ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಭದ್ರಾ ಬಲದಂಡೆ ನಾಲೆ ಸೀಳಿ ಕಾಮಗಾರಿ: ರೈತರಿಗೆ ಸತ್ಯ ತಿಳಿಸಲು ಕುಂದೂರಿನಲ್ಲಿ ಆ. 9ಕ್ಕೆ ರೈತರ ಬೃಹತ್ ಸಭೆ

On: August 7, 2025 2:25 PM
Follow Us:
Bhadra
---Advertisement---

SUDDIKSHANA KANNADA NEWS/ DAVANAGERE/DATE:07_08_2025

ದಾವಣಗೆರೆ: ಭದ್ರಾ ಬಲದಂಡೆ ನಾಲೆ ಸೀಳಿ ಕಾಮಗಾರಿ ನಡೆಸಿ ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ದ್ರೋಹ ಬಗೆಯಲಾಗುತ್ತಿದೆ ಎಂಬ ಬಿಜೆಪಿ ಹಾಗೂ ಕೆಲ ರೈತ ಹೋರಾಟಗಾರರ ಆರೋಪಕ್ಕೆ ದಾಖಲೆ ಸಮೇತ ಉತ್ತರ ನೀಡುವ ಸಲುವಾಗಿ ಆಗಸ್ಟ್ 9ರಂದು ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ 11 ಗಂಟೆಗೆ ರೈತ ಮುಖಂಡರು, ಶಾಸಕರು, ಮಾಜಿ ಶಾಸಕರು, ರೈತ ಬಾಂಧವರ ಬೃಹತ್ ಸಭೆ ಕರೆಯಲಾಗಿದೆ.

READ ALSO THIS STORY: ತೋಟದ ಮನೆ ಅಟ್ಟದ ಮೇಲೆ ಅಡಗಿಸಿಟ್ಟಿದ್ದ ಸೀರೆ ಪ್ರಜ್ವಲ್ ರೇವಣ್ಣಗೆ ಮುಳುವಾಗಿದ್ದೇಗೆ?

ದಾವಣಗೆರೆಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಹೊನ್ನಾಳಿ ಕಾಂಗ್ರೆಸ್ ಶಾಸಕರಾದ ಶಾಂತನಗೌಡ, ಚನ್ನಗಿರಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್, ಮಾಯಕೊಂಡ ಶಾಸಕ ಕೆ. ಎಸ್. ಬಸವಂತಪ್ಪ ಅವರು ಬಿಜೆಪಿ ವಿನಾಕಾರಣ ಆರೋಪ ಮಾಡಿ ರೈತ ಬಾಂಧವರಲ್ಲಿ ತಪ್ಪು ಸಂದೇಶ ಹೋಗುವಂತೆ ಮಾಡಲಾಗಿದೆ. ಇದಕ್ಕೆ ದಾಖಲೆ ಸಮೇತ, ರೈತರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವ, ಆರೋಪಕ್ಕೆ ತಿರುಗೇಟು ನೀಡಲು ಈ ಸಭೆ ಕರೆಯಲಾಗಿದೆ.

ಶಾಸಕ ಶಾಂತನಗೌಡ ಮಾತನಾಡಿ, ಸಭೆಗೆ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಲಾಗುವುದು. ಹಳ್ಳಿ ಹಳ್ಳಿಗಳಲ್ಲಿಯೂ ಧ್ವನಿವರ್ಧಕದ ಮೂಲಕ, ಹರಿಹರ, ಮಾಯಕೊಂಡ, ಚನ್ನಗಿರಿ,
ಹೊನ್ನಾಳಿ ಸೇರಿದಂತೆ ಎಲ್ಲಾ ತಾಲೂಕುಗಳಿಂದಲೂ ರೈತ ಮುಖಂಡರಿಗೆ ಆಹ್ವಾನ ನೀಡಲಾಗುವುದು. ಕಾಂಗ್ರೆಸ್ ಪಕ್ಷದ ಶಾಸಕರು, ಮಾಜಿ ಶಾಸಕರು, ಕಳೆದ ವಿಧಾನಸಭೆ ಚುನಾವಣೆಯ ಪರಾಜಿತ ಅಭ್ಯರ್ಥಿಗಳು ಸೇರಿದಂತೆ ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆ. ಸಚಿವರು ಕಾರ್ಯದೊತ್ತಡ ಕಾರಣ ಸಭೆಗೆ ಬರುತ್ತಿಲ್ಲ. ನಾವು ಕಾಂಗ್ರೆಸ್ ಪಕ್ಷದ ಸಭೆ ಕರೆದಿಲ್ಲ. ಪಕ್ಷದ ಬಾವುಟ ಹಾಕಲ್ಲ. ರೈತ ಶಾಲು ಧರಿಸಿ ಸಭೆ ನಡೆಸುತ್ತೇವೆ ಎಂದು ತಿಳಿಸಿದರು.

ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್, ಕೆ. ಎಸ್. ಬಸವಂತಪ್ಪ ಹಾಗೂ ನಾನೂ ಭದ್ರಾ ಡ್ಯಾಂಗೆ ಭೇಟಿ ನೀಡಿದ್ದೇವೆ. ಬಿಜೆಪಿಯವರು ಭದ್ರಾ ಬಲದಂಡೆ ನಾಲೆ ಸೀಳಿ ಕಾಮಗಾರಿ ನಡೆಸಲಾಗುತ್ತಿದೆ ಎಂಬ ಆರೋಪ ಮಾಡಿದ್ದ ಸ್ಥಳಕ್ಕೂ ಭೇಟಿ ನೀಡಿ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಗಮನಕ್ಕೆ ತಂದಿದ್ದು, ಮಾತುಕತೆ ನಡೆಸಲಾಗಿದೆ. ಯಾವುದೇ ಕಾರಣಕ್ಕೂ ದಾವಣಗೆರೆ ಜಿಲ್ಲೆಯ ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಎಸ್. ಎಸ್. ಮಲ್ಲಿಕಾರ್ಜುನ್ ಅವರು ಹೇಳಿದ್ದಾರೆ. ರೈತ ನಿಯೋಗದೊಂದಿಗೆ ಡಿಕೆ ಶಿವಕುಮಾರ್, ಸಿಎಂ ಜೊತೆಗೆ ಚರ್ಚೆ ನಡೆದಿದೆ ಎಂದು ಹೇಳಿದರು.

ಮರದ ರೆಂಬೆ, ಕೊಂಬೆ ಕತ್ತರಿಸಿದರೆ ಸುಮ್ಮನಿರಬಹುದು. ಬುಡಕ್ಕೆ ವಿಷ ಹಾಕಿದರೆ ಸುಮ್ಮನೆ ಕೂರಲು ಆಗುತ್ತದೆಯಾ. ನಾವು ನಿಜವಾದ ರೈತ ಕುಟುಂಬದ ಹಿನ್ನೆಲೆಯಿಂದ ಬಂದವರು. ನಮಗೆ ರೈತರ ಕಷ್ಟ ಗೊತ್ತು. ಟಿವಿ, ಪೇಪರ್ ನಲ್ಲಿ
ಶಾಲು ಧರಿಸಿ ಹೋರಾಟ ಮಾಡಿದರೆ ರೈತರಾಗಲ್ಲ. ನಾವು ನಿಜವಾದ ರೈತಪರ ಕಾಳಜಿ ಉಳ್ಳವರು. ಅವರು ಅಧಿಕಾರ ಅನುಭವಿಸಿ ಅಧಿಕಾರದ ರೈತರ ಮಕ್ಕಳಾಗಿದ್ದಾರೆ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಹೆಸರು ಪ್ರಸ್ತಾಪಿಸದೇ
ವಾಗ್ದಾಳಿ ನಡೆಸಿದರು.

ಭದ್ರಾ ಬಲದಂಡೆ ನಾಲೆಯಿಂದ ಒಂದೇ ಒಂದು ಕ್ಯೂಸೆಕ್ ನೀರು ಹರಿದು ಬೇರೆ ಕಡೆ ಹೋಗುವುದಿಲ್ಲ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಗೆ ಕುಡಿಯುವ ನೀರು ಒದಗಿಸುವ ಯೋಜನೆ ಇದು. ಭದ್ರಾ ಡ್ಯಾಂ ಹಿನ್ನೀರಿನಿಂದ ನೀರು ಕೊಡಲಾಗುತ್ತಿದೆ. ಬಿಜೆಪಿಯವರು ಜನರು ಮತ್ತು ರೈತರಲ್ಲಿ ಗೊಂದಲ ಉಂಟು ಮಾಡಿ ಕಾಂಗ್ರೆಸ್ ಪಕ್ಷ, ಶಾಸಕರು ರೈತವಿರೋಧಿಗಳಂತೆ ಬಿಂಬಿಸಿದ್ದಾರೆ. ಕಳೆದ ಕೆಲದಿನಗಳಿಂದ ಎಲ್ಲವನ್ನೂ ಗಮನಿಸಿದ್ದೇವೆ. ಸಭೆಯಲ್ಲಿ ಎಲ್ಲಾ ಮಾಹಿತಿಯನ್ನು ದಾಖಲೆ ಸಮೇತ ನೀಡುತ್ತೇವೆ. ಕೇವಲ ಬಾಯಿ ಮಾತಲ್ಲ ಹೇಳುವುದಿಲ್ಲ. ಹೆಚ್ಚು ಮಾತನಾಡಲ್ಲ. ಎಲ್ಲಾ ವಿಚಾರಗಳನ್ನು ಸಭೆಯಲ್ಲಿ ಬಹಿರಂಗಪಡಿಸುತ್ತೇನೆ ಎಂದು ಶಾಂತನಗೌಡ ಹೇಳಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment