Site icon Kannada News-suddikshana

ಭದ್ರಾ ಡ್ಯಾಂ (Bhadra Dam) ನೀರು ಹರಿಸುವ ಭರವಸೆ ಕೊಟ್ಟಿದ್ದರೂ ಆದೇಶ ಬಂದಿಲ್ಲ, ಮರ್ಮವೇನೂ ಗೊತ್ತಾಗ್ತಿಲ್ಲ: ಜಿ. ಎಂ. ಸಿದ್ದೇಶ್ವರ

G.M. SIDDESHWARA

G.M. SIDDESHWARA

SUDDIKSHANA KANNADA NEWS/ DAVANAGERE/ DATE:16-10-2023

ದಾವಣಗೆರೆ: ಭದ್ರಾ ಡ್ಯಾಂ (Bhadra Dam)ನಿಂದ ಬಲದಂಡೆ ನಾಲೆಯಲ್ಲಿ ನೀರು ನಿಲ್ಲಿಸುವುದಿಲ್ಲ ಎಂಬ ಭರವಸೆಯನ್ನು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೀಡಿದ್ದರು. ಆದ್ರೆ, ಸರ್ಕಾರದಿಂದ ಆದೇಶ ಬಂದಿಲ್ಲ. ಇದರ ಹಿಂದಿನ ಮರ್ಮವೇನು ಎಂಬುದು ಗೊತ್ತಾಗುತ್ತಿಲ್ಲ ಎಂದು ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಬೇಸರ ವ್ಯಕ್ತಪಡಿಸಿದರು.

Read Also This Story:

STOCK MARKET: ಷೇರುಪೇಟೆಯಲ್ಲಿ ನಿರುತ್ಸಾಹ : ನಿಫ್ಟಿ 19 ಅಂಕ, ಸೆನ್ಸೆಕ್ಸ್ 115 ಅಂಕ ಇಳಿಕೆ

ನಗರದ ಕೆಇಬಿ ಕಚೇರಿಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಭದ್ರಾ ಡ್ಯಾಂನಿಂದ ನೀರು ಹರಿಸದಿದ್ದರೆ ರೈತರಿಗೆ ಆಗುವ ನಷ್ಟ ಭರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಐದು ಗ್ಯಾರಂಟಿ ಭರವಸೆ ನೀಡಿ ಅಧಿಕಾರ ಕ್ಕೆ ಬಂದಿದೆ. ಯಾರಿಗೂ ಕೊಟ್ಟಿಲ್ಲ. ಸರ್ಕಾರದ ಖಜಾನೆ ಖಾಲಿ ಆಗಿದೆ. ಈ ಸರ್ಕಾರ ಶೇ. 80 ಕಮಿಷನ್ ಭ್ರಷ್ಟಾಚಾರದ ಸರ್ಕಾರ ಇದು. ಸರಿಯಾದ ಆಡಳಿತ ಕೊಡಲಿ. ಇಲ್ಲವಾದರೆ ರಾಜೀನಾಮೆ ಕೊಡಲಿ ಎಂದು
ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಇಡೀ ರಾಜ್ಯಕ್ಕೆ ಕತ್ತಲು ಭಾಗ್ಯ ನೀಡಿದೆ. ವಿದ್ಯುತ್ ಉತ್ಪಾದನಾ ಮಾಡುತ್ತಿಲ್ಲ. ರೈತರಿಗೆ ವಿದ್ಯುತ್ ನೀಡದ ಈ ಸರ್ಕಾರ ತೊಲಗಬೇಕು ಎಂದು ಹೇಳಿದರು.

 

Exit mobile version