SUDDIKSHANA KANNADA NEWS/ DAVANAGERE/DATE:13_08_2025
ದಾವಣಗೆರೆ: ಈ ವರ್ಷ ಭಾರೀ ವರ್ಷಧಾರೆಯಾದ ಪರಿಣಾಮ ಭದ್ರಾ ಡ್ಯಾಂ ಭರ್ತಿಗೆ ಕ್ಷಣಗಣನೆ ಶುರುವಾಗಿದೆ. ಜಲಾಶಯ ಭರ್ತಿಗೆ ಇನ್ನು ಕೇವಲ 1. 7 ಅಡಿ ನೀರು ಮಾತ್ರ ಬರಬೇಕು.
READ ALSO THIS STORY: ಜಾನುವಾರುಗಳ ಕದ್ದು ನಿದ್ದೆಕೆಡಿಸಿದ್ದ 6 ಆರೋಪಿಗಳ ಬಂಧನವೇ ರೋಚಕ: ಮಾರಾಟ ಮಾಡುತ್ತಿದ್ದದ್ದು ಯಾರಿಗೆ?
ಜಲಾಶಯಕ್ಕೆ 11007 ಕ್ಯೂಸೆಕ್ ಒಳಹರಿವಿದ್ದು, 6215 ಕ್ಯೂಸೆಕ್ ಹೊರ ಹರಿವಿದೆ. ಜಲಾಶಯದ ಇಂದಿನ ನೀರಿನ ಮಟ್ಟ 184.3 ಅಡಿಗೆ ಏರಿಕೆ ಆಗಿದ್ದು, ಜಲಾಶಯಕ್ಕೆ ಭರ್ತಿಗೆ ಕೇವಲ 1. 7 ಅಡಿ ನೀರು ಮಾತ್ರ ಬೇಕು. ಜಲಾಶಯ ಬಹುತೇಕ ಭರ್ತಿಯಾಗಿದ್ದು, ಜಲಾಶಯದಿಂದಲೂ ನೀರು ಹೊರಹರಿಸಲಾಗುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮತ್ತು ಭದ್ರಾ ಜಲಾನಯನ ಪ್ರದೇಶದಲ್ಲಿ ಈ ವರ್ಷ ಮುಂಗಾರು ಮಳೆ ಅಬ್ಬರಿಸಿ ಬೊಬ್ಬಿರಿದಿತ್ತು. ಸದ್ಯಕ್ಕೆ ವರುಣನ ಆರ್ಭಟ ತಗ್ಗಿದ್ದರೂ, ಜಲಾಶಯ ಭರ್ತಿಯಾಗಿರುವುದರಿಂದ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳ ರೈತರು ಹಾಗೂ ಜನರ ಸಂತಸಕ್ಕೆ ಕಾರಣವಾಗಿದೆ.
ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 180.1 ಅಡಿ ಇತ್ತು. ಜಲಾಶಯದ ಗರಿಷ್ಠ ಮಟ್ಟ 186 ಅಡಿ.
ಭದ್ರಾ ಡ್ಯಾಂ ಇತಿಹಾಸದಲ್ಲೇ ಮೊದಲ ಬಾರಿಗೆ ಜುಲೈ ಅಂತ್ಯದಲ್ಲೇ ಅತಿ ಹೆಚ್ಚು ನೀರು ಹರಿದು ಬಂದಿತ್ತು. ಜಲಾಶಯ ಭರ್ತಿಗೆ ಕೇವಲ 1.7 ಅಡಿ ಮಾತ್ರ ಬರಬೇಕಿದ್ದು, ಭದ್ರಾ ಡ್ಯಾಂ ಭರ್ತಿಯಾದಂತೆ. ಇನ್ನು ಭದ್ರಾ ಜಲಾಶಯವು ಆಗಸ್ಟ್ 15ರೊಳಗೆ ಭರ್ತಿಯಾಗುತ್ತಿರುವುದು ಎಲ್ಲರ ಸಂತಸಕ್ಕೆ ಕಾರಣವಾಗಿದೆ. ಈ ಮುಂಗಾರು ಬೆಳೆಗೆ ನೀರು ಸಹ ಹರಿಸಲಾಗುತ್ತಿದೆ. ಇದು ಭತ್ತ ಬೆಳೆಗಾರರಿಗೂ ಸಂತಸ ಕೊಟ್ಟಿದೆ.
ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ
Date:13_08_2025
ಇಂದಿನ ನೀರಿನ ಮಟ್ಟ: 184.1 ಅಡಿ
ಒಳ ಹರಿವು: 11,007 ಕ್ಯೂಸೆಕ್
ಹೊರ ಹರಿವು: 6215 ಕ್ಯೂಸೆಕ್
ಕಳೆದ ವರ್ಷ ಇದೇ ದಿನ ನೀರಿನ ಮಟ್ಟ: 180.1 ಅಡಿ
ಕೆಪಾಸಿಟಿ: 64.328
ಜಲಾಶಯದ ಗರಿಷ್ಠ ಮಟ್ಟ: 186 ಅಡಿ