ನವದೆಹಲಿ: ಜಂಟಿ ಕಾರ್ಯಾಚರಣೆಯಲ್ಲಿ ಭಾರತೀಯ ನೌಕಾಪಡೆ ಮತ್ತು ಶ್ರೀಲಂಕಾ ನೌಕಾಪಡೆಯು ಅರಬ್ಬಿ ಸಮುದ್ರದಲ್ಲಿ ಎರಡು ದೋಣಿಗಳಿಂದ ಸುಮಾರು 500 ಕೆಜಿ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದೆ.
ಎರಡು ದೋಣಿಗಳು, ಸಿಬ್ಬಂದಿ ಮತ್ತು ವಶಪಡಿಸಿಕೊಂಡ ಮಾದಕ ದ್ರವ್ಯಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಶ್ರೀಲಂಕಾ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುತ್ತಿದೆ. ಈ ಮೂಲಕ ಭಾರತೀಯ ನೌಕಪಡೆಯು ಭರ್ಜರಿ ಬೇಟೆಯಾಡಿದೆ. ವಶಪಡಿಸಿಕೊಂಡಿರುವ 500 ಕೆಜಿ ಮಾದಕ ವಸ್ತುಗಳ ಬೆಲೆ ಸದ್ಯಕ್ಕೆ ತಿಳಿದು ಬಂದಿಲ್ಲ. ಎಷ್ಟಿರಬಹುದು ಎಂದು ಲೆಕ್ಕ ಮಾಡಲಾಗುತ್ತಿದೆ.