SUDDIKSHANA KANNADA NEWS/ DAVANAGERE/ DATE_03-07_2025
ದಾವಣಗೆರೆ: ಭದ್ರಾ ನದಿ ದಂಡೆಯ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರಿಗೆ ಭದ್ರಾ ಜಲಾಶಯದ ಪ್ರದೇಶದಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದ್ದು, ಸಾಕಷ್ಟು ಒಳಹರಿವು ಬರುತ್ತಿದೆ.
READ ALSO THIS STORY: “19 ಕೋಟಿ 25 ಲಕ್ಷ ರೂ. ಬಂದಿದ್ದರೂ ಕೊಡುತ್ತಿಲ್ಲ”: ಸಾವಿಗೆ ಕಾರಣ ಬರೆದಿಟ್ಟು ಹೋದ ದಾವಣಗೆರೆಯ ಶಶಿಕುಮಾರ!:

ನೀರಿನ ಸಂಗ್ರಹ ಮಟ್ಟವು ಹೆಚ್ಚಾಗತೊಡಗಿದೆ. ಹರಿದು ಬರುವ ಒಳಹರಿವಿನ ಪ್ರಮಾಣ 20000-25000 ಕ್ಯೂಸೆಕ್ಸ್ ಇದ್ದು, ಅಣಿಕಟ್ಟು ಸುರಕ್ಷತೆ ದೃಷ್ಠಿಯಿಂದ ಹೆಚ್ಚುವರಿ ನೀರನ್ನು ಯಾವ ಸಮಯದಲ್ಲಾದರೂ ಸ್ಪಿಲ್ ವೇ ಗೇಟ್ ಮುಖಾಂತರ ಬೀಡಲಾಗುವುದು.
ಭದ್ರಾ ನದಿಯ ಎಡ ಮತ್ತು ಬಲ ದಂಡೆಯ ಉದ್ದಕ್ಕೂ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಮುಂಜಾಗ್ರತೆಯಾಗಿ ಸುರಕ್ಷಿತ ಸ್ಥಳಗಳಿಗೆ ಹೋಗಬೇಕು. ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದು, ಜಾನುವಾರುಗಳನ್ನು ನದಿ ಪಾತ್ರದಲ್ಲಿ ಮೇಯಿಸುವುದನ್ನು ನಿಷೇಧಿಸಲಾಗಿದೆ. ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.