ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Bhadra Dam167 ಅಡಿ ದಾಟಿದ ಭದ್ರಾ ಡ್ಯಾಂ: ಹೊರ ಹರಿವು ಎಷ್ಟಿದೆ ಗೊತ್ತಾ.. ಜಲಾಶಯ ತುಂಬಲು ಬೇಕು 19 ಅಡಿ: ಒಳ, ಹೊರ ಹರಿವು ಎಷ್ಟಿದೆ ಗೊತ್ತಾ…? 

On: August 12, 2023 4:28 AM
Follow Us:
Bhadra Dam Today Water Level
---Advertisement---

SUDDIKSHANA KANNADA NEWS/ DAVANAGERE/ DATE:12-08-2023

ದಾವಣಗೆರೆ: ಭದ್ರಾ ಅಚ್ಚುಕಟ್ಟುದಾರರಿಗೆ ಭದ್ರಾ ಡ್ಯಾಂ (Bhadra Dam)ನಿಂದ ನೀರು ಹರಿಸಲಾಗುತ್ತಿದೆ. ಕಳೆದ ಮೂರು ದಿನಗಳಿಂದ ಹೊರಗೆ ನೀರು ಬಿಡುತ್ತಿದ್ದರೂ ಜಲಾಶಯದ ನೀರಿನ ಮಟ್ಟ 167 ಅಡಿ ತಲುಪಿದೆ.

ಕಳೆದ ಹತ್ತು ದಿನಗಳಿಂದ ಭದ್ರಾ ಜಲಾನಯನ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಕುಂಠಿತಗೊಂಡಿದೆ. ಡ್ಯಾಂ ತುಂಬಲು ಇನ್ನು 19 ಅಡಿ ಬೇಕು. ಭದ್ರಾ ಡ್ಯಾಂಗೆ ಹರಿದು ಬರುತ್ತಿರುವ ನೀರು ಸಹ ದಿನಕಳೆದಂತೆ ಕಡಿಮೆಯಾಗುತ್ತಿದೆ. ಈ ನಡುವೆ ಜಲಾಶಯದಿಂದ ನೀರು ಹೊರ ಬಿಡುತ್ತಿರುವುದರಿಂದ ನೀರಿನ ಸಂಗ್ರಹವೂ ಇಳಿಕೆಯಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಡ್ಯಾಂ ತುಂಬದಿದ್ದರೂ 167 ಅಡಿ ದಾಟಿರುವುದು ರೈತರ ಖುಷಿಗೂ ಕಾರಣವಾಗಿದೆ.

ಈ ಸುದ್ದಿಯನ್ನೂ ಓದಿ: 

HARIHARA MLA B.P. HARISH ANGRY: ಬೆಸ್ಕಾಂ ಎಂಡಿ ಮಹಾಂತೇಶ್ ಬೀಳಗಿ ವಿರುದ್ಧ ಬೆಂಕಿಯುಗುಳಿದ ಬಿಜೆಪಿ ಶಾಸಕ ಬಿ. ಪಿ. ಹರೀಶ್…!

 

ಭದ್ರಾ ಡ್ಯಾಂ (Bhadra Dam) ನೀರಿನ ಮಟ್ಟ 167 ಅಡಿ ತಲುಪಿದೆ. ಭದ್ರಾ ಡ್ಯಾಂಗೆ ಬರುತ್ತಿರುವ ಒಳಹರಿವಿನ ಪ್ರಮಾಣವೂ ಇಳಿಕೆಯಾಗಿದೆ. ಇಂದು ಬೆಳಿಗ್ಗೆ ಆರು ಗಂಟೆಯ ಹೊತ್ತಿಗೆ ಡ್ಯಾಂ ನೀರಿನ ಮಟ್ಟ 167 ಅಡಿ ಇದೆ. ಒಳಹರಿವು 2702 ಕ್ಯೂಸೆಕ್ ಇದೆ. ಹೊರ ಹರಿವು 1718 ಕ್ಯೂಸೆಕ್ ಇದೆ.

ಕಳೆದ ವರ್ಷ ಇದೇ ದಿನ ಡ್ಯಾಂ ನೀರಿನ ಮಟ್ಟ 184 ಅಡಿ ಇತ್ತು. ಆದ್ರೆ, ಈ ವರ್ಷ ಇನ್ನು ಡ್ಯಾಂ ತುಂಬಲು ಬೇಕಿರುವುದು ಕೇವಲ 19 ಅಡಿ ಮಾತ್ರ. ನಿನ್ನೆ ಇದ್ದಷ್ಟೇ ಹೆಚ್ಚು ಕಡಿಮೆ ಒಳಹರಿವು ಇಂದು ಇದೆ.

ಭದ್ರಾ ಅಚ್ಚುಕಟ್ಟುದಾರರಿಗೆ ನೀರು ಹರಿಸಲಾಗುತ್ತಿದೆ. ನೀರಾವರಿ ಇಲಾಖೆಯ ಅಧಿಕಾರಿಗಳು ಸಹ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರೂ ಹೊರ ಹರಿವು ಇನ್ನೂ ಸ್ವಲ್ಪ ಹೆಚ್ಚಾಗಬಹುದು.

ಆಗಸ್ಟ್ ತಿಂಗಳ ಕೊನೆಯಲ್ಲಿ ಮಳೆ ಆರ್ಭಟಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸೆಪ್ಟಂಬರ್ ಮೊದಲ ವಾರದಲ್ಲಿಯೂ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ನೀಡಿದ್ದಾರೆ. ಒಳಹರಿವು ಹೆಚ್ಚಾದರೆ ಮಾತ್ರ ಡ್ಯಾಂ ತುಂಬಲಿದೆ. ಮಳೆ ಬಾರದಿದ್ದರೆ ಡ್ಯಾಂ ಪೂರ್ಣ ಪ್ರಮಾಣದಲ್ಲಿ ತುಂಬುವುದಿಲ್ಲ ಎಂಬ ಆತಂಕವೂ ರೈತಾಪಿ ವರ್ಗದಲ್ಲಿದೆ.

ಭದ್ರಾ ಡ್ಯಾಂ (Bhadra Dam) ನೀರಿನ ಮಟ್ಟ

  • ಭದ್ರಾ ಡ್ಯಾಂ ನೀರಿನ ಒಟ್ಟು ಸಂಗ್ರಹ: 186 ಅಡಿ
  • ದಿನಾಂಕ:11- 08 -2023
  • ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ: 167 ಅಡಿ
  • ಎಂಎಸ್ ಎಲ್ : 2139. Ft
  • ಕೆಪಾಸಿಟಿ: 49.753 Tmc
  • ಒಳಹರಿವು: 2702 ಕ್ಯೂಸೆಕ್
  • ಒಟ್ಟು ಹೊರಹರಿವು: 1718 ಕ್ಯೂಸೆಕ್
  • ಕಳೆದ ವರ್ಷ ಇದೇ ದಿನ: 184
  • ಕೆಪಾಸಿಟಿ: 68.035 Tmc

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment