SUDDIKSHANA KANNADA NEWS/ DAVANAGERE/ DATE: 09-04-2023
ದಾವಣಗೆರೆ: ದಾವಣಗೆರೆ (DAVANAGERE) ಉತ್ತರ ಕ್ಷೇತ್ರದಿಂದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ BJP) ಪಕ್ಷ (PARTY)ವು ಸ್ಥಳೀಯರಿಗೆ ಟಿಕೆಟ್ (TICKET)ನೀಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಶಾಸಕ ಎಸ್. ಎ. ರವೀಂದ್ರನಾಥ್ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಶಿರಮಗೊಂಡನಹಳ್ಳಿಯಲ್ಲಿ ರವೀಂದ್ರನಾಥ್ ರ ನಿವಾಸಕ್ಕೆ ಆಗಮಿಸಿದ ನೂರಾರು ಬಿಜೆಪಿ (BJP) ಕಾರ್ಯಕರ್ತರು, ಹೊರಗಿನಿಂದ ಬರುವವರಿಗೆ ಯಾವುದೇ ಕಾರಣಕ್ಕೆ ಟಿಕೆಟ್ (TICKET) ನೀಡಬಾರದು ಎಂದು ಒತ್ತಾಯಿಸಿದರು.
ಸ್ಥಳೀಯರಿಗೆ ಆದ್ಯತೆ ನೀಡಬೇಕು. ಯಾರಿಗೆ ಟಿಕೆಟ್ ಕೊಟ್ಟರೂ ಬೇಸರವಿಲ್ಲ. ದಾವಣಗೆರೆ ಜಿಲ್ಲೆಯವರಿಗೆ ಟಿಕೆಟ್ (TICKET) ನೀಡಬೇಕು. ಬೇರೆ ಜಿಲ್ಲೆಗಳಿಂದ ಇಲ್ಲಿಗೆ ಬರುವವರಿಗೆ ಟಿಕೆಟ್ ಕೊಟ್ಟರೆ ಪಕ್ಷಕ್ಕೆ ಹಿನ್ನೆಡೆಯಾಗುತ್ತದೆ.
ಇಷ್ಟು ವರ್ಷಗಳ ಕಾಲ ಪಕ್ಷಕ್ಕೆ ದುಡಿದ ಮುಖಂಡರು, ಕಾರ್ಯಕರ್ತರ ಕಥೆ ಏನು? ಪಕ್ಷವು ಯಾವುದೇ ಕಾರಣಕ್ಕೂ ವಂಶಾಡಳಿತಕ್ಕೆ ಆದ್ಯತೆ ನೀಡಬಾರದು. ಬಿಜೆಪಿ ಪಕ್ಷದವರು ಬೇರೆ ಪಕ್ಷಗಳ ವಂಶಾಡಳಿತ ರಾಜಕಾರಣ ವಿರೋಧ ಮಾಡಿಕೊಂಡು ಬರುತ್ತಿದ್ದಾರೆ. ಈಗ ನಮ್ಮ ಪಕ್ಷವೇ ಅಪ್ಪ, ಮಕ್ಕಳಿಗೆ ಟಿಕೆಟ್ ಕೊಟ್ಟರೆ ಪ್ರಚಾರ ನಡೆಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಭವಿಷ್ಯದಲ್ಲಿ ನಮಗೂ ಅವಕಾಶಗಳು ಸಿಗುತ್ತವೆ ಎಂಬ ನಂಬಿಕೆ ಇದೆ. ಇದು ಬರಬೇಕಾದರೆ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು. ನಾವು ಪಕ್ಷ(PARTY)ದ ಅಭ್ಯರ್ಥಿಗಳ ಪರ ಪ್ರಚಾರ ಮಾಡಬೇಕಾದರೆ ಸ್ಥಳೀಯರಿಗೆ ಮಾತ್ರ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕು. ತುಂಬಾ ವರ್ಷಗಳಿಂದ ಪಕ್ಷಕ್ಕಾಗಿ ಕೆಲಸ ಮಾಡುವವರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಒಂದು ವೇಳೆ ವಂಶಾಡಳಿತಕ್ಕೆ ಅವಕಾಶ ಮಾಡಿಕೊಟ್ಟರೆ ನಾವೆಲ್ಲರೂ ಚುನಾವಣೆಯಲ್ಲಿ ಬಿಜೆಪಿ (BJP) ಪರ ಕೆಲಸ ಮಾಡುವುದಿಲ್ಲ. ಹಾಗಾಗಿ, ಪಕ್ಷದ ವರಿಷ್ಠರು, ರಾಜ್ಯ ನಾಯಕರು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಸ್ಥಳೀಯರಿಗೆ ಟಿಕೆಟ್ (TICKET) ನೀಡಿ ಗೆದ್ದರೆ ನಾವು ಅವರನ್ನು ಸುಲಭವಾಗಿ ಭೇಟಿಯಾಗಬಹುದು. ಬೇರೆ ಜಿಲ್ಲೆಯವರಿಗೆ ನೀಡಿದರೆ ನಾವು ಅಲ್ಲಿಗೆ ಹೋಗಲು ಸಾಧ್ಯವಾಗುವುದಿಲ್ಲ. ನಮಗೂ ಇಂದು ಪಕ್ಷಕ್ಕೆ ದುಡಿದರೆ ಮುಂದೊಂದು ದಿನ ನಮಗೂ ಅವಕಾಶಗಳು
ಒದಗಿ ಬರುತ್ತವೆ ಎಂಬ ನಂಬಿಕೆ ಬಲವಾಗುತ್ತದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಸ್. ಎ. ರವೀಂದ್ರನಾಥ್ (S. A. RAVINDRANATH) ಅವರು, ಅನಾರೋಗ್ಯ ಕಾರಣ ನಾನು ಸ್ಪರ್ಧೆ ಮಾಡುತ್ತಿಲ್ಲ. ಈಗಾಗಲೇ ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ. ನಿಮ್ಮ ಅಭಿಪ್ರಾಯ ಕೇಳಿದ್ದೇನೆ. ಪಕ್ಷದ ವರಿಷ್ಠರ ಗಮನಕ್ಕೆ ತರುತ್ತೇನೆ ಎಂದು ಹೇಳಿ ಸಮಾಧಾನಪಡಿಸಿ ಕಳುಹಿಸಿದರು.
ಸಂಸದರ ಪುತ್ರನ ಸ್ಪರ್ಧೆಗೆ ವಿರೋಧ…?
ಚಿತ್ರದುರ್ಗದಲ್ಲಿ ಟಿಕೆಟ್ ಸಿಗದಿದ್ದರೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಸಂಸದ ಜಿ. ಎಂ. ಸಿದ್ದೇಶ್ವರರ (SIDDESHWARA) ಪುತ್ರ ಜಿ. ಎಸ್. ಅನಿತ್ ಸ್ಪರ್ಧೆ ಮಾಡುತ್ತಾರೆ ವಿಚಾರ ಮುನ್ನೆಲೆಗೆ ಬಂದ ಬಳಿಕ ಈ ಬೆಳವಣಿಗೆಯಾಗಿರುವುದು ಬಿಜೆಪಿ(BJP) ಯಲ್ಲಿ ಕಸಿವಿಸಿ ಮೂಡಿಸಿದೆ. ಸಂಸದರು ತನ್ನ ಪುತ್ರನಿಗೆ ಟಿಕೆಟ್ ಕೊಡಿಸಲು ದೆಹಲಿ ಮಟ್ಟದಲ್ಲಿಯೂ ಲಾಬಿ ನಡೆಸಿದ್ದಾರೆ. ಮಹಾನಗರ ಪಾಲಿಕೆಯ ಮಾಜಿ ಮೇಯರ್ ಎಸ್. ಟಿ. ವೀರೇಶ್ ಸೇರಿದಂತೆ ಇನ್ನು ಇಬ್ಬರ ಹೆಸರು ಪಟ್ಟಿಯಲ್ಲಿದೆ. ಆದ್ರೆ, ಅಂತಿಮವಾಗಿ ಯಾರಿಗೆ ಟಿಕೆಟ್ ಸಿಗುತ್ತದೆ ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.