Home ಉದ್ಯೋಗ ವಾರ್ತೆ BHEL Recruitment 2026: ಕೇಂದ್ರ ಸರ್ಕಾರಿ ಉದ್ಯೋಗಾವಕಾಶ, ಮಾಸಿಕ 1.80 ಲಕ್ಷ ರೂ.ವರೆಗೆ ವೇತನ ಪಡೆಯುವ ಅವಕಾಶ
ಉದ್ಯೋಗ ವಾರ್ತೆದಾವಣಗೆರೆನವದೆಹಲಿಬೆಂಗಳೂರು

BHEL Recruitment 2026: ಕೇಂದ್ರ ಸರ್ಕಾರಿ ಉದ್ಯೋಗಾವಕಾಶ, ಮಾಸಿಕ 1.80 ಲಕ್ಷ ರೂ.ವರೆಗೆ ವೇತನ ಪಡೆಯುವ ಅವಕಾಶ

Share
BHEL
Share

ನವದೆಹಲಿ: ಭಾರತ ಸರ್ಕಾರದ ಸಾರ್ವಜನಿಕ ವಲಯದ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾದ ಭರತ್ ಹೆವಿ ಇಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ಒಟ್ಟು 415 ಇಂಜಿನಿಯರ್, ಎಕ್ಸಿಕ್ಯೂಟಿವ್ ಹಾಗೂ ಸೂಪರ್‌ವೈಸರ್ ಟ್ರೈನಿ (Engineer, Executive & Supervisor Trainee) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಡಿಸೆಂಬರ್ 28, 2026ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅಧಿಕೃತ ಅಧಿಸೂಚನೆಯ ಪ್ರಕಾರ, ಹುದ್ದೆಗಳಿಗೆ ತಕ್ಕಂತೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ರೂ. 32,000 ರಿಂದ ರೂ. 1,80,000 ರವರೆಗೆ ಅತ್ಯುತ್ತಮ ವೇತನ ದೊರೆಯಲಿದೆ. ಒಟ್ಟು ಖಾಲಿ ಹುದ್ದೆಗಳ ವಿವರ ಹಾಗೂ ಮಾಸಿಕ ವೇತನದ ಮಾಹಿತಿ ಇಲ್ಲಿದೆ:

ಇಂಜಿನಿಯರ್ / ಎಕ್ಸಿಕ್ಯೂಟಿವ್ ಟ್ರೈನಿ: 200 ಹುದ್ದೆಗಳು (ವೇತನ: ರೂ. 50,000 – 1,80,000)

ಸೂಪರ್‌ವೈಸರ್ ಟ್ರೈನಿ: 215 ಹುದ್ದೆಗಳು (ವೇತನ: ರೂ. 32,000 – 1,00,000)

ವಿದ್ಯಾರ್ಹತೆ ಮತ್ತು ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ BE/B.Tech, MBA, CA/CMA, ಡಿಪ್ಲೊಮಾ ಅಥವಾ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.

ಇಂಜಿನಿಯರ್ ಹಾಗೂ ಸೂಪರ್‌ವೈಸರ್ ಟ್ರೈನಿಗಳಿಗೆ ಗರಿಷ್ಠ ವಯೋಮಿತಿ 27 ವರ್ಷ ಹಾಗೂ ಎಕ್ಸಿಕ್ಯೂಟಿವ್ ಟ್ರೈನಿಗಳಿಗೆ 29 ವರ್ಷ ಮೀರಿರಬಾರದು (ಸರ್ಕಾರಿ ನಿಯಮಾನುಸಾರ ಎಸ್‌ಸಿ/ಎಸ್‌ಟಿ/ಒಬಿಸಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಅನ್ವಯ).

ಅರ್ಜಿ ಶುಲ್ಕ: ಸಾಮಾನ್ಯ (UR), EWS ಮತ್ತು OBC ಅಭ್ಯರ್ಥಿಗಳಿಗೆ ರೂ. 1,072 ಹಾಗೂ ಎಸ್‌ಸಿ, ಎಸ್‌ಟಿ, PWD ಮತ್ತು ಮಾಜಿ ಸೈನಿಕರಿಗೆ ರೂ. 472 ಅರ್ಜಿ ಶುಲ್ಕವಿರುತ್ತದೆ.

ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ದಿನಾಂಕ: ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ (CBE), ಮೆರಿಟ್ ಪಟ್ಟಿ, ದಾಖಲೆಗಳ ಪರಿಶೀಲನೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ. ಮುಂಬರುವ ಜನವರಿ 27, 2027ರಂದು ಪ್ರವೇಶ ಪರೀಕ್ಷೆ ನಡೆಯಲಿದೆ.

Official Website: trichy.bhel.com

Share

Recent Posts

Recent Comments

No comments to show.
Related Articles