ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಕುಸಿಯುತ್ತಲೇ ಇದೆ ಭದ್ರಾ ಡ್ಯಾಂ (Bhadra Dam)ನೀರಿನ ಮಟ್ಟ: ಅಡಿಕೆ ಬೆಳೆಗಾರರಲ್ಲಿ ಆತಂಕಕ್ಕೆ ಕಾರಣವೇನು ಗೊತ್ತಾ…?

On: September 15, 2023 3:02 AM
Follow Us:
Bhadra Dam Water Level
---Advertisement---

SUDDIKSHANA KANNADA NEWS/ DAVANAGERE/ DATE:15-09-2023

ದಾವಣಗೆರೆ: ಭದ್ರಾ ಡ್ಯಾಂ (Bhadra Dam) ನಲ್ಲಿನ ನೀರು ಸಂಗ್ರಹ ಕಡಿಮೆಯಾಗುತ್ತಿರುವುದು ದೀರ್ಘಾವಧಿ ಬೆಳೆ ಅಡಿಕೆ ಬೆಳೆದವರ ಪರಿಸ್ಥಿತಿ ಹೇಳತೀರದ್ದಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಶೇಕಡಾ 30ರಿಂದ 40ರಷ್ಟು ಅಡಿಕೆ ತೋಟಗಳಿಗೆ ಇದೇ ನೀರು ಆಧಾರ. ಶಿವಮೊಗ್ಗ, ಚನ್ನಗಿರಿ, ಭದ್ರಾವತಿ, ಹೊನ್ನಾಳಿ ತಾಲೂಕಿನಲ್ಲಿಯೂ ಹೆಚ್ಚಾಗಿ ಅಡಿಕೆ ಬೆಳೆಗಾರರಿದ್ದು, ಇವರೂ ಸಹ ಭದ್ರಾ ಜಲಾಶಯದ ನೀರು ನಂಬಿಕೊಂಡಿದ್ದಾರೆ. ಭದ್ರಾವತಿ ತಾಲೂಕಿನಲ್ಲಂತೂ ಶೇಕಡಾ 75ರಷ್ಟು ಅಡಿಕೆ ಬೆಳೆಗಾರರಿದ್ದು, ಭದ್ರಾ ಎಡದಂಡೆ ನಾಲೆಯಲ್ಲಿ ಬರುತ್ತದೆ. ಈಗ ಹರಿಸುತ್ತಿರುವ ಪ್ರಮಾಣದ ನೀರು ನೂರು ದಿನಗಳ ಕಾಲ ಹರಿದರೆ ಬೇಸಿಗೆಗೆ ತುಂಬಾನೇ ಕಷ್ಟವಾಗುತ್ತದೆ. ಅಡಿಕೆ ತೋಟಗಳಿಗೆ ನೀರು ಸಿಗದೇ ರೈತರು ಅಡಿಕೆ ಮರಗಳನ್ನು ಕಡಿಯುವ ಪರಿಸ್ಥಿತಿ ಬಂದರೆ ಅಚ್ಚರಿಯೇನಿಲ್ಲ.

ಪರಿಹಾರ ಹೇಗೆ…?

ಭತ್ತ ನಾಟಿ ಮಾಡಿರುವುದು ಈಗ. ಆದ್ರೆ, ದೀರ್ಘಾವಧಿ ಬೆಳೆ ಅಡಿಕೆ ನಾಶವಾದರೆ ಸರ್ಕಾರ ಯಾವ ರೀತಿ ಪರಿಹಾರ ನೀಡುತ್ತದೆ ಎಂಬುದು ಸಹ ಗೊತ್ತಿಲ್ಲ. ಅಡಿಕೆ ಬೆಳೆ ಹಾಗೂ ಭತ್ತ ಯಾರೇ ಬೆಳೆದಿದ್ದರೂ ನಷ್ಟ ಅನುಭವಿಸಿದರೆ ಪರಿಹಾರ ಕೊಡಬೇಕು.
ಸರ್ಕಾರ ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಮಾಡಬೇಕು.

ಈ ಸುದ್ದಿಯನ್ನೂ ಓದಿ: 

ಲೋಕಾಯುಕ್ತ (Lokayukta) ದಾಳಿ ಪ್ರಕರಣ: ಮಾಡಾಳ್ ವಿರೂಪಾಕ್ಷಪ್ಪ, ಪುತ್ರನ ಪ್ರಕರಣ ತನಿಖೆ ಸ್ವತಂತ್ರ ತನಿಖಾ ಸಂಸ್ಥೆಗೆ ನೀಡುವಂತೆ ಹೈಕೋರ್ಟ್ ದ್ವಿಸದಸ್ಯ ಪೀಠ ಸೂಚನೆ

ಬಲದಂಡೆ ನಾಲೆಯಲ್ಲಿ ಸದ್ಯಕ್ಕೆ 2300 ಕ್ಯೂಸೆಕ್ ಹಾಗೂ ಎಡದಂಡೆ ನಾಲೆಯಲ್ಲಿ ಸ್ವಲ್ಪ ಕ್ಯೂಸೆಕ್ ಹೊರಗೆ ಬಿಡಲಾಗುತ್ತಿದೆ. ಇದೇ ಪ್ರಮಾಣದಲ್ಲಿ ನೀರು ಹರಿದರೆ ಡ್ಯಾಂ ನೀರಿನ ಮಟ್ಟ 160ಕ್ಕಿಂತ ಕಡಿಮೆ ಆಗುತ್ತದೆ. ಆನ್ ಅಂಡ್ ಆಫ್ ವ್ಯವಸ್ಥೆ
ಮಾಡಬೇಕು. ಇಲ್ಲದಿದ್ದರೆ ಈಗ ಹರಿಸಲಾಗುತ್ತಿರುವ ನೀರಿನ ಪ್ರಮಾಣವನ್ನ ಒಂದು ಸಾವಿರ ಕ್ಯೂಸೆಕ್ ಕಡಿಮೆ ಮಾಡಿದರೆ ನೀರು ಉಳಿತಾಯವಾಗಲಿದೆ.

ಭದ್ರಾ ಅಚ್ಚುಕಟ್ಟುದಾರರ ಕೊನೆ ಭಾಗದ ರೈತರು ಭತ್ತ ಬೆಳೆದವರು ನಷ್ಟ ಅನುಭವಿಸಬಹುದು. ಶೇಕಡಾ 20ರಿಂದ 30ರಷ್ಟು ಹಾನಿಯಾಗಬಹುದು. ಸರ್ಕಾರ ಹೇಳಿದಂತೆ ನೂರು ದಿನಗಳ ಕಾಲ ನೀರು ಹರಿಸಿದರೆ ಶೇಕಡಾ 50ರಿಂದ 60ರಷ್ಟು ಬೆಳೆ ಹಾನಿಯಾಗಲಿದೆ. ಮಳೆ ಬಂದರೆ ಸಮಸ್ಯೆಯಾಗದು. ಮಳೆ ಬಾರದಿದ್ದರೆ ಸಮಸ್ಯೆ ಮತ್ತಷ್ಟು ತೀವ್ರವಾಗಲಿದೆ.
ಎನ್ನುವುದು ಬಸವರಾಜಪ್ಪರ ವಾದ.

ಕುಡಿಯುವ ನೀರಿಗೂ ತೊಂದರೆ:

ಭದ್ರಾ ಜಲಾಶಯ ಕೇವಲ ಕೃಷಿಗೆ ಅಷ್ಟೇ ಅಲ್ಲ. ಕುಡಿಯುವ ನೀರಿಗೂ ಇದನ್ನೇ ಅವಲಂಬಿಸಲಾಗಿದೆ. ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಗದಗ ಸೇರಿದಂತೆ ಹಲವು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಭದ್ರಾ ಡ್ಯಾಂನಲ್ಲಿ ನೀರು ತಗ್ಗುತ್ತಲೇ ಇದೆ. ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಸಮಸ್ಯೆಯಾಗಲಿದೆ. ದಾವಣಗೆರೆ ಜಿಲ್ಲೆಗೆ ಒಂದು ಅಥವಾ ಒಂದೂವರೆ ತಿಂಗಳಿಗೆ ನಾಲೆಯಲ್ಲಿ ನೀರು ಹರಿಸದಿದ್ದರೆ ಕುಡಿಯುವ ನೀರಿಗೂ ತತ್ವಾರ ಎದುರಾಗಲಿದೆ.

ಜಾನುವಾರುಗಳಿಗೆ ಮೇವು ಸಿಗುವುದಿಲ್ಲ. ಸಂಕಷ್ಟಗಳು ಹೆಚ್ಚಾಗುತ್ತಲೇ ಹೋಗುತ್ತವೆ. ಈಗಲೇ ಎಚ್ಚೆತ್ತುಕೊಂಡು ಸಾಧಕ – ಬಾಧಕಗಳ ಪರಾಮರ್ಶಿಸಿದರೆ ಮುಂದಾಗುವ ಸಮಸ್ಯೆಗಳಿಗೆ ಕಡಿವಾಣ ಹಾಕಬಹುದು. ನನಗೂ ಭದ್ರಾ ಡ್ಯಾಂ (Bhadra Dam) ನೀರಿನ ವಿಚಾರ ಹಾಗೂ ಭದ್ರಾ ಅಚ್ಚುಕಟ್ಟುದಾರರ ಸಮಸ್ಯೆಗಳ ಬಗ್ಗೆ ಅರಿವಿದೆ. ಹೋರಾಟ ಮಾಡಿಕೊಂಡು ಬಂದಿದ್ದೇವೆ. ಈಗಾಗಲೇ ಭದ್ರಾವತಿ, ಶಿವಮೊಗ್ಗದಲ್ಲಿ ಪ್ರತಿಭಟನೆಗಳು ನಡೆದಿವೆ. ಮುಂದೆ ಹೋರಾಟ ಮತ್ತಷ್ಟು ಕಾವು ಪಡೆಯುವ ಸಾಧ್ಯತೆ ಇದೆ ಎನ್ನುತ್ತಾರೆ.

ಭದ್ರಾ ಡ್ಯಾಂ(Bhadra Dam) ನಿಂದ ನೀರು ಹರಿಸಲು ವಿರೋಧ ಇಲ್ಲ. ಆದ್ರೆ, ದಾವಣಗೆರೆಯಲ್ಲಿ ಸಭೆ ನಡೆಸಿ ನನ್ನ ವಿರುದ್ದ ಮಾತನಾಡಿದ್ದಾರೆ. ನಾನು ವಾಸ್ತವ ಮಾತನಾಡಿದ್ದೇನೆ. ಭವಿಷ್ಯದ ಅರಿವಿಟ್ಟುಕೊಂಡು ನಿರ್ಧಾರ ತೆಗೆದುಕೊಂಡರೆ ಸಮಸ್ಯೆ ಆಗದು. ಮಳೆ ಬರದೇ ಇದ್ದಲ್ಲಿ ಎದುರಾಗುವ ಸವಾಲು, ಆಗುವ ಅನಾಹುತ ಸಾಕಷ್ಟಿದೆ. ಸರ್ಕಾರ ಸರಿಯಾಗಿ ಯೋಚಿಸದೇ ನೀರು ಹರಿಸಿದ ಪರಿಣಾಮ ಎಲ್ಲರಿಗೂ ತೊಂದರೆಯಾಗಿದೆ. ಈಗ ತಪ್ಪಿನ ಅರಿವಾಗಿದೆ. ಹಾಗಾಗಿ, ಸರಿಪಡಿಸಲು ಹೆಣಗಾಡುತ್ತಿದೆ. ನನ್ನ ಅಂದಾಜಿನ ಪ್ರಕಾರ ಮುಂದಿನ ಏಪ್ರಿಲ್ ವರೆಗೆ ಮಳೆ ಆಗುವ ಸಾಧ್ಯತೆ ಕಡಿಮೆ. ಮಳೆಯಾದರೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎನ್ನುತ್ತಾರೆ ಹೆಚ್. ಆರ್. ಬಸವರಾಜಪ್ಪ.

ನೀರಿನ ರಾಜಕಾರಣ ಸಲ್ಲದು:

ಯಾರೇ ಆಗಲಿ, ನೀರಿನ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಯಾಕೆಂದರೆ ರೈತರ ಬದುಕು ಮುಖ್ಯ. ಅಡಿಕೆ, ಭತ್ತ ಬೆಳೆಗಾರರು ಉಳಿಯಬೇಕು. ರೈತರ ಬದುಕು ಹಸನಾಗಿಸಲು, ಜೀವನ ರೂಪಿಸಲು ಎಲ್ಲರೂ ಹೋರಾಡಬೇಕು. ಅದನ್ನು ಬಿಟ್ಟು ನೀರಿನ ವಿಚಾರದಲ್ಲಿ ಯಾರೂ ರಾಜಕೀಯ ಮಾಡಲು ಹೋಗಬಾರದು. ಕೆಲವರು ನನ್ನ ಅಡಿಕೆ ತೋಟಕ್ಕೆ ನೀರು ಬೇಕು ಎಂದು ಹೋರಾಟ ಮಾಡುತ್ತೇನೆ ಎಂದು ಸುಳ್ಳು, ಅಪಪ್ರಚಾರ ನಡೆಸುತ್ತಾರೆ. ರೈತರ ಬದುಕಿನ ಜೊತೆ ಯಾರೂ ಹುಡುಗಾಟ ಆಡಬಾರದು. ಅವರ ಬದುಕು ಕಟ್ಟಿಕೊಳ್ಳಲು ಹೋರಾಡೋಣ. ಭದ್ರಾವತಿ ತಾಲೂಕಿನಲ್ಲಿ ಶೇಕಡಾ 75 ರಷ್ಟು ಅಡಿಕೆ ತೋಟ ಹೊಂದಿರುವ ರೈತರ ಸ್ಥಿತಿ ಏನಾಗಬೇಕು ಎಂದು ಪ್ರಶ್ನಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment