Home ಕ್ರೈಂ ನ್ಯೂಸ್ ಎಂಪಿ ರೇಣುಕಾಚಾರ್ಯ “ಸಿಡಿ” ಆಟ ಇನ್ನು ನಡೆಯಲ್ಲ: ಏಕವಚನದಲ್ಲೇ ವಾಗ್ದಾಳಿ ನಡೆಸಿದ ಬಿಜೆಪಿ ಶಾಸಕ ಬಿ. ಪಿ. ಹರೀಶ್ ಸ್ಫೋಟಕ ಆರೋಪ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಎಂಪಿ ರೇಣುಕಾಚಾರ್ಯ “ಸಿಡಿ” ಆಟ ಇನ್ನು ನಡೆಯಲ್ಲ: ಏಕವಚನದಲ್ಲೇ ವಾಗ್ದಾಳಿ ನಡೆಸಿದ ಬಿಜೆಪಿ ಶಾಸಕ ಬಿ. ಪಿ. ಹರೀಶ್ ಸ್ಫೋಟಕ ಆರೋಪ!

Share
ರೇಣುಕಾಚಾರ್ಯ
Share

ದಾವಣಗೆರೆ: ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಹರಿಹರ ವಿಧಾನಸಭಾ ಕ್ಷೇತ್ರದ ರಾಜಕೀಯ ಸಮರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿರುವ ಬಿಜೆಪಿ ಶಾಸಕ ಬಿ.ಪಿ. ಹರೀಶ್, ಇಬ್ಬರೂ ನಾಯಕರದ್ದು ಒಂದೇ ರೀತಿಯ ಮನಸ್ಥಿತಿ ಎಂದು ನೇರ ಆರೋಪ ಮಾಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹಳೇ ನೆನಪುಗಳನ್ನು ಮೆಲುಕು ಹಾಕಿದ ಶಾಸಕರು, ತಾನು 1983ರಲ್ಲಿ ಕೌನ್ಸಿಲರ್ ಆಗಿದ್ದಾಗ ರೇಣುಕಾಚಾರ್ಯ ಚಿಕ್ಕವರಾಗಿದ್ದರು ಮತ್ತು ಅವರ ಅಣ್ಣನ ಜೊತೆ ತಾನು ಕ್ರಿಕೆಟ್ ಆಡುತ್ತಿದ್ದೆ ಎಂದು ತಿಳಿಸಿದರು. ತಮ್ಮ ಮೇಲಿನ ಆಸ್ತಿ ಖರೀದಿ ಹಾಗೂ ಚುನಾವಣಾ ಧನ ಸಹಾಯದ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ ಹರೀಶ್, ತಾವೆಂದಿಗೂ ಬ್ಯಾಂಕ್ ಚೆಕ್ ಹಾಗೂ ಅಧಿಕೃತ ಖಾತೆಗಳ ಮೂಲಕವೇ ಹಣಕಾಸು ವ್ಯವಹಾರ ನಡೆಸಿರುವುದಾಗಿ ಸ್ಪಷ್ಟಪಡಿಸಿದರು.

ಒಂದೇ ಮನಸ್ಥಿತಿಯ ನಾಯಕರು: ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಮಾಜಿ ಸಚಿವ ರೇಣುಕಾಚಾರ್ಯ ಇಬ್ಬರೂ ಒಂದೇ ಶೈಲಿಯ ರಾಜಕಾರಣ ಮಾಡುತ್ತಿದ್ದಾರೆ ಎಂದು ಶಾಸಕ ಬಿ.ಪಿ. ಹರೀಶ್ ಆರೋಪ.

ಪಾರದರ್ಶಕ ಆರ್ಥಿಕ ವ್ಯವಹಾರ: ಆಸ್ತಿ ಖರೀದಿ ಮತ್ತು ಹಣಕಾಸಿನ ಕುರಿತು ಕೇಳಿಬಂದ ಟೀಕೆಗಳಿಗೆ ತಿರುಗೇಟು ನೀಡಿ, ಎಲ್ಲವೂ ಚೆಕ್ ಮತ್ತು ಬ್ಯಾಂಕ್ ಖಾತೆ ಮೂಲಕವೇ ನಡೆದಿದೆ ಎಂದು ಸ್ಪಷ್ಟನೆ.

ಸಿಡಿ ಹಾಗೂ ಬೆದರಿಕೆ ರಾಜಕೀಯಕ್ಕೆ ಆಕ್ರೋಶ: ಹಿಂದೆ ತಂದೆ-ಮಗನ ಹಗರಣ ಬಿಚ್ಚಿಡುವುದಾಗಿ ಹಾಗೂ ಸಿಡಿ ತೋರಿಸಿ ಬೆದರಿಸುವುದಾಗಿ ಹೇಳುತ್ತಿದ್ದವರು ಈಗ ಬದಲಾಗಿದ್ದಾರೆ ಎಂದು ವಾಗ್ದಾಳಿ.

ಕಾರ್ಯಕರ್ತರಿಂದ ಎಚ್ಚರಿಕೆ: ಸುಳ್ಳು ಹೇಳುವ ಮೂಲಕ ಜನರನ್ನು ಮರಳು ಮಾಡುವ ಆಟಗಳು ಇನ್ನುಮುಂದೆ ನಡೆಯುವುದಿಲ್ಲ ಎಂದ ಶಾಸಕರು.

ಮುಂದುವರೆದು ಮಾತನಾಡಿದ ಶಾಸಕರು, ರೇಣುಕಾಚಾರ್ಯ ಮತ್ತು ಮಲ್ಲಿಕಾರ್ಜುನ್ ಅವರಿಗೆ ಸುಳ್ಳು ಹೇಳುವವರೇ ಮೇಷ್ಟ್ರುಗಳಾಗಿದ್ದಾರೆ ಎಂದು ವ್ಯಂಗ್ಯವಾಡಿದರು. ವಿಪಕ್ಷಗಳು ಅಥವಾ ಎದುರಾಳಿಗಳು ಮಾಡುವ ನಿರಾಧಾರ ಆರೋಪಗಳಿಗೆ ಜಗ್ಗುವುದಿಲ್ಲ ಎಂದ ಅವರು, ಕಾರ್ಯಕರ್ತರು ಎಲ್ಲವನ್ನೂ ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಸೂಕ್ತ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

Share

Leave a comment

Leave a Reply

Your email address will not be published. Required fields are marked *