SUDDIKSHANA KANNADA NEWS/ DAVANAGERE/ DATE:02-08-2023
Bhadra Dam Water Level Today
ದಾವಣಗೆರೆ: ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಭದ್ರಾ ಡ್ಯಾಂ (Bhadra Dam)ಗೆ ಬರುತ್ತಿರುವ ಒಳಹರಿವಿನ ಪ್ರಮಾಣವೂ ಸ್ವಲ್ಪ ಹೆಚ್ಚಾಗಿದೆ. ಭದ್ರಾ ಡ್ಯಾಂನ ಇಂದಿನ ನೀರಿನ ಮಟ್ಟ 163.3ರಷ್ಟಿದೆ.
ಕಳೆದ ವರ್ಷ ಇದೇ ದಿನ 184.2 ಅಡಿ ನೀರು ಇತ್ತು. ಆದ್ರೆ, ಈ ವರ್ಷ ಇನ್ನು ಭದ್ರಾ ಡ್ಯಾಂ (Bhadra Dam) ತುಂಬಲು 22.7 ಅಡಿ ನೀರು ಬರಬೇಕಿದೆ. ಕಳೆದ ನಾಲ್ಕೈದು ದಿನಗಳಿಂದ ಮಳೆ ತುಂಬಾನೇ ಕಡಿಮೆಯಾಗಿತ್ತು. ಆದ್ರೆ, ಮಂಗಳವಾರ ಸ್ವಲ್ಪ ಪ್ರಮಾಣದಲ್ಲಿ ಮಳೆ ಜಾಸ್ತಿಯಾಗಿದ್ದು, ಒಂದು ಸಾವಿರ ಕ್ಯೂಸೆಕ್ ಹೆಚ್ಚಾಗಿದೆ.

163 ಅಡಿ ದಾಟುತ್ತೆ ಎಂದುಕೊಂಡಿದ್ದ ರೈತರಿಗೆ ಖುಷಿ ಕೊಟ್ಟಿದೆ. ಬುಧವಾರದ ಹೊತ್ತಿಗೆ ಜಲಾಶಯ 163.3 ಆಗಿದ್ದು, ಜಿಲ್ಲಾಡಳಿತವು ಸಹ 163 ಅಡಿ ದಾಟಿದ ಬಳಿಕ ಭದ್ರಾ ನಾಲೆಗಳಿಗೆ ನೀರು ಹರಿಸಲಾಗುವುದು ಎಂದು ಹೇಳಿತ್ತು. ಈಗ ನೀರು ‘
ಹರಿಸಲು ದಿನಗಣನೆ ಶುರುವಾಗಿದೆ. ಇನ್ನು ವಾರದೊಳಗೆ ನಾಲೆಗಳಿಗೆ ನೀರು ಹರಿಸುವ ಸಾಧ್ಯತೆ ಇದೆ.
ಈ ಸುದ್ದಿಯನ್ನೂ ಓದಿ:
Davanagere: ಸಂಸದ ಸಿದ್ದೇಶ್ವರರ ಸಿಡಿಗುಂಡು ವಾಗ್ಬಾಣಕ್ಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ “ಮಲ್ಲಗುದ್ದಿನೇಟು…”!
ಇನ್ನೆರಡು ತಿಂಗಳು ಮಳೆ ಇದ್ದು, ಡ್ಯಾಂ ಭರ್ತಿಯಾಗುವ ವಿಶ್ವಾಸದಲ್ಲಿ ಭದ್ರಾ ಡ್ಯಾಂ (Bhadra Dam) ಅಥಾರಿಟಿ ಅಧಿಕಾರಿಗಳು ಇದ್ದಾರೆ. ಮಳೆ ಸುರಿಯುತ್ತಿರುವುದರಿಂದ ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣವೂ ಕೊಂಚ ಹೆಚ್ಚಾಗಿದೆ.
ಜಲಾಶಯಕ್ಕೆ 6729 ಕ್ಯೂಸೆಕ್ ಹರಿದು ಬರುತ್ತಿದ್ದು, ನಿನ್ನೆಗೆ ಹೋಲಿಸಿದರೆ ಇಂದು ಸುಮಾರು ಒಂದು ಸಾವಿರ ಕ್ಯೂಸೆಕ್ ನೀರು ಹರಿದು ಬಂದಿದೆ.ಕಳೆದ ವರ್ಷ ಇದೇ ದಿನ ಭದ್ರಾ ಡ್ಯಾಂ ನೀರಿನ ಮಟ್ಟ 184.2 ಅಡಿ ಇತ್ತು.
ಭದ್ರಾ ಡ್ಯಾಂ (Bhadra Dam) ನೀರಿನ ಮಟ್ಟ
ಭದ್ರಾ ಡ್ಯಾಂ (Bhadra Dam)
ನೀರಿನ ಒಟ್ಟು ಸಂಗ್ರಹ: 186 ಅಡಿ
ದಿನಾಂಕ:02- 08 -2023
ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ: 163.3 ಅಡಿ
ಎಂಎಸ್ ಎಲ್ : 2135.25 Ft
ಕೆಪಾಸಿಟಿ: 46.006= 41.826 Tmc
ಒಳಹರಿವು: 6729 ಕ್ಯೂಸೆಕ್
ಒಟ್ಟು ಹೊರಹರಿವು: 190 ಕ್ಯೂಸೆಕ್
ಕಳೆದ ವರ್ಷ ಇದೇ ದಿನ: 184.2 ಅಡಿ
ಕೆಪಾಸಿಟಿ: 69.320 Tmc
Bhadra Dam, Bhadra Dam Water Level, Bhadra Dam Inflow, Bhadra Dam OutFlow, Bhadra Dam Water Level Today, Bhadra Dam News, Bhadra Dam Suddi, Bhadra Dam News Today