SUDDIKSHANA KANNADA NEWS/ DAVANAGERE/ DATE:23-09-2023
ದಾವಣಗೆರೆ: ಭದ್ರಾ ಜಲಾಶಯ(Bhadra Dam)ದಿಂದ ಬಲದಂಡೆ ನಾಲೆಯಲ್ಲಿ ನೀರು ಸ್ಥಗಿತಗೊಳಿಸಿರುವುದಕ್ಕೆ ದಾವಣಗೆರೆ ಜಿಲ್ಲೆಯ ರೈತರ ರೋಷಾಗ್ನಿಗೆ ಕಾರಣವಾಗಿದೆ. ಪ್ರತಿಭಟನೆಯೂ ಮುಂದುವರಿದಿದೆ. ಭತ್ತ ಬೆಳೆದ ರೈತರಂತೂ ಆತಂಕಕ್ಕೆ ಒಳಗಾಗಿದ್ದಾರೆ. ಈ ಬೆಳವಣಿಗೆ ನಡುವೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ರೈತರಿಗೆ ಭರವಸೆ ಮಾತು ಹೇಳಿದ್ದಾರೆ. ಭತ್ತ ಬೆಳೆದ ರೈತರ ಪರವಾಗಿ ಇದ್ದೇನೆ. ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:
ಭದ್ರಾ ಡ್ಯಾಂ (Bhadra Dam) ನೀರು ಹರಿಸಲು ಪಟ್ಟು, ಬೆಣ್ಣೆನಗರಿಯಲ್ಲಿ ಕಾವೇರಿದ ರೈತರ ಹೋರಾಟ: ರೈತ ಮುಖಂಡರೂ ಸೇರಿ ನೂರಾರು ರೈತರ ಬಂಧನ ಆಗಿದ್ದೇಕೆ…?
ಮಾಧ್ಯಮದವರ ಜೊತೆ ಮಾತನಾಡುತ್ತಾ ಈ ವಿಷಯ ತಿಳಿಸಿರುವ ಅವರು, ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಅವರು ಕಾವೇರಿ ನದಿ ನೀರು ತಮಿಳುನಾಡಿಗೆ ಹರಿಸುವ ಸಂಬಂಧ ಚರ್ಚಿಸಲು ನವದೆಹಲಿಗೆ ತೆರಳಿದ ಕಾರಣ ನಿರ್ಧಾರಕ್ಕೆ ಬರಲಾಗಿಲ್ಲ. ಜಿಲ್ಲೆಯ ಶಾಸಕರು, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರ ಜೊತೆ ಚರ್ಚೆ ನಡೆಸಿದ್ದಾರೆ. ನಾನೂ ಸಹ ಈ ವೇಳೆ ಹಾಜರಿದ್ದೆ. ತುರ್ತು ಕಾರ್ಯ ಇದ್ದ ಕಾರಣ ದೆಹಲಿಗೆ ಹೋಗಿದ್ದರಿಂದ ಅಂದು ನಿರ್ಣಯಕ್ಕೆ ಬಂದಿಲ್ಲ. ಅವರು ಈಗ ಮತ್ತೆ ಬಂದಿದ್ದು, ಈ ಬಗ್ಗೆ ಸಮಾಲೋಚನೆ ನಡೆಸಿ ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.

ದಾವಣಗೆರೆ ಜಿಲ್ಲೆಯ ರೈತರು ಒಂದು ಹೇಳ್ತಾರೆ, ಶಿವಮೊಗ್ಗ ಜಿಲ್ಲೆಯ ರೈತರು ಇನ್ನೊಂದು ಹೇಳ್ತಾರೆ. ಭದ್ರಾ ಡ್ಯಾಂ (Bhadra Dam) ನೀರು ಅವಲಂಬಿಸಿರುವ ಹರಪನಹಳ್ಳಿಯವರು ಮತ್ತೊಂದು ಹೇಳ್ತಾರೆ. ಹಾಗಾಗಿ, ಸ್ಪಷ್ಟ ನಿರ್ಧಾರಕ್ಕೆ ಬರಲಾಗಿಲ್ಲ. ನೀರಾವರಿ ಇಲಾಖೆಯ ಅಧಿಕಾರಿಗಳು ಭದ್ರಾ ಡ್ಯಾಂ(Bhadra Dam)ನಲ್ಲಿ ನೀರು ಸಂಗ್ರಹವಿದೆ. ತೊಂದರೆ ಇಲ್ಲ ಎಂದು ಹೇಳಿದ್ದಾರೆ. ಹಾಗಾಗಿ, ಈ ಬಗ್ಗೆ ಸುದೀರ್ಘವಾಗಿ ಸಮಾಲೋಚನೆ ನಡೆಸಿ ಜಿಲ್ಲೆಯ ರೈತರ ಪರವಾಗಿ ನಿರ್ಧಾರಕ್ಕೆ ಬರಲಾಗುವುದು ಎಂದು ಹೇಳಿದ್ದಾರೆ.
ಇದರಿಂದಾಗಿ ಭತ್ತ ಬೆಳೆದ ಬೆಳೆಗಾರರಿಗೆ ಸಮಾಧಾನದ ಸಂಗತಿಯಾದರೂ ಇದು ಕಾರ್ಯರೂಪಕ್ಕೆ ಬರಬೇಕು ಅಷ್ಟೇ. ಮತ್ತೊಂದು ವಿಶೇಷ ಅಂದರೆ ದಾವಣಗೆರೆ ಜಿಲ್ಲೆಯ ಭದ್ರಾ ಅಚ್ಚುಕಟ್ಟುದಾರರ ಪ್ರದೇಶದವರೇ ಹೆಚ್ಚಿದ್ದಾರೆ. ಇವರ ಹಿತಕ್ಕೆ ಬದ್ಧ ಎಂದೂ ಸಹ ಹೇಳಿರುವುದರಿಂದ ಆಶಾಭಾವನೆ ಮೂಡಿದೆ.

ಇನ್ನೆರಡು ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳುವುದು ಖಚಿತ. ಭಾನುವಾರದಿಂದ ನೀರು ಸ್ಥಗಿತಗೊಂಡಿದೆ. ಅಧಿಕಾರಿಗಳು ನೀರು ಸಂಗ್ರಹವಿದೆ ಎಂದು ಹೇಳುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರಲಾಗುತ್ತದೆ. ನಾನಿರುವವರೆಗೆ ನೂರಕ್ಕೆ ನೂರರಷ್ಟು ಭತ್ತ ಬೆಳೆಗಾರರು ಬೆಳೆಯಬಹುದು. ಎದೆಗುಂದುವ ಅವಶ್ಯಕತೆ ಇಲ್ಲ. ಭಯ ಪಡಲೂ ಹೋಗಬೇಡಿ ಎಂದು ಮಲ್ಲಿಕಾರ್ಜುನ್ ಹೇಳಿದ್ದಾರೆ.
ಮಾಗಡಿ ಶಾಸಕ ಬಾಲಕೃಷ್ಣ ಅವರು ಮೂವರು ಮುಖ್ಯಮಂತ್ರಿಗಳಾಗಲಿ. 15 ಮಂದಿ ಉಪಮುಖ್ಯಮಂತ್ರಿಯಾಗಲಿ ಎಂದು ಹೇಳಿದ್ದಾರೆ. ಉಳಿದ ಶಾಸಕರೆಲ್ಲರಿಗೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟುಬಿಡಿ ಎಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸಿಎಂ ನೇಮಕ ಸಂಬಂಧ ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದಿದ್ದಾರೆ. ಪಕ್ಷದ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಕಾದು ನೋಡೋಣ ಎಂದು ಮಲ್ಲಿಕಾರ್ಜುನ್ ಹೇಳಿದರು.