ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

BIG BREAKING: ಭದ್ರಾ ಅಚ್ಚುಕಟ್ಟುದಾರ ಪ್ರದೇಶದವರಿಗೆ ಸಿಗಲಿದೆ ಭದ್ರಾ ಡ್ಯಾಂ (Bhadra Dam) ನೀರು, ಡಿಕೆಶಿ ಭೇಟಿ ಮಾಡಿದ ಸಿದ್ದೇಶ್ವರ ನೇತೃತ್ವದ ನಿಯೋಗ: ನೂರು ದಿನಗಳ ಕಾಲ ಹರಿಯಲಿದೆ ಭದ್ರಾ ನೀರು

On: October 12, 2023 6:36 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:12-10-2023

ಬೆಂಗಳೂರು: ಭದ್ರಾ ಜಲಾಶಯ (Bhadra Dam)ದಿಂದ ಬಲದಂಡೆ ನಾಲೆಯಲ್ಲಿ ನಿರಂತರ ನೀರು ಹರಿಸಬೇಕೆಂಬ ದಾವಣಗೆರೆ ಜಿಲ್ಲೆ ರೈತರ ಬೇಡಿಕೆಗೆ ರಾಜ್ಯ ಸರ್ಕಾರ ಅಸ್ತು ಎಂದಿದೆ. ಈ ಮೂಲಕ ಭದ್ರಾ ಅಚ್ಚುಕಟ್ಟುದಾರ ಪ್ರದೇಶದ ರೈತರಲ್ಲಿ ಮಂದಹಾಸ ಮೂಡಿದೆ.

READ ALSO THIS STORY:

ಸಚಿನ್ ತೆಂಡೂಲ್ಕರ್ ರೆಕಾರ್ಡ್ ಉಡೀಸ್ ಮಾಡಿದ ಹಿಟ್ ಮ್ಯಾನ್: ಭರ್ಜರಿ ಶತಕ ಬಾರಿಸಿದ ರೋಹಿತ್ ಶರ್ಮಾ (Rohit Sharma) ಬ್ಯಾಟಿಂಗ್ ವೈಭವದಲ್ಲಿ ಯಾವೆಲ್ಲಾ ರೆಕಾರ್ಡ್ ಗಳು ಧೂಳೀಪಟ ಗೊತ್ತಾ…?

ದಾವಣಗೆರೆ ಲೋಕಸಭೆ ಸದಸ್ಯ ಡಾ. ಜಿ. ಎಂ. ಸಿದ್ದೇಶ್ವರ ನೇತೃತ್ವದ ನಿಯೋಗವು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿತು. ಈ ವೇಳೆ ಡಿಸಿಎಂ ಶಿವಕುಮಾರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ದಾವಣಗೆರೆ ರೈತರಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಸಿದ್ದೇಶ್ವರ ನೇತೃತ್ವದ ನಿಯೋಗದ ಮನವಿಗೆ ಸ್ಪಂದಿಸಿದ ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ರವರು ನಿರಂತರ ನೀರು ಹರಿಸಲು ಐ ಸಿ ಸಿ ಅಧ್ಯಕ್ಷ ಮಧು ಬಂಗಾರಪ್ಪ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದರು.

ಡಿಕೆಶಿಗೆ ಕೊಟ್ಟ ಮನವಿ ಪತ್ರದಲ್ಲೇನಿದೆ…?

ಮಧ್ಯ ಕರ್ನಾಟಕದ ರೈತರ ಜೀವನಾಡಿಯಾಗಿರುವ ಭದ್ರಾ ಜಲಾಶಯದಿಂದ ನೀರನ್ನು ಆಗಸ್ಟ್ 10ನೇ ತಾರೀಖಿನಿಂದ ನಿರಂತರವಾಗಿ 100 ದಿನ ‌ಹರಿಸುವುದಾಗಿ ಸರ್ಕಾರ ಆದೇಶ ಹೊರಡಿಸಿತ್ತು. ಆದ್ದರಿಂದ ರೈತರು ಜಮೀನು ಉಳಿಮೆ ಮಾಡಿಕೊಂಡು ಭತ್ತದ ನಾಟಿ ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 1.5 ಲಕ್ಷ ಎಕರೆಯಲ್ಲಿ ಭತ್ತದ ಬೆಳೆ  ಬೆಳೆಸಿದ್ದಾರೆ. ಈಗ ಬೆಳೆ ಹೂವಾಡುವ ಹಂತದಲ್ಲಿದ್ದು, ತೆನೆ ಕಟ್ಟುವ ಸಮಯ. ಆದರೆ ಭದ್ರಾ ನೀರಾವರಿ ಸಲಹಾ ಸಮಿತಿ (Irrigation Consultative Committee) (I.C.C) ನಿರಂತರ 100 ದಿನ ‌ಹರಿಸುವ ತೀರ್ಮಾನ ಬದಲಿಸಿದೆ. ಆಫ್ ಅಂಡ್ ಆನ್ ಪದ್ಧತಿ ಅಂದರೆ 20 ದಿನ ನೀರು ‌ಹರಿಸುವುದು ಮತ್ತು 10 ದಿನ ನೀರು ನಿಲ್ಲಿಸುವುದನ್ನು ಜಾರಿ ಮಾಡಿದೆ.

