ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಬಿ. ಎಲ್. ಸಂತೋಷ್ ವಿರುದ್ಧದ ಟೀಕೆ ಒಪ್ಪಲು ಆಗದು, ಶೆಟ್ಟರ್ ಅವ್ರೇ ಧ್ವಜ ಬದಲಾದರೆ ಭಾವನೆಗಳು, ನಂಬಿಕೆಗಳು ಬದಲಾಗುತ್ತವೆಯೇ….?

On: April 22, 2023 12:09 PM
Follow Us:
---Advertisement---

SUUDIKSHANA KANNADA NEWS/ DAVANAGERE/ DATE:22-04-2023

ದಾವಣಗೆರೆ (DAVANAGERE): ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ (CONGRESS) ಪಕ್ಷ ಸೇರಿದ್ದು ದೌರ್ಭಾಗ್ಯ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಅವರ ಬಗ್ಗೆ ಹತ್ತಿರದಿಂದ ಬಲ್ಲಂತಹ ಶೆಟ್ಟರ್ ಅವರ ಟೀಕೆ ಒಪ್ಪಲು ಸಾಧ್ಯವಿಲ್ಲ. ಧ್ವಜ ಬದಲಾದರೆ ಭಾವನೆಗಳು, ನಂಬಿಕೆಗಳು ಬದಲಾಗುತ್ತವೆಯೇ ಎಂದು ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಶಿವಯೋಗಿಸ್ವಾಮಿ ಕಿಡಿಕಾರಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ (BJP)ತೊರೆದು ಕಾಂಗ್ರೆಸ್ (CONGRESS) ಸೇರಿ ಆ ಪಕ್ಷದ ಅಭ್ಯರ್ಥಿಯಾಗಿರುವ ಜಗದೀಶ್ ಶೆಟ್ಟರ್ (JAGADEESH SHETTER) ಅವರು ದಶಕಗಳ ಕಾಲ ತಾವು ನಂಬಿದ್ದ, ಪ್ರತಿಪಾದಿಸಿದ್ದ ವಿಚಾರ, ಸಿದ್ಧಾಂತಕ್ಕೆ ತದ್ವಿರುದ್ಧವಾದ ಪಕ್ಷ ಸೇರಿರುವುದು ಮನಸ್ಸಿಗೆ ತುಂಬಾ ನೋವು ತಂದಿದೆ ಎಂದು ಹೇಳಿದರು.

ಬಿಜೆಪಿ (BJP)ಯ ಸಾಮಾನ್ಯ ಕಾರ್ಯಕರ್ತರಾಗಿದ್ದ ಶೆಟ್ಟರ್ ಅವರನ್ನು ಶಾಸಕ, ಸಚಿವ, ವಿರೋಧ ಪಕ್ಷದ ನಾಯಕರ, ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಅರು ಬಾರಿ ಶಾಸಕರಾಗಿ ಆಯ್ಕೆಯಾಗಲು ಪಕ್ಷವೇ ಕಾರಣ. ರಾಮಮಂದಿರ (RAMAMANDIRA) ನಿರ್ಮಾಣ, 370 ನೇ ವಿಧಿ ರದ್ದತಿ, ಗೋ ಹತ್ಯೆ ನಿಷೇಧದ ಬಗ್ಗೆ ಶೆಟ್ಟರ್ ಅವರ ಅಭಿಪ್ರಾಯವೇನು? ಬಿ. ಎಲ್. ಸಂತೋಷ್ ಅವರ ಬಗ್ಗೆ ಟೀಕಿಸಿರುವುದು ಅವರೇ ಆತ್ಮವಂಚನೆ ಮಾಡಿಕೊಂಡಂತಿದೆ. ಸಂಘದ ಪ್ರಚಾರಕರಾದ ಪ್ರತಿಭಾನ್ವಿತ, ಇಂಜಿನಿಯರಿಂಗ್ ಪದವಿ ಪಡೆದಿರುವ ಸಂತೋಷ್ ಅವರು ತಮ್ಮ ಬದುಕನ್ನು ತಾವು ನಂಬಿದ್ದ ಧ್ಯೆಯಕ್ಕೆ, ತತ್ವಕ್ಕೆ ಸಮರ್ಪಿಸಿಕೊಂಡಿದ್ದಾರೆ. ಸ್ವಾರ್ಥ, ಅಧಿಕಾರ ಲಾಲಸೆ ಹೊಂದಿರುವ ಕಾಂಗ್ರೆಸ್ ಪಕ್ಷವು ಶೆಟ್ಟರ್ ಅವರನ್ನು ಬಳಸಿಕೊಂಡು ಲಿಂಗಾಯತರಿಗೆ ಬಿಜೆಪಿ ಅನ್ಯಾಯ ಮಾಡುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿದೆ. ಇದಕ್ಕೆ ಲಿಂಗಾಯತರು ಮಣೆ ಹಾಕುವುದಿಲ್ಲ ಎಂದರು.

1969ರಕಲ್ಲಿ ಎಸ್. ನಿಜಲಿಂಗಪ್ಪ ಅವರು ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ಕಾಂಗ್ರೆಸ್ (CONGRESS) ಪಕ್ಷ ವಿಭಜಿಸಿ, ಅವರನ್ನು ಮೂಲೆಗುಂಪು ಮಾಡಿದ್ದು ಇಂದಿರಾಗಾಂಧಿ. 1990ರಲ್ಲಿ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲರನ್ನು ಸಿಎಂ ಹುದ್ದೆಯಿಂದ ಇಳಿಸಿದ್ದು ರಾಜೀವ್ ಗಾಂಧಿ. ಅಂದಿನಿಂದ ಇಂದಿನವರೆಗೆ ಕಾಂಗ್ರೆಸ್ ಪಕ್ಷವು ಯಾಕೆ ಲಿಂಗಾಯತ ಸಮುದಾಯದ ನಾಯಕರನ್ನು ಮುಖ್ಯಮಂತ್ರಿ ಮಾಡಿಲ್ಲ ಎಂದು ಪ್ರಶ್ನಿಸಿದರು.

ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಲಿಂಗಾಯತ ಮತದಾರರ ಸೆಳೆಯಲು ಅತಿ ಕಾಳಜಿ ತೋರಿಸುತ್ತಿದೆ. ಲಿಂಗಾಯತ ಸಮಾಜದ ದಶಕಗಳ ಬೇಡಿಕೆಯಾದ ಮೀಸಲಾತಿಯನ್ನು ಬಿಜೆಪಿ ಸರ್ಕಾರ ನೀಡಿದೆ. ಅಧಿಕಾರಕ್ಕೆ ಬಂದಲ್ಲಿ ವಾಪಸ್ ಪಡೆಯುತ್ತೇವೆಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ. ಇದೆಲ್ಲವನ್ನೂ ಸಮಾಜ ಗಮನಿಸುತ್ತಿದೆ. ಅಪರಾಧಿಗಳನ್ನು ಕಾಂಗ್ರೆಸ್ ಸ್ಟಾರ್ ಪ್ರಚಾರಕರನ್ನಾಗಿ ಮಾಡಿದೆ. ಈಗಾಗಲೇ ಕಾಂಗ್ರೆಸ್ ಪಕ್ಷವು ಜನರ ವಿಶ್ವಾಸ ಕಳೆದುಕೊಂಡಿದೆ ಎಂದರು.

ಎಸ್. ಎ. ರವೀಂದ್ರನಾಥ್ ಅವರಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಹೇಳಿದರು. ಸಂಸದ ಜಿ. ಎಂ. ಸಿದ್ದೇಶ್ವರ, ಶಾಸಕರು, ಮುಖಂಡರು, ಪ್ರಮುಖರು ಸಭೆಯಲ್ಲಿ ಹಾಜರಿದ್ದರು. ಆಗ ರವೀಂದ್ರನಾಥ್ ಅವರು ನನಗೆ ಆಗುವುದಿಲ್ಲ. 75 ವರ್ಷ ದಾಟಿದೆ. ಆರೋಗ್ಯವೂ ಸ್ವಲ್ಪ ಸಮಸ್ಯೆ ಇದೆ. ಹಾಗಾಗಿ ಹೊಸಬರಿಗೆ ಅವಕಾಶ ನೀಡುವಂತೆ ಅವರೇ ಹೇಳಿದರು. ಹಾಗಾಗಿ, ಬೇರೆಯವರಿಗೆ ಟಿಕೆಟ್ ನೀಡಲಾಯಿತು. ಇದೊಂದು ಮಾದರಿ ನಡೆ ಎಂದು ಶಿವಯೋಗಿಸ್ವಾಮಿ ಅವರು ಹೇಳಿದರು.

ಶಾಸಕ ಎಸ್. ಎ. ರವೀಂದ್ರನಾಥ್ ಮಾತನಾಡಿ, ಬಿಜೆಪಿಯಲ್ಲಿ ಲಿಂಗಾಯತ ಮುಖ್ಯಮಂತ್ರಿಯೇ ಇದ್ದಾರೆ. ಬಸವರಾಜ್ ಬೊಮ್ಮಾಯಿ ಅವರು ಲಿಂಗಾಯತರೇ. ಮುಂದೆಯೂ ಲಿಂಗಾಯತರೇ ಸಿಎಂ ಆಗಬಹುದು. ಇಲ್ಲದಿದ್ದರೆ ಬೇರೆಯವರೂ ಆಗಬಹುದು. ನೀವು ಪ್ರಶ್ನೆ ಕೇಳಿದ್ದಕ್ಕೆ ನಾನು ಉತ್ತರಿಸಿದೆ ಎಂದು ಹೇಳಿದರು.

1994ರಿಂದಲೂ ಜಗದೀಶ್ ಶೆಟ್ಟರ್ ನನಗೆ ಶಾಸಕರಾಗಿ ಪರಿಚಯ. ಬಿಜೆಪಿ ಬಿಡುತ್ತಾರೆ ಎಂದುಕೊಂಡಿರಲಿಲ್ಲ. ಬಿಜೆಪಿ ಪಕ್ಷ ಬಿಡಲು ಯಾಕೆ ನಿರ್ಧರಿಸಿದರು ಎಂಬುದು ಈಗಲೂ ಕಾಡುತ್ತಿದೆ. ಬಿ. ಎಲ್. ಸಂತೋಷ್ ಅವರು ಪಕ್ಷಕ್ಕಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ದೂಷಣೆ ಮಾಡುವುದು ಸರಿಯಲ್ಲ. ಅವರಿಗೇನೂ ಅಧಿಕಾರ ಬೇಕಾಗಿಲ್ಲ. ಶೆಟ್ಟರ್ ತೆಗೆದುಕೊಂಡ ನಿರ್ಧಾರ ಅಚ್ಚರಿ ಮೂಡಿಸಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಬಿ. ಎಸ್. ಜಗದೀಶ್, ರಾಜ್ಯ ಕಾರ್ಯದರ್ಶಿ ಸುಧಾ ಜಯರುದ್ರೇಶ್, ಜಿಲ್ಲಾ ವಕ್ತಾರ ಡಿ. ಎಸ್. ಶಿವಶಂಕರ್, ಮಹಾನಗರ ಪಾಲಿಕೆ ಸದಸ್ಯ ಪ್ರಸನ್ನಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment