SUDDIKSHANA KANNADA NEWS/ DAVANAGERE/ DATE:25-09-2023
ಬೆಂಗಳೂರು (Bangalore): ಜನತಾದರ್ಶನವೆಂಬ ನಾಟಕದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಎದುರಾದ ಪ್ರಶ್ನೆಗಳಿಗಿಲ್ಲ ಅವರ ಬಳಿ ಉತ್ತರ ಎಂದು ಬಿಜೆಪಿ ಟೀಕಿಸಿದೆ.
ಈ ಸುದ್ದಿಯನ್ನೂ ಓದಿ:
ಭದ್ರಾ ಡ್ಯಾಂ (Bhadra Dam)ನೀರು ಸ್ಥಗಿತಕ್ಕೆ ಸಿಡಿದ ರೈತರ ರೋಷಾಗ್ನಿ:ದಾವಣಗೆರೆ ಬಂದ್ ಗೆ ಗುಡ್ ರೆಸ್ಪಾನ್ಸ್, ಮಧು ಬಂಗಾರಪ್ಪ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದೇಕೆ…?
ಟ್ವೀಟ್ ಮಾಡಿರುವ ಭಾರತೀಯ ಜನತಾ ಪಕ್ಷವು ಚುನಾವಣೆಗೂ ಮುನ್ನ ಘೋಷಿಸಿದ ಅನ್ನಭಾಗ್ಯದ ಹತ್ತು ಕೆಜಿ ಅಕ್ಕಿ ಕೊಡುತ್ತಿಲ್ಲ ಏಕೆ..? ಬರಗಾಲ ಬಂದಿದ್ದರೂ ಸುಪ್ರೀಂ ತೀರ್ಪಿಗೂ ಮುನ್ನ ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟಿದ್ದೇಕೆ..? ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಯೋಜನೆಗಳನ್ನು ಕನ್ನಡಿಗರಿಗೆ ದೊರಕದಂತೆ ಮಾಡಿದ್ದೀರಿ ಏಕೆ..? ರೈತರು ಸರಣಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ತಡೆಯಲು ಪ್ರಯತ್ನ ಮಾಡುತ್ತಿಲ್ಲವೇಕೆ.. ಎಂದು ಪ್ರಶ್ನಿಸಿದೆ.
ಹಳ್ಳಿಗಳಿಗೆ ಸರ್ಕಾರಿ ಸಾರಿಗೆ ಬಸ್‌ಗಳನ್ನು ಸರ್ಕಾರ ಬಿಡುತ್ತಿಲ್ಲ ಏಕೆ..? ಒಂದು ಸಮುದಾಯದ ಉದ್ಧಾರಕ್ಕೆ ನೂರಾರು ಕೋಟಿ ಕೊಟ್ಟಿದ್ದೀರಿ, ಆದರೆ ನಿಮ್ಮಿಂದ ಬೇರೆ ಅಭಿವೃದ್ಧಿ ಆಗುತ್ತಿಲ್ಲವೇಕೆ..? ಪ್ರತಿಯೊಂದರ ಬೆಲೆ ಏರಿಕೆ ಮಾಡಿ ಸ್ವಾಭಿಮಾನಿ ಕನ್ನಡಿಗರ ಬದುಕನ್ನು ಬೀದಿಗೆ ತಂದಿದ್ದೀರಿ ಏಕೆ..? ವಿಧಾನಸೌಧದಲ್ಲಿ ಕೈಗೆ ಸಿಗದ ಸಚಿವರು ಅಡಗುತಾಣದಲ್ಲಿ ಅವಿತು ಕೂತಿದ್ದಾರೆ. ರಾಜ್ಯದ ಜನರು ಬೀದಿಯಲ್ಲಿ ನಿಂತು ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ ಎಂದು ಕಿಡಿಕಾರಿದೆ.
ನಿರುದ್ಯೋಗಿ ಯುವಕರಿಗೆ ಯುವ ನಿಧಿ ಭತ್ಯೆ ಕೊಡುತ್ತೇವೆಂದು ಕಿವಿ ಮೇಲೆ ಗ್ಯಾರಂಟಿಯ ಹೂವಿಟ್ಟ ಕಾಂಗ್ರೆಸ್ ಸರ್ಕಾರ ಇದೀಗ ಅದೇ ನಿರುದ್ಯೋಗಿ ಯುವಕರನ್ನು ಟಾರ್ಗೆಟ್ ಮಾಡಿ ದಂಧೆಗೆ ಇಳಿದಿದೆ. ಸಣ್ಣ ನೀರಾವರಿ ಸಚಿವ ಎನ್. ಎಸ್.
ಬೋಸರಾಜು ಆಪ್ತ ಸಹಾಯಕ ಗುರು, ಅಂಗನವಾಡಿ, ಪಿಎಸ್ಐ, FDA ಕೆಲಸ ಕೊಡಿಸುವುದಾಗಿ ಸುಮಾರು 28 ನಿರುದ್ಯೋಗಿ ಯುವಕರಿಗೆ ವಂಚಿಸಿ, ಲೂಟಿ ಸರ್ಕಾರಕ್ಕೆ ನೆರವಾಗಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಶ್ಯಾಡೋ ಸಿಎಂ ಒಂದೇ ಹುದ್ದೆಗೆ
ನಾಲ್ಕು ಆರ್ಡರ್ ಕಾಪಿಗಳನ್ನು ಹೊರಡಿಸಿದಂತೆ, ವಿಧಾನಸೌಧದ ಬಳಿ ನಕಲಿ ಆರ್ಡರ್ ಕಾಪಿಗಳನ್ನು ಇಟ್ಟುಕೊಂಡು ಸಚಿವ ಬೋಸರಾಜು ಆಪ್ತ ದಂಧೆಗೆ ಇಳಿದು #ATMSarkara ದ ಖಜಾನೆ ತುಂಬಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಕಲೆಕ್ಷನ್ ಏಜೆಂಟ್‌ಗಳನ್ನು ಸೃಷ್ಟಿಸಿ ಅವರ ಮೂಲಕ ಕಲೆಕ್ಷನ್, ಕಮಿಷನ್ ಪಡೆಯುತ್ತಿದೆ. ಕೂಡಲೇ ಸಿದ್ದರಾಮಯ್ಯ ಅವರು ಲೂಟಿಕೋರ ಸಚಿವರನ್ನು ಸಂಪುಟದಿಂದ ಹೊರ ಹಾಕಬೇಕು, ಇಲ್ಲವೇ ನೈತಿಕ ಹೊಣೆ ಹೊತ್ತು ಖುದ್ದು ರಾಜೀನಾಮೆ ನೀಡಬೇಕು..! ಎಂದು ಬಿಜೆಪಿ ಟ್ವೀಟಾಸ್ತ್ರ ಪ್ರಯೋಗಿಸಿದೆ.