ಇದರಿಂದ ನಿರಂತರ ನೀರು ಬೇಡುವ ಭತ್ತದ ಬೆಳೆಗೆ ಹಾನಿಯಾಗಲಿದೆ. ಪ್ರಸ್ತುತ ಭದ್ರಾ ನೀರು ಹರಿಸುವ ಐ.ಸಿ.ಸಿ ವೇಳಾಪಟ್ಟಿ ಪ್ರಕಾರ ಅಕ್ಟೋಬರ್ 15 ರಂದು ನೀರು ನಿಲುಗಡೆ ಮಾಡಲಾಗುವುದು. ನಿರಂತರವಾಗಿ 100 ದಿನ ನೀರು ‌ಹರಿಸುವುದಾಗಿ
ಸರ್ಕಾರ ಆದೇಶ ಹೊರಡಿಸಿದ್ದರಿಂದ ದಾವಣಗೆರೆ ಜಿಲ್ಲೆಯ ರೈತರು ಸಾಲ ಸೋಲ ಮಾಡಿ, ಸಾಕಷ್ಟು ಬಂಡವಾಳ ಸುರಿದು ಭತ್ತದ ಬೆಳೆ ಬೆಳೆಸಿದ್ದಾರೆ. ಆದ್ದರಿಂದ ದಾವಣಗೆರೆ ಜಿಲ್ಲೆಯಲ್ಲಿ ಭತ್ತದ ಬೆಳೆ ಬೆಳೆಸಿರುವ ರೈತರಿಗೆ ಬಹಳ ಅನ್ಯಾಯವಾಗುತ್ತದೆ.
ಇದರಿಂದ , ರೈತರು ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುವಂತಾಗುತ್ತದೆ.

ಆದ್ದರಿಂದ ಭದ್ರಾ ನೀರು ಹರಿಸುವ ಐ ಸಿ ಸಿ ತೀರ್ಮಾನಿಸಿರುವ ಆಫ್ ಅಂಡ್ ಆನ್ ಪದ್ಧತಿ ರದ್ದುಗೊಳಿಸಿ ನಿರಂತರ 100 ದಿನ ನೀರು ಹರಿಸಬೇಕು ಎಂದು ನಿಯೋಗವು ಒತ್ತಾಯಿಸಿತು. ಇದಕ್ಕೆ ಡಿ. ಕೆ. ಶಿವಕುಮಾರ್ ಅವರು ಒಪ್ಪಿಗೆ ಸೂಚಿಸಿದರು.

ಜಿ ಎಂ ಸಿದ್ದೇಶ್ವರ ನೇತೃತ್ವದ ನಿಯೋಗದಲ್ಲಿ ಹರಿಹರ ಶಾಸಕ ಬಿ. ಪಿ. ಹರೀಶ್, ವಿಧಾನ ಪರಿಷತ್ ಸದಸ್ಯ ನವೀನ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್. ಎಂ. ವೀರೇಶ್ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಬಿ. ಎಸ್. ಜಗದೀಶ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ
ಲೋಕಿಕೆರೆ ನಾಗರಾಜ್, ರೈತ ಮುಖಂಡರಾದ ಕೊಳೇನಹಳ್ಳಿ ಬಿ ಎಂ ಸತೀಶ್, ಧನಂಜಯ ಕಡ್ಲೆಬಾಳ್, ಶಾಗಲೆ ದೇವೇಂದ್ರಪ್ಪ, ಬಾತಿ ವಿರೇಶ್ ದೊಗ್ಗಳ್ಳಿ, ಬಿ. ಕೆ. ಶಿವಕುಮಾರ್ ಮತ್ತಿತರರು ಇದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Credit card

ಬಾಡಿಗೆ ಪಾವತಿಗೆ ಕ್ರೆಡಿಟ್ ಕಾರ್ಡ್ ಬಳಕೆ ಸರಿಯೋ ತಪ್ಪೇ: ಈ ಐದು ಅಂಶಗಳ ನೆನಪಿನಲ್ಲಿಟ್ಟುಕೊಳ್ಳಿ!

bank of baroda

ಬ್ಯಾಂಕ್ ಆಫ್ ಬರೋಡಾ ಸ್ಥಳೀಯ ಬ್ಯಾಂಕ್ ಅಧಿಕಾರಿ ನೇಮಕಾತಿ 2025: 2500 ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

ಅಡಿಕೆ

ಮಳೆ ಆಶ್ರಿತ ಪ್ರದೇಶದಲ್ಲಿ ಕೊಳವಿ ಬಾವಿ ನೀರಿನೊಂದಿಗೆ ಅಡಿಕೆ ಬೆಳೆಯುವುದರಿಂದ ಅಂತರ್ಜಲ ಮಟ್ಟ ಕುಸಿತ!

ಕಿರಣ್ ರಿಜಿಜು

ಸಂಸತ್ತಿನಲ್ಲಿ ಆಪರೇಷನ್ ಸಿಂಧೂರ್ ಚರ್ಚೆಗೆ ಕೇಂದ್ರ ಸಿದ್ಧ, ಹಿಂಜರಿಯುವುದಿಲ್ಲ: ಕೇಂದ್ರ ಸಚಿವ ಕಿರಣ್ ರಿಜಿಜು

ಕೂಡಲ ಸಂಗಮ

ಭುಗಿಲೆದ್ದ ಕೂಡಲ ಸಂಗಮ ಪೀಠ ವಿವಾದದ ಬಗ್ಗೆ ಸ್ಫೋಟಕ ಮಾಹಿತಿ ನೀಡಿದ ಹೆಚ್. ಎಸ್. ಶಿವಶಂಕರ್!

ದಾವಣಗೆರೆ

ಅಕ್ರಮ, ಹಗರಣಗಳ ತಾಣ ದಾವಣಗೆರೆ ನಿರ್ಮಿತಿ ಕೇಂದ್ರದ ಅಕ್ರಮ ನೇಮಕಾತಿಯಾಗಿರುವ 12 ಮಂದಿ ವಜಾಗೊಳಿಸದಿದ್ದರೆ ಕೋರ್ಟ್ ಗೆ: ಲೋಕಿಕೆರೆ ನಾಗರಾಜ್ ಎಚ್ಚರಿಕೆ!

Leave a Comment