ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಭದ್ರಾ ಡ್ಯಾಂ (Bhadra Dam)ನಿಂದ 37226 ಕ್ಯೂಸೆಕ್ ಹೊರಕ್ಕೆ: ಭದ್ರಾವತಿಯಲ್ಲಿ ಪ್ರವಾಹ, ಎಚ್ಚರ ವಹಿಸುವಂತೆ ಸೂಚನೆ

On: July 28, 2025 9:36 AM
Follow Us:
Bhadra Dam
---Advertisement---

SUDDIKSHANA KANNADA NEWS/ DAVANAGERE/ DATE:28_07_2025

ದಾವಣಗೆರೆ: ಭದ್ರಾ ಜಲಾನಯನ ಪ್ರದೇಶದಲ್ಲಿ ತುಸು ಮಳೆ ಕಡಿಮೆಯಾಗಿದೆ. ಭದ್ರಾ ಡ್ಯಾಂ(Bhadra Dam)ಗೆ ಬರುತ್ತಿದ್ದಒಳಹರಿವಿನ ಪ್ರಮಾಣ ಎರಡೂವರೆ ಸಾವಿರ ಕ್ಯೂಸೆಕ್ ಕಡಿಮೆಯಾಗಿದೆ. ಕ್ರಸ್ಟ್ ಗೇಟ್ ಮೂಲಕ 32515 ಕ್ಯೂಸೆಕ್ ನೀರು ಹೊರಗಡೆ ಬಿಡಲಾಗುತ್ತಿದೆ. ಈ ಸೌಂದರ್ಯ ಕಣ್ತುಂಬಿಕೊಳ್ಳಲು ಜನರ ದಂಡು ಆಗಮಿಸುತ್ತಿದ್ದು, ಹತ್ತಿರ ಹೋಗದಂತೆ ಎಚ್ಚರಿಕೆ ನೀಡಲಾಗಿದೆ.

READ ALSO THIS STORY: ಚನ್ನಗಿರಿಯಲ್ಲಿ ಗಂಡನಿಗೆ ಮಕ್ಕಳಾಗಲ್ಲವೆಂದು ಪ್ರಿಯಕರನ ಸಂಗ: ಪತಿ ಕೊಂದು ಆತ್ಮಹತ್ಯೆಯಂತೆ ಬಿಂಬಿಸಿದ್ದ ಪತ್ನಿ, ಪ್ರಿಯಕರ ಸೇರಿ ಮೂವರ ಬಂಧಿಸಿದ್ದೇ ರೋಚಕ!

ಭದ್ರಾ ಡ್ಯಾಂಗೆ ಭಾನುವಾರ 39017 ಕ್ಯೂಸೆಕ್ ಒಳಹರಿವಿದ್ದು, ಅಷ್ಟೇ ಪ್ರಮಾಣದಲ್ಲಿ ಜಲಾಶಯದಿಂದ ನೀರು ಹೊರಗಡೆ ಬಿಡಲಾಗುತ್ತಿತ್ತು. ಜಲಾಶಯದ ಇಂದಿನ ನೀರಿನ ಮಟ್ಟ 180.6 ಅಡಿ ಇದೆ. ಜಲಾಶಯ ಭರ್ತಿಗೆ
ಕೇವಲ 5. 4 ಅಡಿ ಮಾತ್ರ ಬೇಕು. ಜಲಾಶಯಕ್ಕೆ ಸುಮಾರು 37 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ಹರಿದು ಬರುತ್ತಿದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ ಅಷ್ಟೇ ನೀರು ಹೊರಗಡೆ ಬಿಡಲಾಗುತ್ತಿದೆ.

ಪ್ರವಾಹದ ಭೀತಿ ತಲೆದೋರಿದ್ದು, ಮುನ್ನೆಚ್ಚರಿಕಾ ವಹಿಸುವಂತೆ ನದಿ ಪಾತ್ರ ಹಾಗೂ ಜಲಾಶಯದ ನಾಲೆಗಳ ಸುತ್ತಮುತ್ತಲಿನ ಪ್ರದೇಶದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.

ಶನಿವಾರ ಡ್ಯಾಂಗೆ 21,568 ಕ್ಯೂಸೆಕ್ ಒಳಹರಿವಿತ್ತು. ಅಷ್ಟೇ ಪ್ರಮಾಣದಲ್ಲಿ ಹೊರ ಹರಿವು ಇತ್ತು. ಭಾನುವಾರ ಇದು ದುಪ್ಪಟ್ಟಾಗಿತ್ತು. ಆದ್ರೆ, ಇಂದು ಸ್ವಲ್ಪ ತಗ್ಗಿದೆ.

ಜಲಾಶಯದ ಇಂದಿನ ನೀರಿನ ಮಟ್ಟ 180.6 ಅಡಿ ಇದ್ದು, ಕಳೆದ ವರ್ಷ ಇದೇ ದಿನ ಭದ್ರಾ ಡ್ಯಾಂ ನೀರಿನ ಮಟ್ಟ 180.7 ಅಡಿ ಸಂಗ್ರಹ ಇತ್ತು.

ಭದ್ರಾ ಡ್ಯಾಂ ಇತಿಹಾಸದಲ್ಲೇ ಮೊದಲ ಬಾರಿಗೆ ಜುಲೈ ಅಂತ್ಯದಲ್ಲೇ ಅತಿ ಹೆಚ್ಚು ನೀರು ಹರಿದು ಬಂದಿದೆ. ಜಲಾಶಯ ಭರ್ತಿಗೆ ಕೇವಲ 5.4 ಅಡಿ ನೀರು ಬರಬೇಕಷ್ಟೇ. ಹೆಚ್ಚು ಕಡಿಮೆ ಭದ್ರಾ ಡ್ಯಾಂ ತುಂಬಿದಂತೆಯೇ.

ಭದ್ರಾ ಜಲಾಶಯದ ನೀರಿನ ಮಟ್ಟ

Date:28_07_2025

ಇಂದಿನ ನೀರಿನ ಮಟ್ಟ: 180.6 ಅಡಿ

ಒಳ ಹರಿವು: 37226 ಕ್ಯೂಸೆಕ್

ಹೊರ ಹರಿವು: 37226ಕ್ಯೂಸೆಕ್

ಕಳೆದ ವರ್ಷ ಇದೇ ದಿನ ನೀರಿನ ಮಟ್ಟ: 180.7 ಅಡಿ

ಕೆಪಾಸಿಟಿ: 64.877 ಟಿಎಂಸಿ

ಜಲಾಶಯದ ಗರಿಷ್ಠ ಮಟ್ಟ: 186 ಅಡಿ

 

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment