SUDDIKSHANA KANNADA NEWS/ DAVANAGERE/ DATE_03-07_2025
ಬೆಂಗಳೂರು: ಸಿಎಂ ಸಿದ್ದರಾಮಯ್ಯರು ದುರಂಹಕಾರಿ ವರ್ತನೆ ತೋರುತ್ತಿದ್ದಾರೆ. ನಿಮ್ಮ ಹೆಸರಿನ ಮುಂದೆ ಮುಖ್ಯಮಂತ್ರಿ ಎನ್ನುವ ಹುದ್ದೆ ಇಲ್ಲದೆ ಹೋಗಿದ್ದರೆ, ಅಂದೇ ನಿಮ್ಮ ಗರ್ವ ಅಡಗಿ ಹೋಗುತ್ತಿತ್ತು ಎಂದು ಬಿಜೆಪಿ ವ್ಯಂಗ್ಯವಾಡಿದೆ.
READ ALSO THIS STORY: EXCLUSIVE: ದಾವಣಗೆರೆಯಲ್ಲಿ ಹೃದಯಾಘಾತಕ್ಕೆ 2ನೇ ಬಲಿ: ಎದೆನೋವೆಂದು ಆಸ್ಪತ್ರೆಗೆ ಹೋದ ಬಳಿಕ ಸಾವು!
ಹಿರಿಯ ಅಧಿಕಾರಿಗಳಾದ ಎನ್.ವಿ.ಬರಮನಿ ಅವರು, ವೇದಿಕೆ ಮೇಲೆ ತಮಗಾದ ಅವಮಾನ ಅಪಮಾನವನ್ನು ಬಿಚ್ಚಿಟ್ಟಿದ್ದಾರೆ. ಅದಕ್ಕೆ ಅಂದೇ ಆ ಸಮಯದಲ್ಲೇ ಪ್ರತ್ಯುತ್ತರ ನೀಡಲು ಸಿದ್ಧರಿದ್ದರಾದರೂ ಅವರಿಗೆ ತೊಡಕಾಗಿದ್ದು ದುರಹಂಕಾರಿ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಹುದ್ದೆ ಹಾಗೂ ಅವರ ಮೇಲಿನ ಗೌರವ ಎಂದು ಹೇಳಿದೆ.
ಕೊಟ್ಟಿರುವ ಕಾರಣಗಳು:
- ಭಾಷಣ ಮಾಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಏ ಯಾವನೋ ಅವನು ಇಲ್ಲಿ ಎಸ್ಪಿ ಎಂದು ಗದರಿದರು.
- ಮುಖ್ಯಮಂತ್ರಿಗಳ ಸನಿಹ ಹೋಗುತ್ತಿದ್ದಂತೆ, ಅವರು ಒಂದು ಕೈಯನ್ನ ನನ್ನ ಮೇಲೆ ಎತ್ತಿ ಕಪಾಳಮೋಕ್ಷ ಮಾಡಲು ಮುಂದಾದರು. ಆಗ ಒಂದು ಹೆಜ್ಜೆ ಹಿಂದೆ ಸರಿದು ನಾನು ಆ ಕಪಾಳಮೋಕ್ಷದಿಂದ ತಪ್ಪಿಸಿಕೊಂಡೆನು.
- ತೀವ್ರ ಮುಜುಗರಕ್ಕೆ ಒಳಗಾದ ನಾನು ಮುಖ್ಯಮಂತ್ರಿಯವರ ಧೋರಣೆಯನ್ನ ಖಂಡಿಸಲು ಯೋಚನೆ ಮಾಡಿದೆನು. ನಾನೂ ಒಬ್ಬ ಮನುಷ್ಯನಾಗಿದ್ದು, ಸ್ಥಳದಲ್ಲೇ ನಾನೂ ಮುಖ್ಯಮಂತ್ರಿಗಳಿಗೆ ಪ್ರಶ್ನೆ ಹಾಕಿ, ನೀವು
ಮಾಡಿದ್ದು ತಪ್ಪು ಎಂದು ಹೇಳಬೇಕೆಂದುಕೊಂಡೆನು. - ಆದರೆ, ಸಾರ್ವಜನಿಕವಾಗಿ ಮುಖ್ಯಮಂತ್ರಿಗೆ ಆಗುವ ಮುಜುಗರ ತಿಳಿದುಕೊಂಡು ಸುಮ್ಮನಾದೆನು.
- ರಾಜ್ಯ ರಾಷ್ಟ್ರ ಮಟ್ಟದಲ್ಲಿ ಈ ಘಟನೆ ಸುದ್ದಿಯಾದ ಮೇಲೂ ಸಿದ್ದರಾಮಯ್ಯ ಸೌಜನ್ಯಕ್ಕಾದರೂ ಕ್ಷಮೆ ಕೇಳುವ ಮನುಷ್ಯತ್ವ ಉಳಿಸಿಕೊಳ್ಳಬೇಕಿತ್ತು.
ಮನನೊಂದು ಸ್ವಾಭಿಮಾನಿ ಅಧಿಕಾರಿಯೊಬ್ಬರು ಸ್ವಯಂ ನಿವೃತ್ತಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಲಾಟರಿ ಸಿಎಂ ಸಿದ್ದರಾಮಯ್ಯ ಅವರೇ, ಈಗಲೂ ಕಾಲ ಮಿಂಚಿಲ್ಲ ಕ್ಷಮೆ ಕೇಳಿ ನಿಮ್ಮಲ್ಲೂ ಇನ್ನು ಅಲ್ಪಸ್ವಲ್ಪ ಮಾನವೀಯತೆ ಉಳಿದಿದೆ ಎಂದು ನಿರೂಪಿಸಿ. ಅಧಿಕಾರಿಗಳನ್ನು ಕಾಂಗ್ರೆಸ್‌ನ ಗುಲಾಮರಂತೆ ನಡೆಸಿಕೊಳ್ಳುವುದು ಮೊದಲು ಬಿಡಿ ಎಂದು ಸಲಹೆ ನೀಡಿದೆ.