SUDDIKSHANA KANNADA NEWS/ DAVANAGERE/ DATE:13-09-2023
ದಾವಣಗೆರೆ: ದಿನ ಕಳೆದಂತೆ ಭದ್ರಾ ಜಲಾಶಯ(Bhadra Dam)ದ ನೀರಿನ ಮಟ್ಟ ಕುಸಿಯುತ್ತಲೇ ಇದೆ. 167 ಅಡಿ ಮುಟ್ಟಿದ್ದ ಭದ್ರಾ ಡ್ಯಾಂನಿಂದ ನೀರು ಹೊರ ಹರಿಸುತ್ತಿರುವುದರಿಂದ ಸುಮಾರು 5 ಅಡಿಗಳಷ್ಟು ನೀರು ಕಡಿಮೆಯಾಗಿದೆ. ಮಳೆಯೂ ಬರುತ್ತಿಲ್ಲ. ಸಂಗ್ರಹವಾಗಿರುವ ನೀರು ಕುಸಿತ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಕಾಡಾ ಆನ್ ಅಂಡ್ ಆಫ್ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.
ಆನ್ ಅಂಡ್ ಆಫ್ ಎಂದರೇನು…?
ಈ ಹಂಗಾಮಿನಯಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ನೂರು ದಿನಗಳ ಕಾಲ ನೀರು ಹರಿಸಲು ಸರ್ಕಾರ ನಿರ್ಧರಿಸಿ ಆದೇಶ ಹೊರಡಿಸಿತ್ತು. ನಿರಂತರವಾಗಿ ನೀರು ಹರಿಸುವ ಬದಲು ಆನ್ ಅಂಡ್ ಆಫ್ ವ್ಯವಸ್ಥೆ ಜಾರಿಗೆ ಮುಂದಾಗಿದೆ.
ಆದ್ರೆ, ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಈ ನಿಟ್ಟಿನಲ್ಲಿ ಯಾವುದೇ ಘೋಷಣೆ, ಆದೇಶ ಹೊರಡಿಸಿಲ್ಲ, ಸ್ಪಷ್ಟನೆಯನ್ನೂ ಕೊಟ್ಟಿಲ್ಲ. ಈಗ ಆನ್ ಅಂಡ್ ಆಫ್ ವ್ಯವಸ್ಥೆ ಎಂದರೆ ನೂರು ದಿನಗಳ ಕಾಲ ನೀರು ಹರಿಸದೇ, ಮಧ್ಯೆ ಮಧ್ಯೆ ನೀರು ಕಡಿತಗೊಳಿಸುವುದಾಗಿದೆ.
ಈ ಸುದ್ದಿಯನ್ನೂ ಓದಿ:
M. P. Renukacharya:ಎಲ್ಲರನ್ನೂ ಉಚ್ಚಾಟನೆ ಮಾಡ್ಲಿ, ನಾಲ್ಕೇ ಜನ ಬಿಜೆಪಿಯಲ್ಲಿರಲಿ – ಯಾರಿಗೂ ಜಗ್ಗಲ್ಲ, ಬಗ್ಗಲ್ಲ: ಜಿಲ್ಲಾ ಬಿಜೆಪಿಗೆ ಸೆಡ್ಡು ಹೊಡೆದ ಎಂ. ಪಿ. ರೇಣುಕಾಚಾರ್ಯ
ಸ,ದ್ಯ ಬಲದಂಡೆ ನಾಲೆಗೆ ಪ್ರತಿನಿತ್ಯವೂ 2300 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಎಡದಂಡೆ ಕಾಲುವೆಗೆ 431 ಕ್ಯೂಸೆಕ್ ಹೊರ ಬಿಡಲಾಗುತ್ತಿದೆ. ಆನ್ ಅಂಡ್ ಆಫ್ ವ್ಯವಸ್ಥೆಯಡಿ ಹತ್ತು ದಿನಗಳ ಕಾಲ ನೀರು ಬಂದ್ ಮಾಡಿ 20 ದಿನಗಳ ಕಾಲ ಕಾಲುವೆಗೆ ನೀರು ಹೊರಬಿಡಲಾಗುತ್ತದೆ.
ಕಳೆದ ವಾರವಷ್ಟೇ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕಾಡಾ ಸಭೆ ನಡೆಸಿದ್ದರು. ರೈತರು, ಅಧಿಕಾರಿಗಳು, ಭದ್ರಾ ಜಲಾಶಯ(Bhadra Dam)ದ ಮೇಲುಸ್ತುವಾರಿ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದರು. ಆ ಬಳಿಕ ಸೆಪ್ಟಂಬರ್ 11ರೊಳಗೆ ಮತ್ತೊಮ್ಮೆ ಸಭೆ ನಡೆಸಿ ತೀರ್ಮಾನ ಪ್ರಕಟಿಸುವುದಾಗಿ ಹೇಳಿದ್ದರಾದರೂ ಕಾರ್ಯರೂಪಕ್ಕೆ ಬಂದಿಲ್ಲ. ಇಂದು ಆನ್ ಅಂಡ್ ಆಫ್ ವ್ಯವಸ್ಥೆ ಜಾರಿ ಸಂಬಂಧ ನಿರ್ಣಯ ಹೊರಬೀಳುವ ಸಾಧ್ಯತೆ ಹೆಚ್ಚಿದೆ.
ಬಲದಂಡೆ ನಾಲೆಯಲ್ಲಿ ಸತತವಾಗಿ 100 ದಿನಗಳ ಕಾಲ ನೀರು ಹರಿಸಿದರೆ ಭದ್ರಾ ಅಚ್ಚುಕಟ್ಟು ಪ್ರದೇಶದ ಎಲ್ಲಾ ರೈತರಿಗೆ ಬೇಸಿಗೆ ಬೆಳೆಗೆ ಸಿಗುವುದಿಲ್ಲ. ದಾವಣಗೆರೆ ಜಿಲ್ಲೆಯ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ನಮಗೆ ಬೇಸಿಗೆಯಲ್ಲಿ ನೀರು ಸಿಗುವುದು ಕಷ್ಟ. ಈಗಾಗಲೇ ಭತ್ತ ನಾಟಿ ಮಾಡಿದ್ದು ಈ ಬೆಳೆಯಾದರೂ ಬರಲಿ. ಅನುವು ಮಾಡಿಕೊಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಮಧು ಬಂಗಾರಪ್ಪ ಅವರು ನಿರ್ಧಾರಕ್ಕೆ ಬರುವುದು ಕಷ್ಟಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವರಾಗಿರುವ ಡಿ. ಕೆ. ಶಿವಕುಮಾರ್ ಅಂತಿಮ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ. ಡಿಕೆಶಿ ನೀಡಿದ ಸೂಚನೆ ಮೇರೆಗೆ ಮಧು ಬಂಗಾರಪ್ಪ ಅವರು, ಆನ್ ಅಂಡ್ ಆಫ್ ಘೋಷಿಸುವ ಸಾಧ್ಯತೆ ಹೆಚ್ಚಳವಾಗಿದೆ.
ಭದ್ರಾ ನೀರು ಆಶ್ರಯಿಸಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ದಾವಣಗೆರೆ ಜಿಲ್ಲೆಯ ಚನ್ನಗಿರಿ, ಚಿತ್ರದುರ್ಗ ಜಿಲ್ಲೆಯ ತಾಲೂಕುಗಳು ಬೆಳೆ ಬೆಳೆಯುತ್ತಿವೆ. ಕುಡಿಯುವ ನೀರಿಗೂ ಇದೇ ಮೂಲ. ಶಿವಮೊಗ್ಗ ಗ್ರಾಮೀಣ, ಭದ್ರಾವತಿ ತಾಲೂಕು,
ದಾವಣಗೆರೆ ಜಿಲ್ಲೆಯ ಅಚ್ಚುಕಟ್ಟು ಪ್ರದೇಶದ ರೈತರಿಗೆ ಭದ್ರಾ ಬಲದಂಡೆ ಕಾಲುವೆಯ ನೀರು ಬೇಕು. ನೀರಿನ ಸಂಗ್ರಹ 161. 3 ಅಡಿ ಆಗಿದ್ದು, ಕಳೆದ ವರ್ಷ ಇದೇ ದಿನ ಭದ್ರಾ ಡ್ಯಾಂ (Bhadra Dam)ನಲ್ಲಿ 185 ಅಡಿ ಇತ್ತು. ಡ್ಯಾಂ ತುಂಬಲು ಈ ವರ್ಷ ಇನ್ನು 25 ಅಡಿ ನೀರು ಬೇಕಿದೆ.
ಒಟ್ಟಿನಲ್ಲಿ ಇಂದು ಐಸಿಸಿಯಿಂದ ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.