ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ರಕ್ತದಾನ ಅಭಿಯಾನ: ಡಾ. ಪ್ರಭಾ ಮಲ್ಲಿಕಾರ್ಜುನ್ ರಿಂದ ರಕ್ತದಾನ: ಓದಿದ ಕಾಲೇಜಿನಲ್ಲಿ ರಕ್ತದಾನ ಮಾಡಿ ಮಾದರಿಯಾದ ಸಂಸದರು

On: September 19, 2025 5:37 PM
Follow Us:
Prabha Mallikarjun
---Advertisement---

SUDDIKSHANA KANNADA NEWS/ DAVANAGERE/DATE:19_09_2025

ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ನಗರದ ಡೆಂಟಲ್ ಕಾಲೇಜಿನಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ರಕ್ತದಾನ ಮಾಡುವ ಮೂಲಕ‌ ಚಾಲನೆ ನೀಡಿದರು.

READ ALSO THIS STORY: ಹೊಸಚಿಕ್ಕನಹಳ್ಳಿ ಸರ್ಕಾರಿಶಾಲೆಗೆ ಡೆಸ್ಕ್ ವಿತರಣೆ, ಶೈಕ್ಷಣಿಕ- ಕ್ರೀಡಾ ಕ್ಷೇತ್ರಕ್ಕೆ ಎಸ್. ಎಸ್. ಮಲ್ಲಿಕಾರ್ಜುನ್ ಕೊಡುಗೆ ಅಪಾರ: ಗಡಿಗುಡಾಳ್ ಮಂಜುನಾಥ್

ಎಸ್.ಎಸ್. ಕೇರ್ ಟ್ರಸ್ಟ್ ವಿದ್ಯಾರ್ಥಿ ಘಟಕದ ಸಹಯೋಗದಲ್ಲಿ ಇಂದಿನಿಂದ ಸೆ. 30ರವರೆಗೆ ಬಾಪೂಜಿ ಎಜುಕೇಶನ್ ಅಸೋಸಿಯೇಷನ್ ನ 10 ಶಿಕ್ಷಣ ಸಂಸ್ಥೆಗಳಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಂಸದರು ತಾವು ವಿದ್ಯಾಭ್ಯಾಸ ಮಾಡಿದ ವಿದ್ಯಾಸಂಸ್ಥೆಯಾದ ಬಾಪೂಜಿ ಡೆಂಟಲ್ ಕಾಲೇಜಿನಲ್ಲಿ ರಕ್ತದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ.

ಈ ವೇಳೆ ಮಾತನಾಡಿದ ಸಂಸದರು ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ತಮ್ಮ ತಮ್ಮ ಸಂಸ್ಥೆಗಳಲ್ಲಿ ನಿಗದಿತ ದಿನಾಂಕಗಳಲ್ಲಿ ಬಂದು ರಕ್ತದಾನ ಮಾಡುವಂತೆ ಕರೆ ನೀಡಿದರು.

ಪ್ರತಿ 2 ಸೆಕೆಂಡಿಗೆ ಒಮ್ಮೆ ಭಾರತದಲ್ಲಿ ರಕ್ತದ ಅವಶ್ಯಕತೆ ಉಂಟಾಗುತ್ತದೆ. ಪ್ರತಿದಿನ ಸುಮಾರು 12,000 ಮಂದಿ ರಕ್ತದ ಕೊರತೆಯಿಂದ ಜೀವ ಕಳೆದುಕೊಳ್ಳುತ್ತಾರೆ. ನಾವೆಲ್ಲಾ ಒಟ್ಟಾಗಿ ರಕ್ತದ ಕೊರತೆಯಿಂದ ಜೀವಹಾನಿಯನ್ನು ತಡೆಯೋಣ. ನೀವು ರಕ್ತದಾನ ಮಾಡಿದ ದಿನವನ್ನು ಮರೆಯಬಹುದು. ಆದರೆ ಅಗತ್ಯ ಇರುವವರು ತಮ್ಮ ಜೀವನಪರ್ಯಂತ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ.ನಾವು ಸಮಾಜಕ್ಕೆ ಕೊಡುವ ಅತಿ ಶ್ರೇಷ್ಠ ಕೊಡುಗೆ ರಕ್ತದಾನವಾಗಿದೆ. ಆದ್ದರಿಂದ ರಕ್ತದಾನ ಮಾಡಿ ಮಾದರಿಯಾಗೋಣ ಎಂದು ಕರೆ ನೀಡಿದರು.

ರಕ್ತದಾನದ ಮೊದಲ ದಿನ ನೂರು ಯೂನಿಟ್ ರಕ್ತ ಸಂಗ್ರಹಣೆಯಾಗಿದೆ. ಈ‌ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು,ವಿದ್ಯಾರ್ಥಿಗಳು ಹಾಗೂ ಎಸ್‌ಎಸ್ ಕೇರ್ ಟ್ರಸ್ಟ್ ನ ವಿದ್ಯಾರ್ಥಿ ವಿಭಾಗದ ಸದಸ್ಯರು ಉಪಸ್ಥಿತರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ರಾಶಿ

ಮಂಗಳವಾರದ ರಾಶಿ ಭವಿಷ್ಯ 14 ಅಕ್ಟೋಬರ್ 2025: ಈ ರಾಶಿಯವರಿಗೆ ಧನ ಲಾಭ 

ಸಿದ್ದರಾಮಯ್ಯ

ಜಸ್ಟ್ ಡಿನ್ನರ್ ಅಷ್ಟೇ, ರಾಜಕೀಯ ಚರ್ಚೆ ಇಲ್ಲ: ಸಚಿವ ಸಂಪುಟ ಪುನರ್ರಚನೆ ನಿರಾಕರಿಸಿದ ಸಿಎಂ ಸಿದ್ದರಾಮಯ್ಯ!

ದಾವಣಗೆರೆ

ದಾವಣಗೆರೆ ಪೊಲೀಸರ ಭರ್ಜರಿ ಬೇಟೆ: ಅಮಲು ಬರುವ ಸಿರಫ್ ಅಕ್ರಮವಾಗಿ ಮಾರಾಟ ಮಾಡ್ತಿದ್ದ ಐವರು ಆರೋಪಿಗಳ ಬಂಧನ!

ದಾವಣಗೆರೆ

ದಾವಣಗೆರೆ ವಿವಿ ಅಂತರಕಾಲೇಜು ಭಾರ ಎತ್ತುವ ಸ್ಪರ್ಧೆ: ಹೊನ್ನೂರು ಗೊಲ್ಲರಹಟ್ಟಿ ವಿದ್ಯಾರ್ಥಿಗಳ ಅತ್ಯುನ್ನತ ಸಾಧನೆ

ಪ್ರಭಾ ಮಲ್ಲಿಕಾರ್ಜುನ್

ಅರಣ್ಯ ಇಲಾಖೆ ಹುದ್ದೆಗಳ ನೇರ ನೇಮಕಾತಿಗೆ ಬಿಎಸ್ಸಿ ಅರಣ್ಯ ಶಾಸ್ತ್ರ ಪದವಿ ವಿದ್ಯಾರ್ಹತೆಯನ್ನಾಗಿ ಪರಿಗಣಿಸಿ: ಡಾ. ಪ್ರಭಾ ಮಲ್ಲಿಕಾರ್ಜುನ್ ಗೆ ವಿದ್ಯಾರ್ಥಿಗಳ ಮನವಿ

ಆರ್ ಎಸ್ ಎಸ್

ಆರ್ ಎಸ್ ಎಸ್ ಬ್ಯಾನ್ ವಿಚಾರಕ್ಕೆ ಕೇಸರಿ ಪಡೆ ನಿಗಿನಿಗಿ, ತಾಕತ್ತೇನೆಂದು ತೋರಿಸ್ತೇವೆ: ಬಿಜೆಪಿ ನಾಯಕರ ಸವಾಲ್!

Leave a Comment