SUDDIKSHANA KANNADA NEWS/ DAVANAGERE/ DATE:03-09-2023
ದಾವಣಗೆರೆ: ದಿನಕಳೆದಂತೆ ಭದ್ರಾ ಜಲಾಶಯ (Bhadra Dam)ದ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಡ್ಯಾಂನಿಂದ ಈಗಾಗಲೇ ಭದ್ರಾ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹೊರ ಬಿಡಲಾಗುತ್ತಿದೆ. ಈ ವರ್ಷ 167 ಗಡಿ ಮುಟ್ಟಿದ್ದ ಭದ್ರಾ ಜಲಾಶಯದ ನೀರಿನ ಮಟ್ಟ ಕಡಿಮೆಯಾಗುತ್ತಲೇ ಇದೆ.
ಈ ಬಾರಿ ಮುಂಗಾರು ಮಳೆ ಕೈ ಕೊಟ್ಟಿದೆ. ಜುಲೈ ತಿಂಗಳಿನಲ್ಲಿ ಉತ್ತಮ ಮಳೆಯಾಗಿದ್ದು ಬಿಟ್ಟರೆ ಮತ್ತೆ ಮಳೆಯಾಗಲಿಲ್ಲ. ಆಗೊಮ್ಮೆ ಈಗೊಮ್ಮೆ ಅಂತಾ ಬಂದಿದೆ. ಆದ್ರೆ, ಬೆಳೆಯು ಒಣಗುತ್ತಿವೆ. ಭದ್ರಾ ಜಲಾಶಯ (Bhadra Dam) ಈ ಬಾರಿ ತುಂಬುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಸೆಪ್ಟಂಬರ್ ತಿಂಗಳಿನಲ್ಲಿ ವರುಣ ಅಬ್ಬರಿಸಿದರೆ ತುಂಬುವ ಸಾಧ್ಯತೆ ಇದೆ ಅಷ್ಟೇ. ಮಳೆ ಬಾರದಿದ್ದರೆ ನೀರಿನ ಮಟ್ಟ ಮತ್ತಷ್ಟು ಕುಸಿಯುವ ಭೀತಿ ಎದುರಾಗಿದೆ.
ಈ ಸುದ್ದಿಯನ್ನೂ ಓದಿ:
Explosive Detection Expertise: ಬೆರಗಾಗುವಂಥ ಟ್ರ್ಯಾಕ್ ರೆಕಾರ್ಡ್: ಸ್ಫೋಟಕ ಪತ್ತೆ, ವಿಧ್ವಂಸಕ ಕೃತ್ಯ ತಡೆ, ಪ್ರಧಾನಿ ಭೇಟಿ ಸ್ಥಳ ತಪಾಸಣೆ ನಿಪುಣೆ ಸೌಮ್ಯ ಈಗ ನೆನಪಷ್ಟೇ……!
ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿಲ್ಲ. ಭದ್ರಾ ಡ್ಯಾಂಗೆ (Bhadra Dam) ಬರುತ್ತಿರುವ ಒಳಹರಿವಿನ ಪ್ರಮಾಣವೂ ಅಷ್ಟಕಷ್ಟೇ. ಒಳಹರಿವು ಕೇವಲ 388 ಕ್ಯೂಸೆಕ್ ಇದೆ. ಈ ನೀರು ವೆಸ್ಟೇಜ್ ಗೆ ಸಾಕಾಗುವುದಿಲ್ಲ. ಸಂಗ್ರಹವಾಗಿದ್ದ ನೀರು ದಿನ ಕಳೆದಂತೆ ಕಡಿಮೆಯಾಗುತ್ತಲೇ ಇದೆ. ಭದ್ರಾ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಿಸುವಿಕೆ ನಿಲ್ಲಿಸಿಲ್ಲ.
ಕಳೆದ ವರ್ಷ ಇದೇ ದಿನ 185.5 ಅಡಿ ನೀರು ಇತ್ತು. ಆದ್ರೆ, ಈ ವರ್ಷ ಇನ್ನು ಡ್ಯಾಂ ತುಂಬಲು ಇನ್ನು 23.4 ಅಡಿ ನೀರು ಬರಬೇಕಿದೆ. ಕಳೆದೊಂದು ತಿಂಗಳಿನಿಂದ ಮಳೆಯೇ ಸುರಿದಿಲ್ಲ.
167 ಅಡಿ ನೀರು ಸಂಗ್ರಹವಾದಾಗ ನಿಟ್ಟುಸಿರು ಬಿಟ್ಟಿದ್ದ ರೈತಾಪಿ ಮೊಗದಲ್ಲಿ ಮತ್ತೆ ಕಾರ್ಮೋಡ ಕವಿದಿದೆ. ಇಂದು ಭದ್ರಾ ಡ್ಯಾಂ(Bhadra Dam)ನ ನೀರಿನ ಮಟ್ಟ 163.6 ಅಡಿ ಆಗಿದೆ. ನಾಲೆಗಳಲ್ಲಿ ನೀರು ಹರಿಸುವಿಕೆ ಆರಂಭವಾದ ಬಳಿಕ ಡ್ಯಾಂನ ನೀರು 3.4 ಅಡಿ ಕಡಿಮೆಯಾಗಿದೆ. ಮಳೆಯಾಗದೇ ಇದೇ ರೀತಿ ನೀರು ಹರಿಸಿದರೆ ಮತ್ತಷ್ಟು ನೀರು ಖಾಲಿಯಾಗುತ್ತದೆ. ಭದ್ರಾ ಡ್ಯಾಂನ ನೀರಿನ ಸಂಗ್ರಹ ಕುಂಠಿತವಾದರೆ ಬೇಸಿಗೆ ಬೆಳೆಗಳಿಗೆ ನೀರು ಸಿಗುವುದು ಕಷ್ಟವಾಗುತ್ತದೆ.
ಸೆಪ್ಟಂಬರ್ ತಿಂಗಳಿನಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಆಗಸ್ಟ್ ಕೊನೆ ವಾರ ಸೆಪ್ಟಂಬರ್ ಮೊದಲನೇ ವಾರದಲ್ಲಿ ಮಳೆಯಾಗಬಹುದು ಎಂದಿದ್ದರು. ಆದ್ರೆ, ಮಳೆ ಸುರಿಯುವ ಲಕ್ಷಣ ಗೋಚರಿಸುತ್ತಿಲ್ಲ. ಮಳೆಯಾಗುವುದನ್ನೂ ತಳ್ಳಿ ಹಾಕುವಂತಿಲ್ಲ. ಮಳೆಯಾಗದಿದ್ದರೆ ಈ ಬಾರಿ ಡ್ಯಾಂ ತುಂಬುವುದು ಕಷ್ಟವೇ.
ಸದ್ಯಕ್ಕೆ 3224 ಕ್ಯೂಸೆಕ್ ನೀರನ್ನು ಭದ್ರಾ ಡ್ಯಾಂನಿಂದ ಹೊರಬಿಡಲಾಗುತ್ತಿದೆ. ಇಂದು ಬೆಳಿಗ್ಗೆ ಆರು ಗಂಟೆಯ ಹೊತ್ತಿಗೆ ಭದ್ರಾ ಡ್ಯಾಂನಲ್ಲಿ ಸಂಗ್ರಹವಾಗಿರುವ ನೀರು 163.6 ಅಡಿ. ಹೊರ ಹರಿವು ಇರುವ ಕಾರಣ ನೀರಿನ ಸಂಗ್ರಹ ಕಡಿಮೆ
ಆಗಲಿದೆ.
ಭದ್ರಾ ಡ್ಯಾಂ (Bhadra Dam) ನೀರಿನ ಮಟ್ಟ:
- ಭದ್ರಾ ಡ್ಯಾಂ ನೀರಿನ ಒಟ್ಟು ಸಂಗ್ರಹ: 186 ಅಡಿ
- ದಿನಾಂಕ:03- 09 -2023
- ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ: 163.6 ಅಡಿ
- ಕೆಪಾಸಿಟಿ: 46.250 ಟಿಎಂಸಿ
- ಒಳಹರಿವು: 388 ಕ್ಯೂಸೆಕ್
- ಒಟ್ಟು ಹೊರಹರಿವು: 3224 ಕ್ಯೂಸೆಕ್
- ಕಳೆದ ವರ್ಷ ಇದೇ ದಿನ: 185.5 ಅಡಿ
- ಕೆಪಾಸಿಟಿ: 70.802 ಟಿಎಂಸಿ