ನವದೆಹಲಿ: ಬಿಹಾರದ ವಿವಿಧ ಜಿಲ್ಲೆಗಳಲ್ಲಿ ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯರ ಮೇಲೆ ನಡೆಯುತ್ತಿರುವ ಸರಣಿ ಲೈಂಗಿಕ ಕಿರುಕುಳ ಹಾಗೂ ಹಲ್ಲೆ ಪ್ರಕರಣಗಳು ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ.
ಇದರ ಬೆನ್ನಲ್ಲೇ ಬಿಹಾರದ ಆಡಳಿತಾರೂಢ ಬಿಜೆಪಿ ನೇತೃತ್ವದ ಮೈತ್ರಿಕೂಟದ ರಾಜ್ಯಸಭಾ ಸಂಸದ ಶಂಭು ಶರಣ್ ಪಟೇಲ್ ಅವರೇ ಬಿಹಾರ ಪೊಲೀಸರ ಕಾರ್ಯವೈಖರಿಯನ್ನು ಬಹಿರಂಗವಾಗಿ ಟೀಕಿಸಿದ್ದು, ರಾಜ್ಯದಲ್ಲಿ ಪೊಲೀಸ್ ಇಲಾಖೆಯ ಲೋಪದೋಷಗಳನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.
ಜಮುಯಿ ಪ್ರಕರಣ
ಜಮುಯಿ ನಗರದ ಮಡ್ವಾ ಪಹಾಡ್ ಪ್ರವಾಸಿ ತಾಣಕ್ಕೆ ತೆರಳಿ ವಾಪಸಾಗುತ್ತಿದ್ದ 10 ನೇ ತರಗತಿಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯನ್ನು ಕಿಡಿಗೇಡಿಗಳ ಗುಂಪೊಂದು ಅಡ್ಡಗಟ್ಟಿ, ನಿಂದಿಸಿ ಹಲ್ಲೆ ನಡೆಸಿದೆ. ಈ ಭೀಕರ ಘಟನೆಯನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗಿತ್ತು. ಈ ಸಂಬಂಧ ಪೊಲೀಸರು ಮೂವರು ಅಪ್ರಾಪ್ತರನ್ನು ಬಂಧಿಸಿದ್ದಾರೆ.
ಸಮಸ್ತಿಪುರ ಘಟನೆ
ಸಮಸ್ತಿಪುರದ ನದಿ ದಂಡೆಯೊಂದರಲ್ಲಿ ತಮ್ಮ ಸ್ನೇಹಿತನೊಂದಿಗೆ ಕುಳಿತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಸ್ಥಳೀಯ ಯುವಕರ ಗುಂಪೊಂದು ದಾಳಿ ಮಾಡಿದೆ. ಯುವಕನಿಗೆ ಥಳಿಸಿ ಓಡಿಸಿದ ಕಿಡಿಗೇಡಿಗಳು, ಬಾಲಕಿಯ ಕೂದಲು ಮತ್ತು ಕೈಗಳನ್ನು ಎಳೆದಾಡಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಹಲ್ಲೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಸಾರ್ವಜನಿಕರನ್ನು ಕೆರಳಿಸಿದೆ.
ಬಂಕಾ ಜಿಲ್ಲೆಯ ಮಂದಾರ್ ಗಿರಿ ಘಟನೆ
ಬಂಕಾದ ಪ್ರಸಿದ್ಧ ಯಾತ್ರಾ ಸ್ಥಳವಾದ ಮಂದಾರ್ ಗಿರಿಯಲ್ಲಿ ಯುವತಿಯೊಬ್ಬಳಿಗೆ ಕಿರುಕುಳ ನೀಡಿ, ಹಲ್ಲೆ ನಡೆಸಿದ ವಿಡಿಯೋ ವೈರಲ್ ಆದ ನಂತರ ಪೊಲೀಸರು ಆರು ಮಂದಿ ಅಜ್ಞಾತ ಯುವಕರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಬಿಜೆಪಿ ಸಂಸದ ಶಂಭು ಶರಣ್ ಪಟೇಲ್ ಹೇಳಿಕೆ
ಸುದ್ದಿಸಂಸ್ಥೆ ಐಎಎನ್ಎಸ್ ಜೊತೆ ಮಾತನಾಡಿದ ಬಿಜೆಪಿ ರಾಜ್ಯಸಭಾ ಸಂಸದ ಶಂಭು ಶರಣ್ ಪಟೇಲ್, “ಜಮುಯಿ, ಬಂಕಾ, ಸಮಸ್ತಿಪುರ ಅಥವಾ ಬಿಹಾರದ ಯಾವುದೇ ಭಾಗದಲ್ಲಿ ಇಂತಹ ಘಟನೆಗಳು ಸಂಭವಿಸಿದ್ದರೆ ಅದು ತೀವ್ರ ದುರದೃಷ್ಟಕರ. ಬಿಹಾರ ಪೊಲೀಸರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬುದನ್ನು ನಾವು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು” ಎಂದು ಸ್ವಪಕ್ಷದ ಸರ್ಕಾರದ ಪೊಲೀಸ್ ಇಲಾಖೆಗೆ ಚಾಟಿ ಬೀಸಿದ್ದಾರೆ.
ಮಹಿಳೆಯರು ಮತ್ತು ಹೆಣ್ಣುಮಕ್ಕಳ ಭದ್ರತೆಯ ಬಗ್ಗೆ ಬಿಹಾರ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಮೇಲೆ ವಿಪಕ್ಷಗಳು ಮತ್ತು ಸಾರ್ವಜನಿಕರು ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ.
- Banka Mandar Hill harassment
- Bihar Law and Order
- Bihar News
- Bihar Police failure
- BJP MP statement
- Jamui incident
- Samastipur viral video
- Shambhu Sharan Patel
- Social media viral crime video
- Women harassment
- ಕಾನೂನು ಮತ್ತು ಸುವ್ಯವಸ್ಥೆ
- ಜಮುಯಿ ಘಟನೆ
- ಬಂಕಾ ವೈರಲ್ ವಿಡಿಯೋ
- ಬಿಜೆಪಿ ಸಂಸದ
- ಬಿಹಾರ ಪೊಲೀಸ್
- ಬಿಹಾರ ಸುದ್ದಿ
- ಮಹಿಳೆಯರ ಮೇಲಿನ ದೌರ್ಜನ್ಯ
- ಲೈಂಗಿಕ ಕಿರುಕುಳ ಪ್ರಕರಣ
- ಶಂಭು ಶರಣ್ ಪಟೇಲ್
- ಸಮಸ್ತಿಪುರ ವಿಡಿಯೋ





Leave a comment