ಚುನಾವಣಾ ಬಾಂಡ್‌ನಲ್ಲಿ ಹಣ ಸುಲಿಗೆ ಆರೋಪದಡಿ ಕೇಂದ್ರ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಬಿಜೆಪಿ ನಾಯಕ ನಳಿನ್ ಕುಮಾರ್ ಕಟೀಲು ಸೇರಿ ಪ್ರಮುಖರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್ ಏಕ ಸದಸ್ಯ ಹೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಕೋರ್ಟ್ ಆದೇಶದ ಮೇಲೆ ದಾಖಲಾಗಿದ್ದ FIR ತಡೆ ನೀಡುವಂತೆ ಕೋರಿ ನಳಿನ್ ಹೈಕೋರ್ಟ್ ಮೊರೆ ಹೋಗಿದ್ದರು. ಇಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನ ಅವರ ಪೀಠ ತಡೆ ನೀಡಿದ್ದು ಇದರೊಂದಿಗೆ BJP ನಾಯಕರಿಗೆ ಈ ಕೇಸ್‌ನಲ್ಲಿ ಸದ್ಯ ರಿಲೀಫ್ ಸಿಕ್ಕಿದೆ.