Home ಕ್ರೈಂ ನ್ಯೂಸ್ “ಪಾಕಿಸ್ತಾನ ವಿಭಜನೆ ಅಥವಾ ಸಿಂಧ್ ಒಡೆದರೆ ಕರಾಚಿಯಲ್ಲಿ ರಕ್ತಪಾತ”: ಬಿಲಾವಲ್ ಭುಟ್ಟೋ ಜರ್ದಾರಿ ಎಚ್ಚರಿಕೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

“ಪಾಕಿಸ್ತಾನ ವಿಭಜನೆ ಅಥವಾ ಸಿಂಧ್ ಒಡೆದರೆ ಕರಾಚಿಯಲ್ಲಿ ರಕ್ತಪಾತ”: ಬಿಲಾವಲ್ ಭುಟ್ಟೋ ಜರ್ದಾರಿ ಎಚ್ಚರಿಕೆ!

Share
ಪಾಕಿಸ್ತಾನ
Share

ಇಸ್ಲಾಮಾಬಾದ್ (ಪಾಕಿಸ್ತಾನ): ಪಾಕಿಸ್ತಾನದ ಸಿಂಧ್ ಪ್ರಾಂತ್ಯವನ್ನು ಬಲವಂತವಾಗಿ ವಿಭಜಿಸಲು ಅಥವಾ ಹೊಸ ಪ್ರಾಂತ್ಯಗಳನ್ನು ರಚಿಸಲು ಮುಂದಾದರೆ ಕರಾಚಿ ನಗರದ ಬೀದಿಗಳಲ್ಲಿ ರಕ್ತಪಾತವಾಗಲಿದೆ ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿ  ಅಧ್ಯಕ್ಷ ಬಿಲಾವಲ್ ಭುಟ್ಟೋ-ಜರ್ದಾರಿ ತೀವ್ರ ಎಚ್ಚರಿಕೆ ನೀಡಿದ್ದಾರೆ.

ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರದ ಸಚಿವರು ಮತ್ತು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ನೇತೃತ್ವದ ಮಿಲಿಟರಿ ಆಡಳಿತವು ಸಿಂಧ್ ಪ್ರಾಂತ್ಯವನ್ನು ಒಡೆಯಲು ಮತ್ತು ಹೊಸ ಪ್ರಾಂತ್ಯಗಳನ್ನು ಸೃಷ್ಟಿಸಲು ಮುಂದಾಗಿರುವ ನಡೆಗೆ ಪಿಪಿಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಪಾಕಿಸ್ತಾನದ ಒಳ ಆಡಳಿತ ಸಚಿವ ಮೊಹ್ಸಿನ್ ನಖ್ವಿ ಅವರು ಹೊಸ ಪ್ರಾಂತ್ಯಗಳ ರಚನೆಗೆ ಸಂಬಂಧಿಸಿದಂತೆ ಜನಾಭಿಪ್ರಾಯ ಸಂಗ್ರಹ ನಡೆಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದು, ಇದು ಪಾಕ್ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಪಿಪಿಪಿ ಪಕ್ಷವು ಶೆಹಬಾಜ್ ಷರೀಫ್ ನೇತೃತ್ವದ ಮೈತ್ರಿಕೂಟ ಸರ್ಕಾರದ ಭಾಗವಾಗಿದ್ದರೂ, ಸಿಂಧ್ ವಿಭಜನೆಯ ವಿಚಾರದಲ್ಲಿ ಸ್ವತಃ ಆಡಳಿತ ಮೈತ್ರಿಕೂಟದೊಳಗೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ. ಕರಾಚಿಯು ಪಾಕಿಸ್ತಾನದ ಆರ್ಥಿಕ ರಾಜಧಾನಿಯಾಗಿದ್ದು, ಸಿಂಧ್ ಪ್ರಾಂತ್ಯವನ್ನು ಒಡೆದರೆ ಪ್ರಾದೇಶಿಕ ಮತ್ತು ಜನಾಂಗೀಯ ಸಂಘರ್ಷಗಳು ಮರುಕಳಿಸಲಿವೆ ಎಂದು ಬಿಲಾವಲ್ ಆತಂಕ ವ್ಯಕ್ತಪಡಿಸಿದ್ದಾರೆ.

ರಕ್ತಪಾತದ ಎಚ್ಚರಿಕೆ: ಸಿಂಧ್ ಪ್ರಾಂತ್ಯವನ್ನು ಬಲವಂತವಾಗಿ ವಿಭಜಿಸಿದರೆ ಸಮಾಜದಲ್ಲಿ ಒಡಕು ಮೂಡಿ ದೊಡ್ಡ ಪ್ರಮಾಣದ ಹಿಂಸಾಚಾರ ಉಂಟಾಗಲಿದೆ. ಕರಾಚಿ, ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ರಕ್ತಪಾತವಾಗಬಹುದು ಎಂದು ಬಿಲಾವಲ್ ಕಳವಳ ವ್ಯಕ್ತಪಡಿಸಿದ್ದಾರೆ.

ಹೊಸ ಪ್ರಾಂತ್ಯಗಳ ಪ್ರಸ್ತಾಪ: ಪಾಕಿಸ್ತಾನದ ಅಸ್ತಿತ್ವದಲ್ಲಿರುವ 4 ಪ್ರಾಂತ್ಯಗಳನ್ನು ಒಟ್ಟು 14 ಪ್ರಾಂತ್ಯಗಳಾಗಿ ವಿಂಗಡಿಸುವ ಚರ್ಚೆಗಳು ನಡೆಯುತ್ತಿದ್ದು, 2027ರ ಮಾರ್ಚ್‌ನಲ್ಲಿ ನಡೆಯಲಿರುವ ಸೆನೆಟ್ ಚುನಾವಣೆಗೆ ಮುನ್ನ ಇದನ್ನು ಇತ್ಯರ್ಥಪಡಿಸಲು ಸರ್ಕಾರ ಯೋಚಿಸುತ್ತಿದೆ ಎಂದು ವರದಿಯಾಗಿದೆ.

ಪಿಪಿಪಿ ರಾಜಕೀಯ ಅಸ್ತಿತ್ವಕ್ಕೆ ಆತಂಕ: 2008ರಿಂದಲೂ ಸಿಂಧ್ ಪ್ರಾಂತ್ಯದಲ್ಲಿ ನಿರಂತರವಾಗಿ ಅಧಿಕಾರ ನಡೆಸಿಕೊಂಡು ಬರುತ್ತಿರುವ ಪಿಪಿಪಿ ಪಕ್ಷಕ್ಕೆ ಕರಾಚಿ ಮತ್ತು ಸಿಂಧ್ ಮೇಲಿನ ಹಿಡಿತವೇ ಪ್ರಮುಖ ಬಲವಾಗಿದೆ. ಪ್ರಾಂತ್ಯ ವಿಭಜನೆಯಾದರೆ ತಮ್ಮ ರಾಜಕೀಯ ಮತ್ತು ಆರ್ಥಿಕ ಪ್ರಾಬಲ್ಯ ಕುಸಿಯುತ್ತದೆ ಎಂಬುದು ಪಿಪಿಪಿ ನಾಯಕರ ಆತಂಕಕ್ಕೆ ಪ್ರಮುಖ ಕಾರಣವಾಗಿದೆ.

Share

Recent Comments

No comments to show.
Related Articles