ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಒಂದೂವರೆ ತಿಂಗಳಲ್ಲಿ ಆರು ಬಾರಿ ಹಾವು ಕಚ್ಚಿದ್ರೂ ಬದುಕುಳಿದ ಯುವಕ!

On: July 9, 2024 5:58 PM
Follow Us:
---Advertisement---

ಫತೇಪುರ್: ಒಂದೂವರೆ ತಿಂಗಳಲ್ಲಿ ಆರು ಬಾರಿ ಹಾವು ಕಚ್ಚಿದ್ರೂ ಯುವಕನೊಬ್ಬ ಪವಾಡ ಸದೃಶ ಎಂಬಂತೆ ಬದುಕುಳಿದಿದ್ದಾನೆ! ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯ ಸೌರಾ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. 24 ವರ್ಷ ವಯಸ್ಸಿನ ವಿಕಾಸ್ ದುಬೆ ಎಂಬಾತನೇ ಆರು ಬಾರಿ ಹಾವಿನಿಂದ ಕಚ್ಚಿಸಿಕೊಂಡು ಬದುಕುಳಿದ ಯುವಕ. ಪ್ರತಿ ಬಾರಿಯೂ ಹಾವುಗಳು ದಾಳಿ ಮಾಡಿದಾಗ ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚೇತರಿಸಿಕೊಂಡ ನಂತರ ಈತ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ. ಮೊದಲ ಘಟನೆ ಜೂನ್ 2 ರಂದು ನಡೆದಿದೆ. ಮನೆಯಲ್ಲಿ ಹಾಸಿಗೆಯಿಂದ ಎದ್ದ ನಂತರ ಹಾಆವು ಕಚ್ಚಿದೆ. ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇದೇ ರೀತಿ ಜೂನ್ 2 ರಿಂದ ಜುಲೈ 6 ರ ನಡುವೆ ವಿಕಾಸ್‌ಗೆ ಆರು ಬಾರಿ ಹಾವು ಕಚ್ಚಿದೆ. ನಾಲ್ಕನೇ ಹಾವು ಕಡಿತದ ನಂತರ, ದುಬೆ ತನ್ನ ಮನೆಯನ್ನು ಬಿಟ್ಟು ಬೇರೆಡೆ ಇರುವಂತೆ ನೆರೆ ಹೊರೆಯವರು ಸಲಹೆ ನೀಡಿದ್ದಾರೆ. ರಾಧಾನಗರದಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ತೆರಳಿದ ವಿಕಾಸ್‌ಗೆ ಅಲ್ಲಿ ಐದನೇ ಬಾರಿ ಹಾವು ಕಚ್ಚಿದೆ. ಆಗಲೂ ಕೂಡಲೇ ಆಸ್ಪತ್ರೆಗೆ ತೆರಳಿದ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾನೆ.

Join WhatsApp

Join Now

Join Telegram

Join Now

Leave a Comment