Home ದಾವಣಗೆರೆ ಭದ್ರಾ ಜಲಾಶಯದಿಂದ ನೀರು ಬಿಡುಗಡೆ: ಎಡದಂಡೆ ನಾಲೆಗೆ ಎಷ್ಟು? ಬಲದಂಡೆ ನಾಲೆಗೆ ಎಷ್ಟು ಕ್ಯೂಸೆಕ್ ಹೊರಹರಿವು?
ದಾವಣಗೆರೆಬೆಂಗಳೂರು

ಭದ್ರಾ ಜಲಾಶಯದಿಂದ ನೀರು ಬಿಡುಗಡೆ: ಎಡದಂಡೆ ನಾಲೆಗೆ ಎಷ್ಟು? ಬಲದಂಡೆ ನಾಲೆಗೆ ಎಷ್ಟು ಕ್ಯೂಸೆಕ್ ಹೊರಹರಿವು?

Share
ಭದ್ರಾ ಜಲಾಶಯ
Share

ದಾವಣಗೆರೆ: ರಾಜ್ಯದ ಪ್ರಮುಖ ಜೀವನಾಡಿಯಾಗಿರುವ ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿಯ ಭದ್ರಾ ಜಲಾಶಯದ ನೀರಿನ ಮಟ್ಟದಲ್ಲಿ ಏರಿಳಿತ ಮುಂದುವರಿದಿದೆ. ಸೆಪ್ಟೆಂಬರ್ 19, 2026ರ ಬೆಳಗಿನ ಜಾವ 6 ಗಂಟೆಯ ಅಧಿಕೃತ ವರದಿಯಂತೆ ಜಲಾಶಯದ ನೀರಿನ ಮಟ್ಟ 178.25 ಅಡಿ ದಾಖಲಾಗಿದೆ.

ಜಲಾಶಯದ ಗರಿಷ್ಠ ನೀರಿನ ಮಟ್ಟ 186 ಅಡಿಗಳಾಗಿದ್ದು ಒಟ್ಟು 71.535 ಟಿ.ಎಂ.ಸಿ (TMC) ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ಜಲಾಶಯದಲ್ಲಿ 61.847 ಟಿ.ಎಂ.ಸಿ ನೀರು ಲಭ್ಯವಿದೆ.

ಒಳಹರಿವು ಮತ್ತು ಹೊರಹರಿವಿನ ವಿವರ: ಮಳೆಯ ಪ್ರಮಾಣ ತಗ್ಗಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಬರುವ ನೀರಿನ ಒಳಹರಿವು ಕೇವಲ 408 ಕ್ಯೂಸೆಕ್‌ಗೆ ಕುಸಿದಿದೆ. ಆದರೆ, ಜಲಾಶಯದಿಂದ ಒಟ್ಟು 4,366 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಭದ್ರಾ ಜಲಾಶಯದ ಇಂದಿನ ಸ್ಥಿತಿಗತಿ: 

ಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ: 178.25 ಅಡಿ

ಜಲಾಶಯದ ಗರಿಷ್ಠ ಮಟ್ಟ: 186 ಅಡಿ

ಒಟ್ಟು ಹೊರ ಹರಿವು: 4,366

ಬಲದಂಡೆ ನಾಲೆ (RBC): 2,650 ಕ್ಯೂಸೆಕ್

ಎಡದಂಡೆ ನಾಲೆ (LBC): 380 ಕ್ಯೂಸೆಕ್

ಯು.ಬಿ.ಪಿ ಮತ್ತು ಕೆ.ಡಿ.ಆರ್ (UBP & KDR): 724 ಕ್ಯೂಸೆಕ್

ರಿವರ್ ಸ್ಲೂಯಿಸ್ (River Sluice): 500 ಕ್ಯೂಸೆಕ್

ಆವಿಭವನ ನಷ್ಟ (Evaporation): 112 ಕ್ಯೂಸೆಕ್

ಕಳೆದ ವರ್ಷದ ಅಂಕಿಅಂಶಗಳ ಹೋಲಿಕೆ:

ಹಿಂದಿನ ವರ್ಷ ಅಂದರೆ 2025ರ ಇದೇ ದಿನದಂದು ಜಲಾಶಯದ ನೀರಿನ ಮಟ್ಟ 185’6″ ಇತ್ತು ಹಾಗೂ 70.907 ಟಿ.ಎಂ.ಸಿ ನೀರು ಸಂಗ್ರಹವಿತ್ತು. ಅಂದು ಜಲಾಶಯಕ್ಕೆ 4,121 ಕ್ಯೂಸೆಕ್ ಒಳಹರಿವು ಇದ್ದು, ಹೊರಹರಿವು ಕೂಡ ಅದೇ ಪ್ರಮಾಣದಲ್ಲಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಜಲಾಶಯದಲ್ಲಿ ನೀರಿನ ಮಟ್ಟ ತಕ್ಕಷ್ಟು ಕಡಿಮೆಯಿರುವುದು ಕಂಡುಬಂದಿದೆ.

Share

Leave a comment

Leave a Reply

Your email address will not be published. Required fields are marked *

Related Articles