Home ದಾವಣಗೆರೆ ಬಿಜೆಪಿಗರಿಗೆ “ವಂದೇ ಮಾತರಂ” ಬಾಯಿಪಾಠವೂ ಇಲ್ಲ, ಕನಿಷ್ಠ ಸರಿಯಾಗಿ ಓದಿ ಹಾಡಲು ನಾಲಗೆ ಹೊರಳದಿರುವುದು ದುರಂತ: ಬಿ. ಕೆ. ಹರಿಪ್ರಸಾದ್!
ದಾವಣಗೆರೆಬೆಂಗಳೂರು

ಬಿಜೆಪಿಗರಿಗೆ “ವಂದೇ ಮಾತರಂ” ಬಾಯಿಪಾಠವೂ ಇಲ್ಲ, ಕನಿಷ್ಠ ಸರಿಯಾಗಿ ಓದಿ ಹಾಡಲು ನಾಲಗೆ ಹೊರಳದಿರುವುದು ದುರಂತ: ಬಿ. ಕೆ. ಹರಿಪ್ರಸಾದ್!

Share
ವಂದೇ ಮಾತರಂ
Share

ಬೆಂಗಳೂರು: ಕರ್ನಾಟಕ ವಿಧಾನಸಭೆಯ ಅಧಿವೇಶನದಲ್ಲಿ ನಡೆದ ಘಟನೆ ಮಾತ್ರ ಬಿಜೆಪಿಯವರ ರಾಜಕೀಯ ನಿಲುವಿನ ಅಸ್ಪಷ್ಟತೆಯನ್ನು ಬಯಲಿಗೆಳೆದಿದೆ. ಸರ್ಕಾರದ ಕಾರ್ಯಕ್ರಮಗಳಲ್ಲಿ ಮೊದಲ ಎರಡು ಚರಣಗಳನ್ನು ಹಾಡುವ ನಿರ್ಧಾರವನ್ನು ವಿರೋಧಿಸಿ ಬಿಜೆಪಿ ಸದಸ್ಯರು ಪೂರ್ಣ ‘ವಂದೇ ಮಾತರಂ’ ಹಾಡಲು ಮುಂದಾದರು. ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಎರಡು ಚರಣಗಳ ನಂತರ ನಿಂತು ಸಂವಿಧಾನದ ಪೀಠಿಕೆಯನ್ನು ಓದಿದಾಗ, ಪ್ರತಿಪಕ್ಷದ ಸದಸ್ಯರು ಪೂರ್ಣ ಹಾಡನ್ನು ಮುಂದುವರಿಸಿದರು ಎಂದು ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ಹೇಳಿದ್ದಾರೆ.

ವಂದೇ ಮಾತರಂ ಹಾಡಲುಬಾರದ ಬಿಜೆಪಿಗರು ಮುದ್ರಿತ ಪ್ರತಿಗಳನ್ನು ಹಿಡಿದು ಹಾಡಿದರು. ವಂದೇ ಮಾತರಂನ ಪೂರ್ಣ ಆವೃತ್ತಿಯನ್ನು ಹಾಡಲೇಬೇಕು ಎಂದು ವಿಧಾನಸಭೆಯಲ್ಲಿ ಇಷ್ಟೊಂದು ದೊಡ್ಡ ರಾಜಕೀಯ ಹೋರಾಟ ಮಾಡುವ ಬಿಜೆಪಿಯವರಿಗೆ ಹಾಡಿನ ಸಂಪೂರ್ಣ ಸಾಹಿತ್ಯವೇ ಬಾಯಿಪಾಠವಾಗಿಲ್ಲ ಎನ್ನುವುದು ವಿಪರ್ಯಾಸ. ಬಾಯಿಪಾಠ ಬರದಿದ್ದರೂ ಪರವಾಗಿಲ್ಲ, ಕನಿಷ್ಠ ಸರಿಯಾಗಿ ಓದಿ ಹಾಡಲೂ ನಾಲಗೆ ಹೊರಳದಿರುವುದು ಇನ್ನೂ ದೊಡ್ಡ ವಿಪರ್ಯಾಸ ಎಂದು ಹೇಳಿದ್ದಾರೆ.

ಒಂದು ಹಾಡನ್ನು ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡು, ಅದೇ ಹಾಡನ್ನು ಸರಿಯಾಗಿ ಹಾಡಲು ಸಾಧ್ಯವಾಗದಿರುವುದಕ್ಕಿಂತ ರಾಜಕೀಯ ದೊಡ್ಡ ವೈರುಧ್ಯ ಮತ್ತೊಂದಿಲ್ಲ ಎಂದು ಕಿಡಿಕಾರಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಸುಪ್ರಿಂ ಕೋರ್ಟ್ ನ ಈ ಅದೇಶದಿಂದಾಗಿ, ವಂದೇ ಮಾತರಂ ಹಾಡಲು ಬಾರದ ಬಿಜೆಪಿಗರು ಇದೀಗ ಕನಿಷ್ಠ ಒಂದು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದ್ದು ನನಗಂತೂ ಸಮಾಧಾನ ತಂದಿದೆ ಎಂದು ಬಿ. ಕೆ. ಹರಿಪ್ರಸಾದ್ ಹೇಳಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles