ಭೋಪಾಲ್: ಮಧ್ಯಪ್ರದೇಶದ ಭೋಪಾಲ್‌ನಲ್ಲಿ 31 ವರ್ಷದ ನವವಿವಾಹಿತೆ ಟ್ವಿಶಾ ಶರ್ಮಾ ಅವರ ಶಂಕಾಸ್ಪದ ಸಾವು ಸಂಚಲನ ಮೂಡಿಸಿದೆ. ನಿವೃತ್ತ ನ್ಯಾಯಾಧೀಶರ ಕುಟುಂಬಕ್ಕೆ ಸೇರಿದ ಮನೆಯಲ್ಲಿ ಟ್ವಿಶಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಆಕೆಯ ಪತಿ ಮತ್ತು ಅತ್ತೆ-ಮಾವನ ವಿರುದ್ಧ ಗಂಭೀರ ಕಿರುಕುಳದ ಆರೋಪಗಳು ಕೇಳಿಬಂದಿವೆ.
ಭೋಪಾಲ್ ನಲ್ಲಿ ನವವಿವಾಹಿತೆ ಆತ್ಮಹತ್ಯೆಗೆ ಶರಣಾಗಿದ್ದರೂ, ಆಕೆಯ ಕುಟುಂಬಸ್ಥರು ಗಂಡ, ಆತನ ಅಪ್ಪ ಮತ್ತು ಅಮ್ಮನ ವಿರುದ್ಧ ಆರೋಪಿಸಿದ್ದು, ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಟ್ವಿಶಾ ಶರ್ಮಾ ಮೂಲತಃ ನೋಯ್ಡಾದವರಾಗಿದ್ದು, ಒಂದು ವರ್ಷದ ಹಿಂದೆ ಭೋಪಾಲ್ ಮೂಲದ ವಕೀಲ ಸಮರ್ಥ್ ಶರ್ಮಾ ಅವರನ್ನು ವಿವಾಹವಾಗಿದ್ದರು. ಟ್ವಿಶಾ ಅವರ ಮಾವ ನಿವೃತ್ತ ನ್ಯಾಯಾಧೀಶರಾಗಿದ್ದರೆ, ಅತ್ತೆ ಕೂಡ ಮಾಜಿ ನ್ಯಾಯಾಂಗ ಅಧಿಕಾರಿಯಾಗಿದ್ದಾರೆ. ಮದುವೆಯ ನಂತರ ಕೆಲಸ ಬಿಟ್ಟಿದ್ದ ಟ್ವಿಶಾಗೆ ಮತ್ತೆ ಕೆಲಸಕ್ಕೆ ಸೇರುವಂತೆ ಮತ್ತು ಅನ್ ಪ್ಲಾನ್ಡ್ ಗರ್ಭಧಾರಣೆಯ ವಿಷಯವಾಗಿ ಮಾನಸಿಕ ಒತ್ತಡ ಹೇರಲಾಗುತ್ತಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಸಾವಿಗೂ ಮುನ್ನ ಟ್ವಿಶಾ ನೋಯ್ಡಾಕ್ಕೆ ಮರಳಲು ರೈಲು ಟಿಕೆಟ್ ಬುಕ್ ಮಾಡಿದ್ದರು ಎನ್ನಲಾಗಿದ್ದು, ಈ ಸಂಬಂಧ ಭೋಪಾಲ್ ಪೊಲೀಸ್ ಕಮಿಷನರ್ ಸಂಜಯ್ ಕುಮಾರ್ ತನಿಖೆಗೆ ಆದೇಶಿಸಿದ್ದಾರೆ.
- Bhopal Crime News
- Domestic Violence India Statistics.
- Madhya Pradesh news
- Mental Harassment Allegations
- Newlywed woman suicide
- Retired Judge Daughter-in-law death
- Samarth Sharma Bhopal
- Twisha Sharma Suicide Case
- ಕಟಾರಾ ಹಿಲ್ಸ್ ಪೊಲೀಸ್ ತನಿಖೆ.
- ಟ್ವಿಶಾ ಶರ್ಮಾ ಆತ್ಮಹತ್ಯೆ
- ನವವಿವಾಹಿತೆ ಸಾವು
- ನಿವೃತ್ತ ನ್ಯಾಯಾಧೀಶರ ಸೊಸೆ ಸಾವು
- ಭೋಪಾಲ್ ಕ್ರೈಂ ನ್ಯೂಸ್
- ಮಧ್ಯಪ್ರದೇಶ ಸುದ್ದಿ
- ವರದಕ್ಷಿಣೆ ಕಿರುಕುಳ ಆರೋಪ





Leave a comment