ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಸೂರ್ಯ ಡೆವೆಲಪರ್ಸ್ ಗೆ ಐಷಾರಾಮಿ ವಿಲ್ಲಾ ನಿರ್ಮಾಣ ಯೋಜನೆಯ‌ ವಾರ್ಷಿಕ ಪ್ರಶಸ್ತಿ: ಪ್ರಶಸ್ತಿ ಪ್ರದಾನ ಮಾಡಿದ ಬಾಲಿವುಡ್ ತಾರೆ ಅನಿಲ್ ಕಪೂರ್

On: February 28, 2025 9:18 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:28-02-2025

– ಖ್ಯಾತ ಬಾಲಿವುಡ್ ತಾರೆ ಅನಿಲ್ ಕಪೂರ್ ರವರಿಂದ ಪ್ರಶಸ್ತಿ ಪಡೆದ ಸೂರ್ಯ ಡೆವೆಲಪರ್ಸ್ ಸಂಸ್ಥೆಯ ಪದಾಧಿಕಾರಿಗಳು.

– ಗೌರವದ ನಡೆ ನುಡಿಗಳಿಗೆ ಹೆಸರಾಗಿರುವ ಶ್ರೀ ವಿಶ್ವನಾಥ್ ಬಾತಿ ರವರ ನೇತೃತ್ವದ ಸೂರ್ಯ ಡೆವೆಲಪರ್ಸ್

ಬೆಂಗಳೂರು: ನಂಬಿಕೆ, ಬದ್ಧತೆ ಮತ್ತು ವಿಶ್ವಾಸಾರ್ಹತೆಯ ಮೂಲ ಮೌಲ್ಯಗಳಿಗೆ ಬದ್ಧರಾಗಿ , ಬೆಂಗಳೂರಿಗರ ಕನಸಿಗೆ ತಕ್ಕಂತೆ ಅತ್ಯುತ್ಕೃಷ್ಟ ಮನೆ ನಿರ್ಮಾಣದ ಯೋಜನೆ ರೂಪಿಸಿ ,ಆಧುನಿಕ ವಿನ್ಯಾಸಗಳು, ಹೊಸ ನಾವೀನ್ಯತೆಯೊಂದಿಗೆ , ಅತ್ಯುತ್ತಮ ಗುಣಮಟ್ಟದೊಂದಿಗೆ ಮನೆಗಳನ್ನು ನಿರ್ಮಿಸುವ ಖ್ಯಾತಿಯ ಹೆಸರಾಂತ ಸೂರ್ಯ ಡೆವೆಲಪರ್ಸ್ ಸಂಸ್ಥೆಗೆ ಐಷಾರಾಮಿ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಳಿಗಾಗಿ ಟೈಮ್ಸ್ ಆಫ್ ಇಂಡಿಯಾ ದಿಂದ ನೀಡಲಾಗುವ 2025 ವರ್ಷದ ಐಷಾರಾಮಿ ವಿಲ್ಲಾ ಪ್ರಾಜೆಕ್ಟ್ ಪ್ರಶಸ್ತಿಯು ಸಂದಿರುವುದು ಅತ್ಯಂತ ಸಂತೋಷದ ಸಂಗತಿ ಮತ್ತು ಹೆಮ್ಮೆಯ ವಿಷಯವಾಗಿದೆ.

ಬೆಂಗಳೂರಿನ ಶೆಲ್ಟಾನ್ ಹೋಟೆಲ್ ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಖ್ಯಾತ ಹಿಂದಿ ಚಲನಚಿತ್ರ ನಟ ಅನಿಲ್ ಕಪೂರ್ ರವರಿಂದ ಟೈಮ್ಸ್ ಆಫ್ ಇಂಡಿಯಾದಿಂದ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿಯನ್ನು ಸೂರ್ಯ ಡೆವೆಲಪರ್ಸ್ ಸಂಸ್ಥೆಯ ವ್ಯವಸ್ಥಾಪಕ ಪಾಲುದಾರರಾದ ಪ್ರಶಾಂತ್ ಕುಮಾರ್ ಎಚ್ ಹಾಗೂ ಮಾರಾಟ ವಿಭಾಗದ ಮುಖ್ಯಸ್ಥರಾದ ಶ್ರೀ ಪವನ್ ಕುಮಾರ್ ಪ್ರಶಸ್ತಿಯನ್ನು ಸ್ವೀಕರಿಸಿದರು.

16 ವರ್ಷಗಳ‌ ಅಪಾರ ಅನುಭವ, ಪರಿಣಿತಿ, ಮೃದು ಮಾತು, ಶ್ರದ್ದೆ , ಗೌರವದ ನಡೆ ನುಡಿಗಳಿಗೆ ಪ್ರಾಯರಾಗಿರುವ ಸೂರ್ಯ ಡೆವೆಲಪರ್ಸ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವಿಶ್ವನಾಥ್ ಬಾತಿ ರವರ ದಕ್ಷ ನೇತೃತ್ವದಲ್ಲಿ ಯೋಜಿತ ಹೆಜ್ಜೆಗಳೊಂದಿಗೆ, ಪ್ರಾಮಾಣಿಕ ಮತ್ತು ಪಾರದರ್ಶಕ ತತ್ವಗಳೊಂದಿಗೆ, ಸಿಬ್ಬಂದಿಗಳ ಪರಿಶ್ರಮದಿಂದ ಮುನ್ನಡೆಯುತ್ತಿರುವ ಸೂರ್ಯ ಡೆವೆಲಪರ್ಸ್ ಐಷಾರಾಮಿ ವಸತಿ ಯೋಜನೆಗಳಿಗಷ್ಟೇ ಸೀಮಿತವಾಗದೆ ಗುಣಮಟ್ಟದ ಕೈಗಾರಿಕಾ ಮತ್ತು ವಾಣಿಜ್ಯ ಯೋಜನೆಗಳನ್ನು ರೂಪಿಸಿರುವಲ್ಲಿ, ಮಾನವೀಯ ಮೌಲ್ಯಗಳ ವಿಶೇಷತೆಗಳೊಂದಿಗೆ ಯಶಸ್ಸು ಸಾಧಿಸಿದೆ.

ಬೆಂಗಳೂರಿನಲ್ಲಿರುವ ತರಳಬಾಳು ಜಗದ್ಗುರು ಬೃಹನ್ಮಠದ ತರಳಬಾಳು ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರದ ಕಾರ್ಯದರ್ಶಿಯಾಗಿ, ಮಠ ಮತ್ತು ಸಮಾಜದ ಜವಾಬ್ದಾರಿ ಕಾರ್ಯಗಳ‌ನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸುವ ಬಾತಿ ವಿಶ್ವನಾಥ್ ರವರು ಸಮಾಜ ಸೇವಾ ಕಾರ್ಯಗಳಲ್ಲಿಯೂ ಸಹ ಹೆಚ್ಚು ತೊಡಗಿಸಿಕೊಂಡಿದ್ದಾರೆ.

ಬೆಂಗಳೂರಿನ ಸಮೀಪ ಪ್ರಶಾಂತ ಮತ್ತು ಪ್ರಕೃತಿ ಸೌಂದರ್ಯದ ನಡುವೆ 9 ಎಕರೆಗಳಷ್ಟು ವಿಸ್ತೀರ್ಣದಲ್ಲಿ 122 ಐಷಾರಾಮಿ 4BHK ಮತ್ತು 5BHK ವಿಲ್ಲಾಗಳನ್ನು ಸ್ಪ್ಯಾನಿಷ್ ಮಾದರಿಯಲ್ಲಿ ಸೂರ್ಯ ಡೆವೆಲಪರ್ಸ್ ಸಂಸ್ಥೆಯು ‘ಸೂರ್ಯ ವೇಲೆನ್ಸಿಯಾ’ ಲಕ್ಸುರಿ ಪ್ರಾಜೆಕ್ಟ್ ರೂಪುಗೊಳ್ಳುತ್ತಿದೆ. ಕಡಿಮೆ ಸಮಯದಲ್ಲಿಯೇ ಈ ಯೋಜನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅತ್ಯುತ್ಕೃಷ್ಟ ಸೂರ್ಯ ವೇಲೆನ್ಸಿಯಾ ಯೋಜನೆಯು ಖಾಸಗಿ ಮತ್ತು ಆರಾಮದಾಯಕ ಜೀವನ ಶೈಲಿಯ ಸಂತೋಷವನ್ನು ತರಲಿದೆ.

ಐಷಾರಾಮಿ ರಿಯಲ್ ಎಸ್ಟೇಟ್‌ ನಿರ್ಮಾಣ ಕ್ಷೇತ್ರದಲ್ಲಿ ನಾಯಕನಾಗಿ ಸೂರ್ಯ ಡೆವಲಪರ್‌ ಹೆಜ್ಜೆ ಇಟ್ಟಿರುವುದು‌ ಈ ಪ್ರತಿಷ್ಠಿತ ಪ್ರಶಸ್ತಿಯಿಂದ ಅನಾವರಣವಾಗಿರುವ ಜೊತೆಗೆ ಕಂಪನಿಯ ಬದ್ಧತೆ ಮತ್ತು ಮೌಲ್ಯಗಳಿಗೆ ದೊರೆತ ಯಶಸ್ಸಾಗಿದೆ.

ಉನ್ನತ ಆದರ್ಶಗಳೊಂದಿಗೆ ಗ್ರಾಹಕ ಸ್ನೇಹಿಯಾಗಿ ಮುನ್ನಡೆಯುತ್ತಿರುವ ಸೂರ್ಯ ಡೆವೆಲಪರ್ಸ್ ಸಂಸ್ಥೆಯು ಇನ್ನೂ ಮಹೋನ್ನತ ಸಾಧನೆಗಳನ್ನು ಸಾಧಿಸಲೆಂಬ ಆಶಯದೊಂದಿಗೆ, ಅಭಿನಂದನಾ ಪೂರ್ವಕ ಹಾರ್ದಿಕ ಶುಭಾಶಯಗಳು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment