Home ದಾವಣಗೆರೆ “ವಿದೇಶದಲ್ಲಿ ಏಕತೆಯ ಭಾಷಣ, ದೇಶದಲ್ಲಿ ವಿಭಜನೆಯ ರಾಜಕೀಯ”: ಮೋಹನ್ ಭಾಗವತ್ ವಿರುದ್ಧ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ!
ದಾವಣಗೆರೆನವದೆಹಲಿಬೆಂಗಳೂರು

“ವಿದೇಶದಲ್ಲಿ ಏಕತೆಯ ಭಾಷಣ, ದೇಶದಲ್ಲಿ ವಿಭಜನೆಯ ರಾಜಕೀಯ”: ಮೋಹನ್ ಭಾಗವತ್ ವಿರುದ್ಧ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ!

Share
ಮೋಹನ್ ಭಾಗವತ್
Share

ಬೆಂಗಳೂರು: ನ್ಯೂಯಾರ್ಕ್‌ನಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅವರು ವೈವಿಧ್ಯತೆಯನ್ನು “ನಮ್ಮ ಅಂತರಂಗದ ಏಕತೆಯ ಅಲಂಕಾರ” ಎಂದು ಬಣ್ಣಿಸಿ, ಅದನ್ನು ರಕ್ಷಿಸಬೇಕು ಎಂದು ಬಹಳ ಸುಂದರವಾಗಿ ಮಾತನಾಡಿದ್ದಾರೆ. ಆದರೆ ಭಾರತಕ್ಕೆ ಬೇಕಾಗಿರುವುದು ಕೇವಲ ವಿದೇಶದ ವೇದಿಕೆಯಲ್ಲಿ ಕೇಳಿಬರುವ ಮಾತುಗಳಲ್ಲ; ಆ ಮಾತುಗಳು ದೇಶದಲ್ಲಿಯೂ ಕಾರ್ಯರೂಪದಲ್ಲಿ ಪ್ರತಿಫಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

ದಶಕಗಳಿಂದ @RSSorg ಹಾಗೂ ಅದರೊಂದಿಗೆ ಸಂಬಂಧ ಹೊಂದಿರುವ ಸಂಘ ಪರಿವಾರದ ವಿವಿಧ ಸಂಘಟನೆಗಳು ಕೋಮು ಧ್ರುವೀಕರಣಕ್ಕೆ ಉತ್ತೇಜನ ನೀಡುತ್ತಾ, ಭಾರತದ ಬಹುತ್ವ ಮತ್ತು ವೈವಿಧ್ಯಮಯ ಸಾಮಾಜಿಕ ಸ್ವರೂಪವನ್ನು ದುರ್ಬಲಗೊಳಿಸುತ್ತಿರುವಾಗ ವಿದೇಶಿ ನೆಲದಲ್ಲಿ ನಿಂತು ವೈವಿಧ್ಯತೆಯನ್ನು ರಕ್ಷಿಸುವ ಮಾತುಗಳು ಕೇಳಿ ಬರುತ್ತಿರುವುದು ಹಾಸ್ಯಸ್ಪದ ಎಂದು ಹೇಳಿದ್ದಾರೆ.

ಹಾಗಾದರೆ ವಿದೇಶದಲ್ಲಿ ವೈವಿಧ್ಯತೆಯನ್ನು ರಕ್ಷಿಸುವ ಬಗ್ಗೆ ಮಾತನಾಡುವಾಗ ಸಹಜವಾಗಿಯೇ ಒಂದು ಪ್ರಶ್ನೆ ಮೂಡುತ್ತದೆ ಅದೇ ತತ್ವವನ್ನು ಭಾರತದಲ್ಲಿ ಏಕೆ ಅನುಸರಿಸಬಾರದು? ನ್ಯೂಯಾರ್ಕ್‌ನಲ್ಲಿ ಏಕತೆಯ ಭಾಷಣ, ಭಾರತದಲ್ಲಿ ವಿಭಜನೆಯ ರಾಜಕೀಯ ಇದು ಹೇಗೆ ಸಾಧ್ಯ? ಭಾಗವತ್‌ ಅವರೇ, ಭಾರತ ನಿಮ್ಮ ಮಾತುಗಳನ್ನೂ, ನಿಮ್ಮ ಕಾರ್ಯಗಳನ್ನೂ ಗಮನಿಸುತ್ತಿದೆ. ಭೋದಿಸುವುದನ್ನ ಬಿಟ್ಟು ಮೊದಲು ಆಚರಿಸಿ ಎಂದು ಸಲಹೆ ನೀಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *