ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಭದ್ರಾ ಡ್ಯಾಂ (Bhadra Dam) ಭರ್ತಿಗೆ ಇನ್ನು ಕೇವಲ 6.4 ಅಡಿ ಮಾತ್ರ ಬಾಕಿ: ಒಳಹರಿವು ಹೆಚ್ಚಳ

On: July 23, 2025 9:04 AM
Follow Us:
Bhadra Dam
---Advertisement---

SUDDIKSHANA KANNADA NEWS/ DAVANAGERE/ DATE:23_07_2025

ದಾವಣಗೆರೆ: ಜುಲೈ ತಿಂಗಳಿನಲ್ಲಿ ಭದ್ರಾ ಡ್ಯಾಂ (BHADRA DAM) ಗೆ ಹೆಚ್ಚಿನ ನೀರು ಹರಿದು ಬಂದಿದೆ. ಭದ್ರಾ ಜಲಾನಯನ ಮತ್ತು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವರುಣಾರ್ಭಟ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಜಲಾಶಯಕ್ಕೆ ಬರುತ್ತಿದ್ದ ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ. ಡ್ಯಾಂ ಭರ್ತಿಗೆ ಇನ್ನು ಕೇವಲ 6.4 ಅಡಿ ಮಾತ್ರ ಬೇಕು.

READ ALSO THIS STORY: ದಾವಣಗೆರೆಯಲ್ಲಿ ಮನೆ ಬಾಗಿಲಿಗೆ ರಾತ್ರಿ ಬಂದ ಎಸ್ಪಿ ಉಮಾ ಪ್ರಶಾಂತ್: ಆಮೇಲೇನಾಯ್ತು?

ಕಳೆದ ಕೆಲ ದಿನಗಳಿಂದ ಮಳೆ ಕಡಿಮೆಯಾಗಿದೆ. ಶಿವಮೊಗ್ಗದ ಕಾಡಾ ಕಚೇರಿಯಲ್ಲಿ ನಡೆದ ಸಿಇಸಿ ಸಭೆಯಲ್ಲಿ ಭದ್ರಾ ಡ್ಯಾಂನಿಂದ ಬಲದಂಡೆ ನಾಲೆಗೆ ನೀರು ಹರಿಸಲು ನಿರ್ಧರಿಸಲಾಗಿದ್ದು, ಜಲಾಶಯದಿಂದ ನೀರು ಹೊರ ಬಿಡಲಾಗುತ್ತಿದೆ.

ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ 179.6 ಅಡಿ ಇದ್ದರೆ, ಒಳಹರಿವು 9398 ಕ್ಯೂಸೆಕ್ ಇದ್ದರೆ, ಹೊರ ಹರಿವು 7118 ಕ್ಯೂಸೆಕ್ ಇದೆ. ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 168.2 ಇತ್ತು. ಕಳೆದ ವರ್ಷದ ಇದೇ ದಿನಕ್ಕೆ
ಹೋಲಿಸಿದರೆ ಇಂದು ಡ್ಯಾಂನಲ್ಲಿ 11.2 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿದೆ.

ಭದ್ರಾ ಡ್ಯಾಂ ಭರ್ತಿಯಾಗಲು ಕೇವಲ ಇನ್ನು 6.4 ಅಡಿ ಮಾತ್ರ ಬೇಕಿರುವುದರಿಂದ ನೀು ಹೊರ ಹರಿಸಲಾಗುತ್ತಿದೆ. ಕಳೆದ ಎರಡು ತಿಂಗಳಿನಿಂದ ಅಬ್ಬರಿಸಿ ಬೊಬ್ಬಿರಿದ ವರುಣಾರ್ಭಟಕ್ಕೆ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು
ಬಂದಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಕುಂಠಿತವಾಗಿದ್ದು, ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ.

ಭದ್ರಾ ಜಲಾಶಯಕ್ಕೆ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಜುಲೈ ತಿಂಗಳಿನಲ್ಲಿ ಹರಿದು ಬಂದಿದೆ. ಜಲಾಶಯ ಭರ್ತಿಗೆ ಇನ್ನು ಕೇವಲ 6.4 ಅಡಿ ನೀರು ಬೇಕಿದೆ.

ಕಳೆದ ಕೆಲವು ದಿನಗಳಿಂದ ಮಳೆ ಕುಂಠಿತವಾಗಿದ್ದು, ಜಲಾಶಯಕ್ಕೆ ಬರುತ್ತಿರುವ ಒಳಹರಿವು ಕಡಿಮೆಯಾಗಿತ್ತು. ಇನ್ನು ಈ ತಿಂಗಳು ಹದಿನೈದು ದಿನಗಳಿದ್ದು, ಮಳೆ ಆರ್ಭಟಿಸಲು ಶುರು ಮಾಡಿದರೆ ಭರ್ತಿ ಖಚಿತ. ಭದ್ರಾ ಜಲಾಶಯಕ್ಕೆ ಇಷ್ಟೊಂದು ಪ್ರಮಾಣದಲ್ಲಿ ನೀರು ಸಂಗ್ರಹವಾಗಿರುವುದರಿಂದ ರೈತರಲ್ಲಿ ಆಶಾಭಾವನೆ ಮೂಡಿದೆ. ಆದ್ರೆ, ವರುಣ ದೇವ ಅಬ್ಬರಿಸಿ ಬೊಬ್ಬಿರಿದರೆ ಪ್ರವಾಹದ ಭೀತಿಯೂ ಶುರುವಾಗಲಿದೆ.

ಭದ್ರಾ ಜಲಾಶಯದ ನೀರಿನ ಮಟ್ಟ

Date:23_07_2025

ಇಂದಿನ ನೀರಿನ ಮಟ್ಟ: 179.6 ಅಡಿ

ಒಳ ಹರಿವು: 9398 ಕ್ಯೂಸೆಕ್

ಹೊರ ಹರಿವು: 7118 ಕ್ಯೂಸೆಕ್

ಕಳೆದ ವರ್ಷ ಇದೇ ದಿನ ನೀರಿನ ಮಟ್ಟ: 168.2 ಅಡಿ

ಕೆಪಾಸಿಟಿ: 50.959 ಟಿಎಂಸಿ

ಜಲಾಶಯದ ಗರಿಷ್ಠ ಮಟ್ಟ: 186 ಅಡಿ

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment