಯಲು ಹೊಂದಾಣಿಕೆಯ ಮೊಬೈಲ್ ಹ್ಯಾಂಡ್ ಸೆಟ್ ಅಗತ್ಯ.

ಎಲ್ಲಾ ಗ್ರಾಹಕರು https://selfcare.bsnl.co.in ಆನ್‌ಲೈನ್ ನಲ್ಲಿ ಬಿಲ್ ಪಾವತಿಸುವ ಮೂಲಕ ಸೌಲಭ್ಯ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ www.bsnl.co.in ಗೆ ಭೇಟಿ ನೀಡಬಹುದು ಎಂದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment